ಬೆಂಗಳೂರು: ಸರ್ಕಾರ ಬೀಳಿಸುವುದು ಅಸಾಧ್ಯವಾದ ಮಾತು. ಬಿಜೆಪಿಯ ಶಾಸಕರೇ ನಮ್ಮ ಜೊತೆ ಇದ್ದಾರೆ. ಜೆಡಿಎಸ್ನಲ್ಲಿರುವವರು ಅತಂತ್ರರಾಗಿದ್ದಾರೆ. ಲೀಡರ್ಸ್ಗಳು ನಮ್ಮನ್ನು ಸೇರಿಸಿಕೊಳ್ಳಿ ಅಂತ ಕೇಳುತ್ತಿದ್ದಾರೆ ಎಂದು ಸಚಿವ ಎಂ.ಬಿ.ಪಾಟೀಲ್ ಪ್ರತಿಕ್ರಿಯೆ ನೀಡಿದರು.
ಸದಾಶಿವ ನಗರದ ನಿವಾಸದಲ್ಲಿ ಮಾತನಾಡಿದ ಅವರು, ಕೆಲವೇ ತಿಂಗಳುಗಳಲ್ಲಿ ಸರ್ಕಾರ ಬೀಳುತ್ತೆ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದು ರಾಜಕೀಯ ಹೇಳಿಕೆ ಅಷ್ಟೇ. ಈ ಸರ್ಕಾರ ಬೀಳಿಸಬೇಕಾದ್ರೆ 60 ಶಾಸಕರು ಬೇಕು. ಇಬ್ಬರಿಂದ ನಾಲ್ಕು ಶಾಸಕರನ್ನ ಕರೆದುಕೊಂಡು ಬರಲಿ. ಬಿಜೆಪಿಯ ಶಾಸಕರೇ ನಮ್ಮೊಂದಿಗಿದ್ದಾರೆ. ಜೆಡಿಎಸ್ನವರು ಅತಂತ್ರರಾಗಿದ್ದಾರೆ ಎಂದು ತಿಳಿಸಿದರು.
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ದೊಡ್ಡವರೇ ನಮ್ಮ ಹಿಂದೆ ಇದ್ದಾರೆ ಎಂಬ ದೇವರಾಜೇಗೌಡ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಈಗ ಎಸ್ಐಟಿ ರಚನೆ ಆಗಿದೆ. ಸಚಿವನಾಗಿ ನಾನು ಏನನ್ನೂ ಮಾತನಾಡಲು ಬಯಸಲು ಒಪ್ಪಲ್ಲ. ಎಸ್ಐಟಿ ತನ್ನ ಕೆಲಸ ಮಾಡುತ್ತೆ ಎಂದರು.
ಪ್ರಜ್ವಲ್ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಅಂತ ಹೆಚ್ಡಿಕೆ ರಾಜ್ಯಪಾಲರ ಭೇಟಿ ವಿಚಾರವಾಗಿ ಮಾತನಾಡಿ, ಕ್ಲೀನ್ ಚೀಟ್ ಕೊಡೋಕಾ?. ವಾಷಿಂಗ್ ಮಷನ್ಗೆ ಹಾಕೋಕಾ? ಎಂದು ಲೇವಡಿ ಮಾಡಿದರು. ರಾಜ್ಯದಲ್ಲಿ ನಾವು ಕನಿಷ್ಠ 20 ಸ್ಥಾನ ಗೆಲ್ಲಲಿದ್ದೇವೆ. ಊಹೆ ಮಾಡಲಾರದಷ್ಟು ಅಂಡರ್ ಕರೆಂಟ್ ಆಗಿದೆ. ಮಹಿಳೆಯರು, ಬಡ ಕುಟುಂಬದವರು ಕಾಂಗ್ರೆಸ್ಗೆ ಒಲವು ತೋರಿಸಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ನಾವು ಗೆಲ್ಲುತ್ತೇವೆ. ಒಂದು ಲಕ್ಷ ಲೀಡ್ನಲ್ಲಿ ನಾವು ಜಯ ಗಳಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.