ಹಾಸನ: ಲೋಕಸಭಾ ಚುನಾವಣೆಯಲ್ಲಿ 2 ಲಕ್ಷ ಅಂತರದಿಂದ ಪ್ರಜ್ವಲ್ ರೇವಣ್ಣ ಗೆಲ್ಲಬೇಕಿತ್ತು. ಆದರೆ ಕೆಲವರ ಕುತಂತ್ರದಿಂದ ಸೋಲು ಅನುಭವಿಸಬೇಕಾಯಿತು. ಮುಂದಿನ ದಿನಗಳಲ್ಲಿ ಬಡ್ಡಿ ಸಮೇತ ತೀರಿಸುವ ಕಾಲ ಹತ್ತಿರದಲ್ಲಿದೆ" ಎಂದು ಹೆಚ್.ಡಿ. ರೇವಣ್ಣ ಎದುರಾಳಿಗೆ ಟಾಂಗ್ ನೀಡಿದರು.
ಹಾಸನದ ಆಲೂರಿನಲ್ಲಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, "ದೇವೇಗೌಡರ ಕುಟುಂಬ ಇಂತಹ ನೂರಾರು ತನಿಖೆ ಎದುರಿಸಿ ಗೆದ್ದಿದೆ. ದೇವೇಗೌಡರು ನಂಬಿದ ಕೆಲವು ಮುಖಂಡರು ಬೆನ್ನಿಗೆ ಚಾಕು ಹಾಕಿದ್ದಾರೆ. ಅದರಲ್ಲಿ ಸಣ್ಣ ಒಂದೂ ಚುನಾವಣೆ ಎದುರಿಸದ ಹೆಚ್.ಕೆ. ಜವರೇಗೌಡ ಅವರನ್ನು ರಾಜ್ಯಸಭೆ ಸದಸ್ಯರಾಗಿ ಮಾಡಲಾಗಿತ್ತು. ಅವರು ಏನು ಮಾಡಿದರು? ಈಗ ಎಲ್ಲಿದ್ದಾರೆ? ಇರುವ ಪಕ್ಷದಲ್ಲಿ ಏನು ಮಾಡ್ತಿದ್ದಾರೆ ಎಂದು ನಿಮಗೆ ಗೊತ್ತಿದೆ" ಎಂದರು.