ಕರ್ನಾಟಕ

karnataka

ETV Bharat / state

ಆನ್​ಲೈನ್​ಲ್ಲಿ ಆರ್ಡರ್​ ಮಾಡಿದ್ದ ಐಸ್​ಕ್ರೀಮ್​​ನಲ್ಲಿ ಮಾನವನ ಬೆರಳು ಪತ್ತೆ! - Human finger found in ice cream - HUMAN FINGER FOUND IN ICE CREAM

ಆನ್​ಲೈನ್​ ಅಪ್ಲಿಕೇಶನ್​ ಮೂಲಕ ತರಿಸಿದ್ದ ಐಸಿಕ್ರೀಮ್​ನಲ್ಲಿ ಮಾನವನ ಬೆರಳು ಪತ್ತೆಯಾಗಿರುವ ಘಟನೆ ಮುಂಬೈನಲ್ಲಿ ನಡೆದಿದೆ.

ಐಸ್​ಕ್ರೀಮ್​​ನಲ್ಲಿ ಮನಷ್ಯನ ಬೆರಳು ಪತ್ತೆ
ಐಸ್​ಕ್ರೀಮ್​​ನಲ್ಲಿ ಮನಷ್ಯನ ಬೆರಳು ಪತ್ತೆ (ETV Bharat)

By ETV Bharat Karnataka Team

Published : Jun 13, 2024, 1:03 PM IST

ಮುಂಬೈ : ಆನ್​ಲೈನ್​ನಲ್ಲಿ ಆರ್ಡರ್​ ಮಾಡಿದ್ದ ಐಸ್​​ಕ್ರೀಮ್​ನಲ್ಲಿ ಮಾನವನ ಬೆರಳು ಪತ್ತೆಯಾಗಿರುವ ಅಘಾತಕಾರಿ ಘಟನೆ ವಾಣಿಜ್ಯನಗರಿ ಮುಂಬೈನ ಮಲಾಡ್​ ಎಂಬಲ್ಲಿ ನಡೆದಿದೆ. ಘಟನೆ ಸಂಬಂಧ ಮಹಿಳಾ ಗ್ರಾಹಕಿ ಮಲಾಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಸಿದ್ದು, ಯಮ್ಮೋ ಐಸ್​ಕ್ರೀಮ್​ ಕಂಪನಿ ವಿರುದ್ಧ ಐಪಿಸಿ ಸೆಕ್ಷನ್​ 272, 273 ಮತ್ತು 336ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಜತೆಗೆ ಐಸಿಕ್ರೀಮ್​ ಮತ್ತು ಅದರಲ್ಲಿ ಪತ್ತೆಯಾದ ಬೆರಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಹಿರಿಯ ಪೊಲೀಸ್ ನಿರೀಕ್ಷಕ ರವೀಂದ್ರ ಅದಾನೆ ತಿಳಿಸಿದ್ದಾರೆ.

ಪೊಲೀಸ್​ ಅಧಿಕಾರಿ ಪ್ರಕಾರ, ಮಲಾಡ್‌ನ ನಿವಾಸಿ ಓರ್ಲೆಮ್ ಸಾರೊ ಎಂಬ ಮಹಿಳೆ ಆನ್‌ಲೈನ್ ಡೆಲಿವರಿ ಅಪ್ಲಿಕೇಶನ್‌ ಮೂಲಕ ಬಟರ್​ಸ್ಕಾಚ್ ಐಸ್‌ಕ್ರೀಮ್‌ ಕೋನ್‌ಗಳನ್ನು ಆರ್ಡರ್ ಮಾಡಿದ್ದರು. ಅರ್ಧದಷ್ಟು ಐಸ್​ಕ್ರೀಮ್ ತಿಂದ ಬಳಿಕ ನಾಲಿಗೆಗೆ ಏನೋ ವಸ್ತು ತಾಗಿದಂತಾಗಿದೆ. ಬಳಿಕ ಏನೆಂದು ನೋಡಿದಾಗ ಎರಡು ಸೆಂಟಿಮೀಟರ್ ಉದ್ದದ ಬೆರಳು ಪತ್ತೆಯಾಗಿದೆ. ವೃತ್ತಿಯಲ್ಲಿ ವೈದ್ಯೆ ಆಗಿರುವ ಓರ್ಲೆಮ್ ಮಾನವನ ಬೆರಳು ಎಂದು ಶಂಕಿಸಿ ಮಲಾಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸದ್ಯ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಮಲಾಡ್ ಪೊಲೀಸರು ಆನ್‌ಲೈನ್ ಡೆಲಿವರಿ ಅಪ್ಲಿಕೇಶನ್ ಮತ್ತು ಐಸ್​ಕ್ರೀಮ್ ತಯಾರಿಕಾ ಕಂಪನಿ ವಿರುದ್ಧ ತನಿಖೆ ನಡೆಸುತ್ತಿದ್ದಾರೆ. ಯಮ್ಮೋ ಐಸ್​ಕ್ರೀಮ್​ ಕಂಪನಿಯ ಐಸ್​​ಕ್ರೀಮ್​ಗಳನ್ನೂ ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ. ಜತೆಗೆ ಬೆರಳು ಪತ್ತೆಯಾದ ಕೋನ್​ ಅನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸ್​ ಅಧಿಕಾರಿ ರವೀಂದ್ರ ತಿಳಿಸಿದ್ದಾರೆ.

ಇದನ್ನೂ ಓದಿ:ಪಶ್ಚಿಮ ಬಂಗಾಳದ 4 ವರ್ಷದ ಮಗುವಿನಲ್ಲಿ ಹಕ್ಕಿ ಜ್ವರ ಪತ್ತೆ: WHO - Bird Flu In India

ABOUT THE AUTHOR

...view details