ಚಾಮರಾಜನಗರ:ಜಿಲ್ಲೆಯ ಹಲವೆಡೆ ಮಳೆ ಆರ್ಭಟಿಸುತ್ತಿದ್ದು, ಚಾಮರಾಜನಗರ ಹಾಗೂ ಗುಂಡ್ಲುಪೇಟೆ ಭಾಗದಲ್ಲಿ ಎಡಬಿಡದೇ ಮಳೆಯಾಗುತ್ತಿದೆ. ದೈನಂದಿನ ಜನಜೀವನ ಅಸ್ತವ್ಯಸ್ತವಾಗಿದೆ.
ಗುಂಡ್ಲುಪೇಟೆ ತಾಲೂಕಿನ ಹೊನ್ನಶೆಟ್ಟರಹುಂಡಿ ಗ್ರಾಮದಲ್ಲಿ ಮಳೆ ಆರ್ಭಟಕ್ಕೆ ಕೆರೆತುಂಬಿ ಏರಿ ಮೇಲೆ ನೀರು ಹರಿಯುತ್ತಿದೆ. ಮಳೆಗೆ ನೀರಿನ ಪ್ರಮಾಣ ಹೆಚ್ಚುತ್ತಲೇ ಇದ್ದು, ಕೋಡಿ ಸರಿಯಿಲ್ಲದ ಕಾರಣ ಏರಿ ಮೇಲೆ ನೀರು ಹರಿಯುತ್ತಿದೆ. ಕೆರೆಗಳು ಒಡೆಯುವ ಭೀತಿಯಲ್ಲಿ ಗ್ರಾಮಸ್ಥರಿದ್ದಾರೆ.
ಚಾಮರಾಜನಗರದಲ್ಲಿ ಮಳೆ (ETV Bharat) ಕೆರೆಗಳು ಒಡೆದರೆ, ರೈತರು ಬೆಳೆದ ನೂರಾರು ಎಕರೆ ಫಸಲು ನಾಶವಾಗುವ ಆರಂಕ ಎದುರಾಗಿದೆ. ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಬಂದು ಪರಿಶೀಲಿಸಬೇಕೆಂದು ಗ್ರಾಮದ ವೆಂಕಟೇಶ್ ಸೇರಿ ಹಲವರು ಒತ್ತಾಯಿಸಿದ್ದಾರೆ.
ಎರಡನೇ ಬಾರಿ ಕೋಡಿ ಬಿದ್ದ ಕೆರೆಗಳು:ಕೆಲವು ತಿಂಗಳ ಹಿಂದೆಯಷ್ಟೇ ಮುಂಗಾರು ಆರ್ಭಟಕ್ಕೆ ಕೋಡಿ ಬಿದ್ದಿದ್ದ ಕೆರೆಗಳು, ಈಗ ಎರಡನೇ ಸಲ ಭರ್ತಿಯಾಗಿ ಕೋಡಿ ಬಿದ್ದಿವೆ. ಗುಂಡ್ಲುಪೇಟೆ ತಾಲೂಕಿನ ಬೇಗೂರು ಸಮೀಪದ ಕಮರಹಳ್ಳಿ ಕೆರೆ ನಿರಂತರ ಮಳೆಗೆ ವರ್ಷಗಳ ಬಳಿಕ ಕಳೆದ ತಿಂಗಳು ಕೋಡಿ ಬಿದ್ದಿತ್ತು.
ತುಂಬಿ ಹರಿಯುತ್ತಿರುವ ಕೆರೆ (ETV Bharat) ಕಮರಹಳ್ಳಿ ಕೆರೆ ತುಂಬಿ ಕೋಡಿ ಬಿದ್ದಿರುವ ಕಾರಣ ಸುತ್ತಮುತ್ತಲ ಪಂಪ್ ಸೆಟ್‍ಗಳಲ್ಲಿ ನೀರು ಅಧಿಕವಾಗಿ ಬರತೊಡಗಿದೆ. ಇದು ರೈತರ ವ್ಯವಸಾಯಕ್ಕೆ ಪೂರಕವಾಗಿದೆ. ಕೂತನೂರು ಕೆರೆಯೂ ಕೂಡ ಎರಡನೇ ಬಾರಿ ಕೋಡಿ ಬಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ವಿದ್ಯುತ್ ಪ್ರವಹಿಸಿ ವೃದ್ಧ ಸಾವು:ಹಸು ಮೇಯಿಸುತ್ತಿದ್ದ ವೇಳೆ ವಿದ್ಯುತ್ ಪ್ರವಹಿಸಿ, ವೃದ್ಧ ಅಸುನೀಗಿರುವ ಘಟನೆ ಚಾಮರಾಜನಗರ ತಾಲೂಕಿನ ಬಸವಾಪುರ ಗ್ರಾಮದ ಸಮೀಪ ನಡೆದಿದೆ.
ತುಂಬಿ ಹರಿಯುತ್ತಿರುವ ಕೆರೆ (ETV Bharat) ಇದನ್ನೂ ಓದಿ:ಬಂಗಾಳ ಕೊಲ್ಲಿ, ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ: ರಾಜ್ಯದ 12 ಜಿಲ್ಲೆಗಳಿಗೆ ಮತ್ತೆ ಆರೆಂಜ್ ಅಲರ್ಟ್ ಘೋಷಣೆ
ಮಾದಪ್ಪ(70) ಮೃತ ವ್ಯಕ್ತಿ. ಹಸು ಮೇಯಿಸುತ್ತಿದ್ದ ಇವರು ಮಳೆಯಿಂದ ರಕ್ಷಣೆ ಪಡೆಯಲು ಪಂಚಾಯಿತಿಗೆ ಸೇರಿದ ಕುಡಿಯುವ ನೀರಿನ ಪಂಪ್ಹೌಸ್ ಬಳಿ ತೆರಳಿದ ವೇಳೆ, ವಿದ್ಯುತ್ ಪ್ರವಹಿಸಿದ ಪರಿಣಾಮ ಮಾದಪ್ಪ ಸ್ಥಳದಲ್ಲೇ ಅಸುನೀಗಿದ್ದಾರೆ. ಚಾಮರಾಜನಗರ ಪೂರ್ವ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ:ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ: ಮೀನುಗಾರಿಕೆಗೆ ತೆರಳದಂತೆ ಜಿಲ್ಲಾಧಿಕಾರಿ ಸೂಚನೆ