ಬೆಂಗಳೂರು: ಡೆಂಗ್ಯೂ ಜ್ವರ ಪತ್ತೆ ಪರೀಕ್ಷೆಗೆ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವ ಕಡೆಗಳಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, 22 ಲ್ಯಾಬ್‌ಗಳಿಗೆ ನೋಟಿಸ್ ನೀಡಿದ್ದಾರೆ.
ಡೆಂಗ್ಯೂ ಚಿಕಿತ್ಸೆಗಾಗಿ ಸರ್ಕಾರ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚುವರಿಯಾಗಿ ದರ ಪಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಗುರುವಾರ ಕೆ.ಪಿ.ಎಂ.ಇ ನೋಡಲ್ ಅಧಿಕಾರಿಗಳ ತಂಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸೇರಿದಂತೆ ವಿವಿಧ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿನ 31 ಖಾಸಗಿ ಸಂಸ್ಥೆಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಿವಿಧ ಆಸ್ಪತ್ರೆ ಹಾಗೂ ಪರೀಕ್ಷೆ ಕೇಂದ್ರಗಳಿಗೆ ಭೇಟಿ ನೀಡಿದಾಗ, ಅದರಲ್ಲಿ 22 ಲ್ಯಾಬ್‌ನಲ್ಲಿ ಸರ್ಕಾರ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚುವರಿಯಾಗಿ ಹಣ ಪಡೆದ ಹಿನ್ನೆಲೆಯಲ್ಲಿ ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧಿನಿಯಮ ಹಾಗೂ ಕೆಪಿಎಂಇ ಅಧಿನಿಯಮದಂತೆ ನೋಟಿಸ್ ನೀಡಲಾಗಿದೆ. ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸರ್ಕಾರ ನಿಗದಿಪಡಿಸಿದ ಚಿಕಿತ್ಸಾ ದರದ ಪ್ರಕಾರ, ಡೆಂಗ್ಯೂ ಎಲಿಸಾ ಎನ್ ಎಸ್1 ಪರೀಕ್ಷೆಗೆ 300 ರೂ., ಡೆಂಗ್ಯೂ ಎಲಿಸಾ ಐಜಿಎಂ ಪರೀಕ್ಷೆಗೆ 300 ರೂ., ಸ್ಟೀನಿಂಗ್ ಟೆಸ್ಟ್, ರಾಪಿಡ್ ಕಾರ್ಡ್ ಟೆಸ್ಟ್ ಫಾರ್ ಎನ್‌ಎಸ್1, ಐಜಿಎಂ ಮತ್ತು ಐಜಿಜಿ ಪರೀಕ್ಷೆಗೆ 250 ರೂ.ಗಳಿದೆ. ಇದಕ್ಕಿಂತ ಹೆಚ್ಚು ಹಣವನ್ನು ಲ್ಯಾಬ್‌ಗಳು ವಸೂಲಿ ಮಾಡಿದರೆ 9449843037ಗೆ ಕರೆ ಮಾಡಿ ದೂರು ನೀಡಬಹುದಾಗಿದೆ. ಜೊತೆಗೆ ಹೆಚ್ಚಿನ ದರ ವಸೂಲಿ ಮಾಡಿದಲ್ಲಿ ಈ ಕೆಳಕಂಡ ಕಾರ್ಯಾಲಯಕ್ಕೆ ದೂರು ಸಲ್ಲಿಸಬಹುದಾಗಿದೆ.
ಕಛೇರಿ ವಿಳಾಸ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ, ಬೆಂಗಳೂರು ನಗರ ಜಿಲ್ಲೆ, ಹಳೆ ಕ್ಷಯರೋಗಿಗಳ ಆಸ್ಪತ್ರೆ ಆವರಣ, ಹಳೇ ಮದ್ರಾಸ್ ರಸ್ತೆ, ಇ-ಮೆಲ್ ಇಂದಿರಾನಗರ, ಬೆಂಗಳೂರು. dhobangaloreurban@gmail.com
ಆರೋಗ್ಯ ಇಲಾಖೆಯಿಂದ ನೋಟಿಸ್ ನೀಡಿದ 22 ಲ್ಯಾಬ್ಗಳ ಪಟ್ಟಿ ಇಲ್ಲಿದೆ:
1. ಪ್ರೈಮ್ ಡಯಾನ್ನೋಸ್ಟಿಕ್ಸ್, ಯಲಹಂಕ
2. ಆಸ್ಟರ್ ಕ್ಲಿನಿಕ್, ಯಲಹಂಕ
3. ಶ್ರೀ ರಾಘವ್ ಕ್ಲಿನಿಕ್, ದೊಡ್ಡಬೊಮ್ಮಸಂದ್ರ
4. ಸಿನ್ಮಾಡಯಾಗ್ನಿಸ್ಟಿಕ್ಸ್, ಯಲಹಂಕ
5. ಆರ್.ಲಾಲ್ ಪಥ್ ಲ್ಯಾಬ್, ಅಲೆನ್ ಕ್ಯಾರಿಯರ್ ಇನ್ಸಿಟ್ಯೂಟ್ ಬಳಿ, ವೈಟ್ ಫೀಲ್ಡ್.
6. ಹೊರಮಾವು ಮುಖ್ಯರಸ್ತೆಯಲ್ಲಿರುವ ಆಸ್ಪತ್ರೆ
7. ಎಸ್ಜೆಪಿ ಆಸ್ಪತ್ರೆ, ಕಲ್ಕೆರೆ ಮುಖ್ಯರಸ್ತೆ, ಹೊರಮಾವು.
8. ಮೆಡಲ್ ಕುಮ್ಯಾಕ್ಸ್ ಡಯಾಗ್ನೋಸ್ಟಿಕ್, ಹೊರಮಾವು ಮುಖ್ಯರಸ್ತೆ
9. ಟಿಕೆಎಸ್ ಡಯಾಗ್ನೋಸ್ಟಿಕ್ ಸೆಂಟರ್, ಹೊಸೂರು ರಸ್ತೆ
10. ವಿನೋದ ಡಯಾಗ್ನೋಸ್ಟಿಕ್
11. ಮಹೇಶ ಹೆಲ್ತ್ ಕೇರ್, ಹೆಬ್ಬಗೋಡಿ, ಎಲೆಕ್ಟ್ರಾನಿಕ್ ಸಿಟಿ
12. ಕ್ರಿಯಾ ಆಸ್ಪತ್ರೆ, ಜೆ.ಪಿ.ನಗರ.
13. ಸ್ಪಿಂಗ್ ಲೈಫ್ ಹೆಲ್ತ್ ಕೇರ್ ಪ್ರೈವೇಟ್ ಲಿಮಿಟೆಡ್, ಎಲೆಕ್ಟ್ರಾನಿಕ್ ಸಿಟಿ
14. ಇ-ಸಿಟಿ ಆಸ್ಪತ್ರೆಗಳು, ಎಲೆಕ್ಟ್ರಾನಿಕ್ ಸಿಟಿ
15. ಬಯೋ ಲೈನ್ ಲ್ಯಾಬೊರೇಟರ್ಸ್, ಜಯನಗರ
16. ಆಂಕ್ವೆಸ್ಟ್, ಜಯನಗರ
17. ಪ್ರಣವ್ ಡಯಾಗ್ನೋಸ್ಟಿಕ್ ಕಮ್ಮನಹಳ್ಳಿ
18. ಬಾಲಾಜಿ ಲ್ಯಾಬ್ ಡಯಾಗ್ನೋಸ್ಟಿಕ್, ಬಾಗಲೂರು
19. ಎಸ್‌ಎಲ್‌ವಿ ಡಯಾಗ್ನೋಸ್ಟಿಕ್, ಬಾಗಲೂರು
20. ಅಲ್ಟಿಯಸ್ ಆಸ್ಪತ್ರೆ, ನಾಗವಾರ ಮುಖ್ಯರಸ್ತೆ
21. ಕಾರ್ಟುಲಸ್ ಡಯಾಗ್ನೋಸ್ಟಿಕ್, ನಾಗವಾರ ಮುಖ್ಯ ರಸ್ತೆ
22. ಈಶಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಕಮ್ಮನಹಳ್ಳಿ.
ಇದನ್ನೂ ಓದಿ:ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 381 ಮಂದಿಯಲ್ಲಿ ಡೆಂಗ್ಯೂ ಪತ್ತೆ! - New Dengue Cases