ಕರ್ನಾಟಕ

karnataka

ETV Bharat / state

ಹಾಸನ ವಿಡಿಯೋ ಪ್ರಕರಣ: ಎಸ್ಐಟಿ ತಂಡಕ್ಕೆ 18 ಮಂದಿ ಅಧಿಕಾರಿಗಳು, ಸಿಬ್ಬಂದಿ ನಿಯೋಜಿಸಿದ ಸರ್ಕಾರ - Hassan Video case - HASSAN VIDEO CASE

ಹಾಸನ ವಿಡಿಯೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸರ್ಕಾರ ಎಸ್​ಐಟಿ ತನಿಖೆಗೆ ಆದೇಶಿಸಿದೆ. ಈ ಬೆನ್ನಲ್ಲೇ ಎಸ್​ಐಟಿ ತಂಡಕ್ಕೆ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

Etv Bharat
Etv Bharat

By ETV Bharat Karnataka Team

Published : Apr 30, 2024, 11:28 AM IST

ಬೆಂಗಳೂರು:ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ಹಾಸನ ಪೆನ್​ಡ್ರೈವ್ ವಿಡಿಯೋ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ(ಎಸ್ಐಟಿ) ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನ ಪೊಲೀಸ್ ಇಲಾಖೆ ನಿಯೋಜಿಸಿ ಆದೇಶಿಸಿದೆ.

ಪ್ರಕರಣದ ಕೂಲಂಕಷ ತನಿಖೆಗಾಗಿ ರಾಜ್ಯ ಸರ್ಕಾರವು ಎಸ್ಐಟಿ ಮುಖ್ಯಸ್ಥ ಬಿ.ಕೆ.ಸಿಂಗ್ ನೇತೃತ್ವದಲ್ಲಿ ಮೈಸೂರು ಎಸ್ಪಿ ಸೀಮಾ ಲಾಟ್ಕರ್, ಹೆಚ್ಚುವರಿ ಎಸ್ಪಿ ಸುಮನ್ ಪನ್ನೇಕರ್ ಅವರನ್ನ ನಿಯೋಜಿಸಿತ್ತು. ಇದೀಗ ರಾಜ್ಯ ಸರ್ಕಾರ 18 ಮಂದಿ ಅಧಿಕಾರಿ ಹಾಗೂ ಸಿಬ್ಬಂದಿಯನ್ನ ನಿಯೋಜಿಸಿದೆ‌. ಇದರಿಂದ ಎಸ್ಐಟಿ ತನಿಖೆ ಇನ್ನಷ್ಟು ಚುರುಕುಗೊಳ್ಳಲಿದೆ.

ಪ್ರಕರಣ ಸಂಬಂಧ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಪೊಲೀಸರನ್ನೂ ಒಳಗೊಂಡಂತೆ 18 ಮಂದಿ ಪರಿಣಿತರನ್ನ ನಿಯೋಜಿಸಲಾಗಿದೆ, ಹಾಗಾದರೆ ತಂಡದಲ್ಲಿ ಯಾರ್ಯಾರು ಇದ್ದಾರೆ ಎಂಬ ಮಾಹಿತಿ ಇಲ್ಲಿದೆ.

ಎಸ್ಐಟಿ ತಂಡದ ಸದಸ್ಯರು:ಎಸಿಪಿಪ್ರಿಯದರ್ಶಿನಿ ಈಶ್ವರ್ ಸಾನಿಕೊಪ್ಪ, ಎಸಿಪಿ ಸತ್ಯನಾರಾಯಣ ಸಿಂಗ್.ಎಸ್.ಬಿ, ಎಸಿಪಿ ಧನ್ಯ ಎನ್ ನಾಯ್, ಪಿಐ ಸುಮರಾಣಿ.ಬಿ.ಎಸ್, ಸ್ವರ್ಣ ಜಿ.ಎಸ್, ಭಾರತಿ.ಜಿ, ಹೇಮಂತ್ ಕುಮಾರ್, ರಾಜಾ.ಜಿ.ಸಿ, ಪಿಎಸ್​ಐಗಳಾದ ವೈಲೆಟ್ ಸ್ಲಿಮೀನಾ, ವಿನುತ, ನಂದೀಶ್, ಕುಮುದ, ಹೆಡ್​ಕಾನ್​ಸ್ಟೇಬಲ್​ಗಳಾದ ಮನೋಹರ, ಸುನೀಲ್ ಬೆಳವಗಿ, ಬಸವರಾಜ್ ಮೈಗೇರಿ, ಸುಮತಿ, ಕಾನ್​ಸ್ಟೇಬಲ್​ಗಳಾದ ರಂಗಸ್ವಾಮಿ ಹಾಗೂ ಮಹಿಳಾ ಕಾನ್ಸ್​​ಟೇಬಲ್​​ ಸಿಂಧು ಅವರನ್ನ ನೇಮಕ ಮಾಡಿದೆ.

ಇದನ್ನೂ ಓದಿ:ಹಾಸನ ಅಶ್ಲೀಲ ವಿಡಿಯೋ ಪ್ರಕರಣ: ವಿಶೇಷ ತನಿಖಾ ತಂಡ ರಚಿಸಿ ರಾಜ್ಯ ಸರ್ಕಾರ ಆದೇಶ - Hassan Video Case

ABOUT THE AUTHOR

...view details