ಬೆಂಗಳೂರು:ಜೀವಜಲದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ನೀರಿನ ಮೇಲೆ ಹಸಿರು ಸೆಸ್ ಹಾಕುವ ಪ್ರಸ್ತಾವನೆ ಇದೆ. ಒಂದು ವೇಳೆ ಜನಾಭಿಪ್ರಾಯ ಬೇಡ ಅಂದರೆ ಅದನ್ನು ಕೈಬಿಡುತ್ತೇವೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಪಶ್ಚಿಮ ಘಟ್ಟಗಳ ಬಗ್ಗೆ ಜಾಗೃತಿ ಮೂಡಿಸಲು ಅದರ ಸಂರಕ್ಷಣೆ ಮಾಡಲು ಸೆಸ್ ಹಾಕುವ ಚಿಂತನೆ ಇದೆ. ಎಲ್ಲ ನದಿಗಳಿಗೆ ನೀರು ಹರಿಯುವುದು ಪಶ್ಚಿಮಘಟ್ಟ ಪ್ರದೇಶದಿಂದ. ಜನರಲ್ಲಿ ಈ ಬಗ್ಗೆ ಅರಿವು ಮೂಡಿಸಲು ಒಂದು ಮನೆಗೆ 2 - 3 ರೂ. ಹಸಿರು ಸೆಸ್ ವಿಧಿಸಲಾಗುತ್ತದೆ. ಒಂದು ಮನೆಗೆ 2-3 ರೂ. ಅಂದರೆ ದಿನಕ್ಕೆ 10 ಪೈಸೆ ಆಗುತ್ತದೆ. ಶುದ್ಧ ಕುಡಿಯುವ ನೀರಿಗಾಗಿ ಪ್ರಕೃತಿ ಸಂರಕ್ಷಣೆ ಮಾಡಲು ಸೆಸ್ ವಿಧಿಸಲಾಗುತ್ತದೆ ಎಂದರು.
ಈಶ್ವರ ಖಂಡ್ರೆ (ETV Bharat) ಇದನ್ನೂ ಓದಿ:ಪಶ್ಚಿಮ ಘಟ್ಟದ ನದಿಗಳ ನೀರಿಗೆ ಹಸಿರು ಸೆಸ್: ಸಚಿವ ಈಶ್ವರ್ ಖಂಡ್ರೆ
ನೀರು ವ್ಯಯ ಮಾಡಬಾರದು:ಇದೊಂದು ಪ್ರಸ್ತಾವನೆಯಾಗಿದೆ ಅಷ್ಟೇ. ಈ ಪ್ರಸ್ತಾವನೆ ಬಗ್ಗೆ ಚರ್ಚೆ ನಡೆಯುತ್ತದೆ. ಜನಾಭಿಪ್ರಾಯ ತೆಗೆದುಕೊಳ್ಳುತ್ತೇವೆ. ಅದರ ಆಧಾರದ ಮೇಲೆ ಸಿಎಂ ಜೊತೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ. ಜನರು ಶುದ್ಧ ಕುಡಿಯುವ ನೀರನ್ನು ಬಳಸುತ್ತಾರೆ. ಅವರಿಗೆ ಮಿತವಾಗಿ ಬಳಸಬೇಕು, ನೀರು ವ್ಯಯ ಮಾಡಬಾರದು, ನೀರು ಅನ್ನೋದು ಜೀವ ಜಲ. ಹೀಗಾಗಿ, ಅದರ ಬಗ್ಗೆ ಜಾಗೃತಿ ಮೂಡಿಸಲು ಹಸಿರು ಸೆಸ್ ಹಾಕಲು ಪ್ರಸ್ತಾವನೆ ಇದೆ. ಅದು ಯಾರಿಗೂ ಹೊರೆ ಆಗುವುದಿಲ್ಲ. ಅದಾಗ್ಯೂ ಜನಾಭಿಪ್ರಾಯ ಬೇಡ ಅಂದರೆ ಅದನ್ನು ಕೈ ಬಿಡುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ:'ಚಿಲ್ಲರೆ' ಜಗಳವಿಲ್ಲ, ಸ್ಕ್ಯಾನ್ ಮಾಡಿ ಟಿಕೆಟ್ ಪಡೆಯಿರಿ: ಡಿಜಿಟಲೀಕರಣದಲ್ಲಿ NWKRTC ಯಶಸ್ಸು, ಸಂಸ್ಥೆಗೂ ಪ್ರಯಾಣಿಕರಿಗೂ ಅನುಕೂಲ