ಕರ್ನಾಟಕ

karnataka

ETV Bharat / state

ಫ್ಲೈಓವರ್‌ ರಾಡ್ ಬಿದ್ದು ಎಎಸ್​​ಐ ಸಾವು ಪ್ರಕರಣ: ಹುಬ್ಬಳ್ಳಿಯಲ್ಲಿ 11 ಜನ ಪೊಲೀಸ್ ವಶಕ್ಕೆ - ASI DEATH CASE

ಹುಬ್ಬಳ್ಳಿಯಲ್ಲಿ ಫ್ಲೈಓವರ್ ರಾಡ್​ ಬಿದ್ದು ಎಎಸ್​ಐ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಲಕ್ಷ್ಯ ವಹಿಸಿದ ಆರೋಪದಡಿ ಕಾಮಗಾರಿ ನಡೆಸಿದ್ದ ಕಂಪನಿಯ 11 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ASI DEATH CASE
ಎ ಎಸ್ ಐ ಸಾವು ಪ್ರಕರಣ (ETV Bharat)

By ETV Bharat Karnataka Team

Published : Sep 16, 2024, 2:25 PM IST

ಹುಬ್ಬಳ್ಳಿ: ಫ್ಲೈಓವರ್‌ ಕಾಮಗಾರಿ ವೇಳೆ ಕಬ್ಬಿಣದ ರಾಡ್ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ನಾಭಿರಾಜ್ ದಯಣ್ಣವರ (59) ಚಿಕಿತ್ಸೆ ಫಲಕಾರಿಯಾಗದೆ ಕಿಮ್ಸ್ ಆಸ್ಪತ್ರೆಯಲ್ಲಿ ನಿನ್ನೆ (ಭಾನುವಾರ) ಬೆಳಗಿನ ಜಾವ ಸಾವನ್ನಪ್ಪಿದ್ದರು.

ಪ್ರಕರಣದ ಹಿನ್ನೆಲೆ: ಎಎಸ್ಐ​ ನಾಭಿರಾಜ್ ಅವರು ಕಳೆದ ಮಂಗಳವಾರ ಸಂಜೆ ಕರ್ತವ್ಯಕ್ಕೆ ಬೈಕ್ ಮೇಲೆ ತೆರಳುತ್ತಿದ್ದರು. ಹಳೇ ಕೋರ್ಟ್ ಸರ್ಕಲ್ ಬಳಿ ನಡೆಯುತ್ತಿದ್ದ ಫ್ಲೈಓವರ್‌ ಕಾಮಗಾರಿಯ ಕಬ್ಬಿಣದ ರಾಡ್ ಅವರ ತಲೆಯ ಮೇಲೆ ಬಿದ್ದಿತ್ತು. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ನಂತರ ಕಿಮ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ ತಲೆಗೆ ಬಲವಾದ ಏಟು ಬಿದ್ದ ಕಾರಣ ಕೋಮಾಗೆ ಜಾರಿದ್ದ ನಾಭಿರಾಜ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಉಪನಗರ ಠಾಣೆ ಪೊಲೀಸರು, ಕಾಮಗಾರಿ ನಡೆಸಿದ್ದ ಕಂಪನಿಯ 11 ಜನ ಸಿಬ್ಬಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿರ್ಮಾಣ ಹಂತದಲ್ಲಿರುವ ಮೇಲ್ಸೆತುವೆ (ಫ್ಲೈಓವರ್‌) ಕಾಮಗಾರಿಯನ್ನು ಮಾಡುತ್ತಿರುವ ಜಂಡು ಕನ್ಸಟ್ರಕ್ಷನ್ ಕಂಪನಿಯ ನೌಕರರು ಕಾಮಗಾರಿ ಸ್ಥಳದಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಪಾಲಿಸಿರಲಿಲ್ಲ. ಹೀಗಾಗಿ ಸೇತುವೆ ಮೇಲೆ ಕಬ್ಬಿಣದ ಬಾರ್​ಗಳನ್ನು ಸಾಗಿಸುತ್ತಿದ್ದ ನೌಕರರ ನಿರ್ಲಕ್ಷ್ಯತನದಿಂದ ಕಬ್ಬಿಣದ ಪೈಪ್ ಎ.ಎಸ್.ಐ ಅವರ ತಲೆಯ ಮೇಲೆ ಬಿದ್ದಿತ್ತು ಎಂದು ದೂರು ದಾಖಲಾಗಿತ್ತು. ಪೈಪ್​ ಬಿದ್ದ ಪರಿಣಾಮ ಹೆಲ್ಮೆಟ್​ ಒಡೆದು ತಲೆಗೆ ಬಲವಾದ ಗಾಯವಾಗಿತ್ತು. ಬಳಿಕ ಅವರನ್ನು ಹುಬ್ಬಳ್ಳಿ ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಬಗ್ಗೆ ಹುಬ್ಬಳ್ಳಿ ಉಪನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಗರದ ಕಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎ.ಎಸ್.ಐ ನಾಭಿರಾಜ ದಯಣ್ಣವರ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದರಿಂದ ಈ ಘಟನೆಗೆ ಸಂಬಂಧಪಟ್ಟಂತೆ ಕಾಮಗಾರಿ ಕಂಪನಿಯ 11 ಜನ ಸಿಬ್ಬಂದಿಗಳನ್ನು ವಶಕ್ಕೆ ಪಡೆಯಲಾಗಿದೆ.

ವಶಕ್ಕೆ ಪಡೆದ ಜಂಡು ಕನ್ಸಟ್ರಕ್ಷನ್ ಕಂಪನಿಯ ನೌಕರರ ವಿವರ;

1] ಹರ್ಷಾ ತಂದೆ ಶಿವಾನಂದ ಹೊಸಗಾಣಿಗೇರ ಸೂಪರ್​ವೈಜರ್

2] ಜಿತೇಂದ್ರಪಾಲ ಶರ್ಮಾ ತಂದೆ ಶ್ರೀ ದೇವಕೃಷ್ಣ (ಲೈಜನಿಂಗ್ ಇಂಜನೀಯರ್)

3] ಭೂಪೇಂದರ್ ಪಾಲ್ ತಂದೆ ಶ್ರೀ ಮಹಾರಾಜಸಿಂಗ್ (ಇಂಜನೀಯರ್)

4] ಮೊಹಮ್ಮದ ತಂದೆ ಸಹರುಲ್ ಮಿಯಾ (ನೌಕರ)

5] ಅಸ್ಲಂ ಅಲಿ ತಂದೆ ಜಲೀಲಮಿಯಾ (ಕ್ರೇನ್ ಚಾಲಕ)

6] ಮೊಹಮ್ಮದ ಮಸೂದರ ರೆಹಮಾನ್​ ತಂದೆ ಮೆಹಮೂದ್ದೀನ ಹಾಜಿ (ನೌಕರ)

7] ಸಬೀಬ್​ ಶೇಕ್​ ತಂದೆ ಮನ್ಸೂರಅಲಿ (ನೌಕರ)

8] ರಿಜಾವುಲ್ ಹಕ್ ತಂದೆ ಮಂಜೂರಅಲಿ (ನೌಕರ)

9] ಶಮೀಮ ಶೇಕ್​​ ತಂದೆ ಪಿಂಟು ಶೇಕ್​​ (ನೌಕರ)

10] ಮೊಹಮ್ಮದ ಆರೀಫ ತಂದೆ ಖಯೂಮ್​ (ನೌಕರ)

11] ಮೊಹಮ್ಮದ್​ ರಬಿವುಲ್ ಹಕ್ ತಂದೆ ಮಜಬೂರ ರಹಿಮಾನ್​ ( ಲೇಬರ್ ಕಾಂಟ್ರಾಕ್ಟರ್)

ಇವರನ್ನು ದಸ್ತಗೀರಿ ಮಾಡಿದ್ದು, ಇನ್ನುಳಿದವರನ್ನು ಬಂಧಿಸುವದಾಗಿ ಉಪನಗರ ಠಾಣೆ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details