ಕರ್ನಾಟಕ

karnataka

ETV Bharat / state

ಹುಬ್ಬಳ್ಳಿ ಈದ್ಗಾ ಮೈದಾನದ ಗಣೇಶಮೂರ್ತಿ ಅದ್ಧೂರಿ ವಿಸರ್ಜನೆ: ಕುಣಿದು ಕುಪ್ಪಳಿಸಿದ ಜನ - ganesha idol lavishly dissolved - GANESHA IDOL LAVISHLY DISSOLVED

ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಜಾನನ ಉತ್ಸವ ಮಹಾ ಮಂಡಳಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯನ್ನು ಇಂದು ಅದ್ದೂರಿಯಾಗಿ ವಿಸರ್ಜನೆ ಮಾಡಲಾಯಿತು.

ಗಣೇಶಮೂರ್ತಿ ಅದ್ದೂರಿ ವಿಸರ್ಜನೆ
ಗಣೇಶಮೂರ್ತಿ ಅದ್ದೂರಿ ವಿಸರ್ಜನೆ (ETV Bharat)

By ETV Bharat Karnataka Team

Published : Sep 9, 2024, 8:11 PM IST

Updated : Sep 9, 2024, 9:17 PM IST

ಗಣೇಶಮೂರ್ತಿ ಅದ್ದೂರಿ ವಿಸರ್ಜನೆ (ETV Bharat)

ಹುಬ್ಬಳ್ಳಿ: ಈದ್ಗಾ ಮೈದಾನದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶನಮೂರ್ತಿಯನ್ನು ಅದ್ಧೂರಿ ಮೆರವಣಿಗೆಯೊಂದಿಗೆ ಸಾಗಿ ವಿಸರ್ಜನೆ ಮಾಡಲಾಯಿತು.

ಈದ್ಗಾ ಮೈದಾನದಿಂದ ಆರಂಭವಾದ ಮೆರವಣಿಗೆ ಹಳೇ ಬಸ್ ನಿಲ್ದಾಣ ಮೂಲಕ ನಗರದ ಇಂದಿರಾಗಾಜಿನ ಮನೆಯವರೆಗೆ ಸಾಗಿತು. ಪಂಚವಾದ್ಯ ಡೋಲು, ಝಾಂಜ್ ಮೇಳ, ಡಿಜೆ ಮೆರವಣಿಗೆಗೆ ಮೆರಗು ತಂದವು. ರಸ್ತೆ ಉದ್ದಕ್ಕೂ ಭಗವಾಧ್ವಜ, ಕೇಸರಿ ಬಾವುಟಗಳು ರಾರಾಜಿಸಿದವು. ಯುವಕ, ಯುವತಿಯರು ಡಿಜೆ ಹಾಡಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.

ಮೆರವಣಿಗೆಯಲ್ಲಿ ಎಂಎಲ್​ಸಿ ಸಿ.ಟಿ. ರವಿ, ಶಂಕರ್ ಪಾಟೀಲ್ ಮುನೇನಕೊಪ್ಪ, ಶಾಸಕರಾದ ಮಹೇಶ್ ಟೆಂಗಿನಕಾಯಿ, ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್, ಪಾಲಿಕೆ ಮೇಯರ್ ರಾಮಣ್ಣ ಬಡಿಗೇರ, ಮಾಜಿ ಶಾಸಕ ಅಶೋಕ ಕಾಟವೆ, ಪಾಲಿಕೆ ಸದಸ್ಯರಾದ ರಾಜಣ್ಣಾ ಕೊರವಿ, ಸಂತೋಷ್ ಚವ್ಹಾನ್, ಸಂಜಯ್ ಬಡಸ್ಕರ್, ಡಾ. ವಿ‌.ಎಸ್.ವಿ ಪ್ರಸಾದ್ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.

ಪೊಲೀಸ್ ಬಂದೋಬಸ್ತ್:ವಿಸರ್ಜನಾ ಮೆರವಣಿಗೆ ಹಿನ್ನೆಲೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಸಾವಿರಾರು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಮೆರವಣಿಗೆ ಸಾಗಿದ ಮಾರ್ಗದಲ್ಲಿ ಸಿಸಿಟಿವಿ ಕ್ಯಾಮರಾಗಳನ್ನೂ ಅಳವಡಿಸಲಾಗಿತ್ತು.

ಪರದಾಡಿದ ಪ್ರಯಾಣಿಕರು: ಗಣೇಶಮೂರ್ತಿ ವಿಸರ್ಜನಾ ಮೆರವಣಿಗೆ ಹಿನ್ನೆಲೆ ಸುಮಾರು 4 ಗಂಟೆಗೂ ಅಧಿಕ ಕಾಲ ಚೆನ್ನಮ್ಮ ವರ್ತುಲ ಬಳಿ ಸಂಚಾರ ಅಸ್ತವ್ಯಸ್ತಗೊಂಡಿದ್ದರಿಂದ ಪ್ರಯಾಣಿಕರು ಪರದಾಡಿದರು.

ಇದನ್ನೂ ಓದಿ:ಸೌಹಾರ್ದತೆಗೆ ಸಾಕ್ಷಿಯಾದ ಮಂಗಳೂರಿನ ಸಂಘನಿಕೇತನದ ಗಣೇಶೋತ್ಸವ: ಕ್ರಿಶ್ಚಿಯನ್ ಬಾಂಧವರಿಂದ ಪೂಜೆ - harmony in Ganeshotsav

Last Updated : Sep 9, 2024, 9:17 PM IST

ABOUT THE AUTHOR

...view details