ಕರ್ನಾಟಕ

karnataka

ETV Bharat / state

ವಕ್ಫ್​ ಆಸ್ತಿ ಸುರಕ್ಷತೆಗಾಗಿ ರಾಜ್ಯ ಸರ್ಕಾರ ಈವರೆಗೆ ಬಿಡುಗಡೆ ಮಾಡಿದ ಅನುದಾನದ ವಿವರ - WAQF

ವಕ್ಫ್ ಆಸ್ತಿ ರಕ್ಷಣೆಗಾಗಿ ತಂತಿ ಬೇಲಿ, ಕಾಂಪೌಂಡ್ ಗೋಡೆ ನಿರ್ಮಿಸುವುದು ಸೇರಿದಂತೆ ರಾಜ್ಯ ಸರ್ಕಾರ 10 ವರ್ಷದಲ್ಲಿ ಸುಮಾರು 187.21 ಕೋಟಿ ರೂ. ಅನುದಾನ ಖರ್ಚು ಮಾಡಿದೆ.

ರಾಜ್ಯದ ವಕ್ಫ್​ ಆಸ್ತಿ ಸುರಕ್ಷತೆಗಾಗಿ ರಾಜ್ಯ ಸರ್ಕಾರ ಈವರೆಗೆ ಬಿಡುಗಡೆ ಮಾಡಿದ ಅನುದಾನ ವಿವರ
ಕರ್ನಾಟಕ ರಾಜ್ಯ ವಕ್ಫ್‌ ಮಂಡಳಿ (ETV Bharat)

By ETV Bharat Karnataka Team

Published : Nov 6, 2024, 9:34 AM IST

ಬೆಂಗಳೂರು:ಸರ್ಕಾರ ವಕ್ಫ್​​​​ ಆಸ್ತಿ ರಕ್ಷಣೆಗಾಗಿ ಪ್ರತಿ ವರ್ಷ ವಕ್ಫ್​​​​ ಮಂಡಳಿಗೆ ಕೋಟ್ಯಂತರ ರೂಪಾಯಿ ಹಣ ನೀಡುತ್ತದೆ. ವಕ್ಫ್ ಆಸ್ತಿ ರಕ್ಷಣೆಗಾಗಿ ಸರ್ಕಾರ ಈವರೆಗೆ ಬಿಡುಗಡೆ ಮಾಡಿದ ಹಣವೆಷ್ಟು ಎಂಬ ವರದಿ ಇಲ್ಲಿದೆ.

ರಾಜ್ಯದಲ್ಲಿ ವಕ್ಫ್ ಮಂಡಳಿಗೆ ಸೇರಿದ ಸುಮಾರು 47,470 ಆಸ್ತಿಗಳಿವೆ. ಈ ಹಿಂದೆ ರಾಜ್ಯದಲ್ಲಿ ಸುಮಾರು 1.12 ಲಕ್ಷ ಎಕರೆ ವಕ್ಫ್ ಜಮೀನು ಇದ್ದು, ಸದ್ಯ 23,000 ಎಕರೆ ಜಮೀನು ಮಾತ್ರ ವಕ್ಫ್ ಮಂಡಳಿ ಬಳಿ ಉಳಿದುಕೊಂಡಿದೆ ಎಂದು ಅಲ್ಪಸಂಖ್ಯಾತ, ವಕ್ಫ್ ಇಲಾಖೆ ಸಚಿವ ಜಮೀರ್ ಅಹಮದ್ ಖಾನ್ ಹೇಳಿದ್ದಾರೆ. ಸುಮಾರು 84,000 ಎಕರೆ ವಕ್ಫ್ ಜಮೀನು ತಕರಾರಿನಲ್ಲಿದೆ.

ವಕ್ಫ್​ ಆಸ್ತಿ ಕಬಳಿಕೆಯೇ ದೊಡ್ಡ ಪ್ರಮಾಣದಲ್ಲಾಗಿದೆ. ಅದರಲ್ಲೂ ಮುಖ್ಯವಾಗಿ ಮುಸ್ಲಿಂ ಸಮುದಾಯದ ರಾಝೀಯ ನಾಯಕರೇ ವಕ್ಫ್ ಆಸ್ತಿ ಒತ್ತುವರಿ ಮಾಡಿರುವುದಾಗಿ 2012ರ ಅನ್ವರ್​ ಮಾಣಿಪ್ಪಾಡಿ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. 29 ಸಾವಿರ ಎಕರೆ ವಕ್ಫ್ ಆಸ್ತಿ ಕಬಳಿಕೆ ಆಗಿದೆ. 2-3 ಲಕ್ಷ ಕೋಟಿ ಮೌಲ್ಯದ ವಕ್ಫ್ ಆಸ್ತಿ ಹಗರಣ ನಡೆದಿದೆ ಎಂದು ವರದಿಯಲ್ಲಿ ಆರೋಪಿಸಲಾಗಿತ್ತು.

ವಕ್ಫ್ ಆಸ್ತಿ ರಕ್ಷಣೆಗೆ ಮಂಜೂರು, ಬಿಡುಗಡೆಯಾದ ಅನುದಾನ:ವಕ್ಫ್ ಆಸ್ತಿ ರಕ್ಷಣೆಗಾಗಿ ತಂತಿ ಬೇಲಿ, ಕಾಂಪೌಂಡ್ ಗೋಡೆ ನಿರ್ಮಿಸುವುದು ಸೇರಿದಂತೆ ಹಲವು ಕ್ರಮ ಕೈಗೊಳ್ಳಲಾಗುತ್ತದೆ. ಕಳೆದ 10 ವರ್ಷದಲ್ಲಿ ವಕ್ಫ್ ಆಸ್ತಿ ರಕ್ಷಣೆ ಯೋಜನೆಗಾಗಿ ಸುಮಾರು 187.21 ಕೋಟಿ ರೂ. ಅನುದಾನ ಖರ್ಚಾಗಿದೆ ಎಂದು ವಕ್ಫ್ ಬೋರ್ಡ್ ಮಾಹಿತಿ ನೀಡಿದೆ.

ಕರ್ನಾಟಕ ವಕ್ಫ್ ಆಸ್ತಿ ಸಂರಕ್ಷಣೆ ಯೋಜನೆಗಾಗಿ 2021-22ರಲ್ಲಿ 239 ಕೋಟಿ ರೂ. ಮಂಜೂರು ಮಾಡಲಾಗಿತ್ತು. 2022-23 ಸಾಲಿನಲ್ಲಿ 18.02 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿತ್ತು. 2023-24 ಸಾಲಿನಲ್ಲಿ 50 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿತ್ತು. 2024-25 ಸಾಲಿನಲ್ಲಿ 50 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ.

2021-22ರಲ್ಲಿ ವಕ್ಫ್​ ಆಸ್ತಿ ಸಂರಕ್ಷಣೆಗಾಗಿ 16.08 ಕೋಟಿ ರೂ. ಬಿಡುಗಡೆ ಮಾಡಲಾಗಿತ್ತು. 2022-23 ಸಾಲಿನಲ್ಲಿ 8.87 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿತ್ತು. 2023-24ರಲ್ಲಿ 50 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿತ್ತು. ಇನ್ನು 2024-25 ಸಾಲಿನಲ್ಲಿ ಅಕ್ಟೋಬರ್ ತನಕ 37.50 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ. ಈವರೆಗೆ 12.50 ಕೋಟಿ ರೂ. ಹಣ ಖರ್ಚು ಮಾಡಲಾಗಿದೆ.

ವಕ್ಫ್ ಆಸ್ತಿಗಳ ದುರಸ್ತಿ, ಜೀರ್ಣೋದ್ಧಾರಕ್ಕೆ ಹಣ ಬಿಡುಗಡೆ:ಕಳೆದ 10 ವರ್ಷಗಳಲ್ಲಿ ವಕ್ಫ್ ಆಸ್ತಿಗಳ ದುರಸ್ತಿ ಹಾಗೂ ಜೀರ್ಣೋದ್ಧಾರಕ್ಕಾಗಿ 93.51 ಕೋಟಿ ರೂ. ಖರ್ಚು ಮಾಡಲಾಗಿದೆ. 2021-22ರಲ್ಲಿ ವಕ್ಫ್ ಆಸ್ತಿ ದುರಸ್ತಿ, ಜೀರ್ಣೋದ್ಧಾರಕ್ಕಾಗಿ ಸರ್ಕಾರ 3.81 ಕೋಟಿ ರೂ. ಅನುದಾನ ಮಂಜೂರು ಮಾಡಿತ್ತು. ಈ ಪೈಕಿ 1.38 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿತ್ತು. 2022-23ರಲ್ಲಿ 17.48 ಕೋಟಿ ರೂ. ಮಂಜೂರಾಗಿತ್ತು. ಈ ಪೈಕಿ 6.22 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿತ್ತು. 2023-24ರಲ್ಲಿ ಯಾವುದೇ ಹಣ ಮಂಜೂರು, ಬಿಡುಗಡೆ ಮಾಡಿರಲಿಲ್ಲ.

ಇದನ್ನೂ ಓದಿ:ವಕ್ಫ್​ ಬಿಲ್: ಪ್ರತಿಪಕ್ಷದ ಸಂಸದರಿಂದ ಸ್ಪೀಕರ್​ ಭೇಟಿ, ಜೆಪಿಸಿ ಅಧ್ಯಕ್ಷರ ವಿರುದ್ಧ ದೂರು

ABOUT THE AUTHOR

...view details