ಬೆಂಗಳೂರು:ಕಳೆದ 20 ವರ್ಷಗಳಿಂದ ಪೊಲೀಸರು ಹುಡುಕುತ್ತಿದ್ದನಕ್ಸಲ್ ವಿಕ್ರಂ ಗೌಡನನ್ನ ಕಾರ್ಕಳ ತಾಲೂಕಿನ ಹೆಬ್ರಿ ಕಬ್ವಿನಾಲೆಯ ಪೀತಬೈಲುವಿನಲ್ಲಿ ಎನ್‌ಕೌಂಟರ್ ಮಾಡಲಾಗಿದೆ. ನಕ್ಸಲ್ ತಂಡ ಗುಂಡಿನ ದಾಳಿ ಮಾಡಿದ ಪರಿಣಾಮ ಪೊಲೀಸರು ಎನ್‌ಕೌಂಟರ್ ಮಾಡಬೇಕಾಯುತ್ತ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಗಹ ಸಚಿವರು, ಕಳೆದ 20 ವರ್ಷಗಳಿಂದ ಗ್ರೇಡೆಸ್ ನಕ್ಸಲ್ ತಪ್ಪಿಸಿಕೊಂಡು ಓಡಾಡ್ತಿದ್ರು. ಆತನನ್ನು ಸೆರೆಹಿಡಿಯಲು ಮತ್ತು ಎನ್‌ಕೌಂಟರ್ ಮಾಡಲು ಸಾಧ್ಯವಾಗಿರಲಿಲ್ಲ. ಅಂತೆಯೇ ಪೊಲೀಸರು ವಿಕ್ರಂ ಗೌಡ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದರು. ನಾವೂ ರಾಜ್ಯದಲ್ಲಿ ನಕ್ಸಲ್ ಕಾಲ ಮುಗೀತು ಅನ್ಕೊಂಡಿದ್ವಿ. ಆದ್ರೆ ಕಳೆದ ವಾರ ರಾಜು ಮತ್ತು ಲತಾ ಎಂಬು ನಕ್ಸಲರು ಪತ್ತೆ ಆದ ಬಳಿಕ ಹೆಬ್ರಿ ಭಾಗದಲ್ಲಿ ಕೂಂಬಿಂಗ್ ಆಪರೇಷನ್ ನಡೆಯುತ್ತಿತ್ತು. ಆಗ ಇದ್ದಕಿದ್ದ ಹಾಗೆ ವಿಕ್ರಂ ಗೌಡ ಬರುವ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಈ ಮಾಹಿತಿ ಆಧರಿಸಿ ಕಾರ್ಯಾಚರಣೆ ಕೈಗೊಂಡಾಗ ನಕ್ಸಲ್ ತಂಡ ಗುಂಡಿನ ದಾಳಿ ನಡೆಸಿದೆ. ಆಗ ಪೊಲೀಸರು ಅನಿವಾರ್ಯವಾಗಿ ಎನ್‌ಕೌಂಟರ್ ಮಾಡಿದ್ದಾರೆ. ಇನ್ನು ವಿಕ್ರಂ ಜೊತೆಯಲ್ಲಿದ್ದ ಇಬ್ಬರು ಮೂವರು ಓಡಿ ಹೋಗಿದ್ದು, ಆ ಭಾಗದಲ್ಲಿ ಕೂಂಬಿಂಗ್ ಮುಂದುವರೆದಿದೆ ಎಂದು ಸಚಿವರು ತಿಳಿಸಿದ್ದಾರೆ.
ನಕ್ಸಲರನ್ನು ಮುಖ್ಯ ವೇದಿಕೆಗೆ ಕರೆತರುವ ಪ್ರಯತ್ನಗಳು ನಡೆಯುತ್ತಿವೆ. ಹಿಂದೆ ಪಾವಗಡ ಭಾಗದಲ್ಲಿ ನಕ್ಸಲರನ್ನು ಮಾತಾಡಿ ಮುಖ್ಯವೇದಿಕೆಗೆ ಕರೆತರಲಾಗಿತ್ತು. ಈಗಲೂ ಈ ಪ್ರಯತ್ನ ನಡೆಯುತ್ತಿದೆ. ಶರಣಾಗ ಬಯಸುವ ನಕ್ಸಲರಿಗೆ ಸಾಮಾನ್ಯ ಬದುಕು ನಡೆಸಲು ಸರ್ಕಾರ ಅವಕಾಶ ಮಾಡಿಕೊಡಲಿದೆ. ಆದರೆ ಅರಣ್ಯ ಭಾಗದಲ್ಲಿದ್ದು, ಪೊಲೀಸರ ಮೇಲೆ ತಪ್ಪಿಸಿಕೊಂಡು ಹೋಗಲು ಪ್ರಯತ್ನ ಮಾಡಿದ್ರೆ ಈ ರೀತಿ ಘಟನೆ ನಡೆಯುವುದು ಸಹಜ ಎಂದು ತಿಳಿಸಿದರು.
ಮಹಾರಾಷ್ಟ್ರ ಸರ್ಕಾರದ ವಿರುದ್ಧ ಕ್ರಮಕ್ಕೆ ಚಿಂತನೆ:ಮಹಾರಾಷ್ಟ್ರ ಸರ್ಕಾರದ ವಿರುದ್ಧ ಕಾನೂನು ಕ್ರಮದ ವಿಚಾರವಾಗಿ ಪ್ರತಿಕ್ರಿಯಿಸಿ, ಇದರ ಬಗ್ಗೆ ನಾವು ಪರಿಶೀಲನೆ ಮಾಡ್ತಿದ್ದೇವೆ. ಮಹಾರಾಷ್ಟ್ರ ಚುನಾವಣೆಗೆ ಅನುಕೂಲ ಆಗಲಿ ಅಂತ ಮಹಾವಿಕಾಸ್ ಅಘಾಡಿಯವರು ಗ್ಯಾರಂಟಿ ಕಾರ್ಡ್ ಬಿಡುಗಡೆ ಮಾಡಿದ್ದಾರೆ. ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್ನವರ ಗ್ಯಾರಂಟಿಗಳು ಸರಿಯಾಗಿ ಜಾರಿಯಾಗಿಲ್ಲ. ಇನ್ನು ಮಹಾರಾಷ್ಟ್ರದಲ್ಲಿ ಯಾವ ರೀತಿ ಜಾರಿ ಮಾಡ್ತಾರೆ ಅಂತ ಅಲ್ಲಿನ ಸರ್ಕಾರ ಜಾಹೀರಾತು ರಿಲೀಸ್ ಮಾಡಿದೆ. ಅದಕ್ಕಾಗಿ ಮಹಾ ಸರ್ಕಾರದ ಮೇಲೆ ಯಾವ ರೀತಿ ಕ್ರಮ ತಗೋಬೇಕು ಅಂತ ಚರ್ಚೆ ಮಾಡ್ತಿದ್ದೇವೆ ಎಂದರು.