ಕರ್ನಾಟಕ

karnataka

ETV Bharat / state

ಹಾನಗಲ್​ ಗ್ಯಾಂಗ್‌ರೇಪ್​ ಪ್ರಕರಣ: 10 ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಮಂಜೂರು - Hanagal Gang Rape Case - HANAGAL GANG RAPE CASE

ಹಾನಗಲ್ ತಾಲೂಕಿನಲ್ಲಿ ದಾಖಲಾಗಿದ್ದ ಮಹಿಳೆ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದ 10 ಆರೋಪಿಗಳಿಗೆ ಕೋರ್ಟ್ ಜಾಮೀನು ನೀಡಿದೆ.

ಧಾರವಾಡ ಹೈಕೋರ್ಟ್
ಧಾರವಾಡ ಹೈಕೋರ್ಟ್ ಪೀಠ (ETV Bharat)

By ETV Bharat Karnataka Team

Published : Aug 6, 2024, 3:53 PM IST

Updated : Aug 6, 2024, 5:03 PM IST

ಹಾವೇರಿ/ಧಾರವಾಡ: ಜಿಲ್ಲೆಯ ಹಾನಗಲ್ ತಾಲೂಕಿನಲ್ಲಿ ಮಹಿಳೆ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಬಂಧಿತರಾಗಿರುವ 19 ಆರೋಪಿಗಳ ಪೈಕಿ 10 ಮಂದಿಗೆ ಇಂದು ಧಾರವಾಡ ಹೈಕೋರ್ಟ್ ಪೀಠ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತು.

ಜನವರಿ 11ರಂದು ಹಾನಗಲ್ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಆರೋಪಿ ಸಂಖ್ಯೆ 5, 6, 9, 10, 12, 14, 16, 17, 18, 19 ಸೇರಿದಂತೆ 10 ಮಂದಿಗೆ 2 ಲಕ್ಷ ರೂ ಶ್ಯೂರಿಟಿಗಳೊಂದಿಗೆ ಜಾಮೀನು ಮಂಜೂರಾಗಿದೆ.

ವಿಚಾರಣೆಗೆ ನಿಯಮಿತವಾಗಿ ಹಾಜರಿರಬೇಕು. ಸಾಕ್ಷಿಗಳಿಗೆ ಯಾವುದೇ ಬೆದರಿಕೆ ಹಾಕುವಂತಿಲ್ಲ ಎಂದು ಕೋರ್ಟ್‌ ಷರತ್ತು ವಿಧಿಸಿದೆ. ಇನ್ನು, ಪ್ರಕರಣದ 7 ಪ್ರಮುಖ ಆರೋಪಿಗಳಿಗೆ ಜಾಮೀನು ದೊರೆತಿಲ್ಲ.

ಇಮ್ರಾನ್ ಜೇಕಿನಕಟ್ಟಿ (ಎ-5), ರೆಹಾನ್ ವಾಲೀಕಾರ (ಎ-6), ಮುಫೀದ್ ಓಣಿಕೇರಿ (ಎ-9), ಇಬ್ರಾಹಿಂ ಬಂಕಾಪುರ (ಎ-10), ಇಸ್ಮಾಯಿಲ್ ಹುಬ್ಬಳ್ಳಿ (ಎ-12), ನಿಯಾಜ್ ದರ್ಗಾ (ಎ- 14), ಮತ್ತು ಮೊಹಮ್ಮದ್ ಸಾದಿಕ್ ಕುಸನೂರ್ (ಎ-16), ಇಸ್ಮಾಯಿಲ್ ಓಣಿಕೇರಿ (ಎ-17), ಆಸಿಫ ಖಾನ್ ಪಯಾನ್ ಖಾನವರ್ (ಎ-18), ಮುಜಾಮಿಲ್ ಇಮ್ಮುಸಾಬನವರ್ (ಎ-19) ಎಂಬವರಿಗೆ ಜಾಮೀನು ಮಂಜೂರಾಗಿದೆ.

ಘಟನೆಯ ಹಿನ್ನೆಲೆ: ಹಾನಗಲ್ ಸಮೀಪದ ಲಾಡ್ಜ್​ನಲ್ಲಿ ಜೋಡಿಯೊಂದು ತಂಗಿತ್ತು. ಈ ಬಗ್ಗೆ ಮಾಹಿತಿ ತಿಳಿದ ಕೆಲವು ಯುವಕರು ಲಾಡ್ಜ್​ಗೆ ಏಕಾಏಕಿ ನುಗ್ಗಿ ಹಲ್ಲೆ ಮಾಡಿದ್ದರು. ಬಳಿಕ ಹೊರಗೆ ಎಳೆದುಕೊಂಡು ಬಂದು ಇಬ್ಬರಿಗೂ ಬೆದರಿಕೆ ಹಾಕಿದ್ದರು. ಹಾನಗಲ್ ಸಮೀಪದ ಅರಣ್ಯ ಪ್ರದೇಶಕ್ಕೆ ಮಹಿಳೆಯನ್ನು ಕರೆದುಕೊಂಡು ಹೋಗಿದ್ದರು. ಹಾನಗಲ್ ಪೊಲೀಸ್ ಠಾಣೆಯಲ್ಲಿ ಜ.10ರಂದು ಮೊದಲು ಹಲ್ಲೆ ಪ್ರಕರಣ ದಾಖಲಾಗಿತ್ತು. ನಂತರ ನ್ಯಾಯಾಧೀಶರ ಮುಂದೆ ಮಹಿಳೆ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ಕುರಿತಂತೆ ಹೇಳಿಕೆ ನೀಡಿದ್ದರು. ನ್ಯಾಯಾಧೀಶರು ಆರೋಪಿಗಳ ಬಂಧನಕ್ಕೆ ಆದೇಶಿಸಿದ್ದರು.

ಇದನ್ನೂ ಓದಿ:ಹಾನಗಲ್ ಗ್ಯಾಂಗ್​ ರೇಪ್​ ಪ್ರಕರಣ: ಪೊಲೀಸರಿಂದ 873 ಪುಟಗಳ ಚಾರ್ಜ್​ ಶೀಟ್ ಸಲ್ಲಿಕೆ

Last Updated : Aug 6, 2024, 5:03 PM IST

ABOUT THE AUTHOR

...view details