ಶಿವಮೊಗ್ಗ: ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ತಮ್ಮ ಪ್ರಚಾರದ ನಡುವೆ ಕುಟುಂಬ ಸಮೇತ ರಿಲ್ಯಾಕ್ಸ್ ಮೂಡ್ಗೆ ಜಾರಿದರು. ಭಾನುವಾರ ಶಿವಮೊಗ್ಗದಿಂದ ರಾಜ್ಯದ ಪ್ರಸಿದ್ಧ ಆನೆ ಬಿಡಾರವಾದ ಸಕ್ರೆಬೈಲು ಬಿಡಾರಕ್ಕೆ ತಮ್ಮ ಕುಟುಂಬ ಸಮೇತ ಭೇಟಿ ನೀಡಿದ್ದರು.
ಪತಿ ಶಿವರಾಜಕುಮಾರ್ ತಮ್ಮ ಇಬ್ಬರು ಹೆಣ್ಣು ಮಕ್ಕಳು, ಅಳಿಯ, ಮೊಮ್ಮಕ್ಕಳು ಸೇರಿದಂತೆ ಸಹೋದರಿಯರು ಹಾಗೂ ಸಹೋದರ ಮಧು ಬಂಗಾರಪ್ಪ ಅವರ ಕುಟುಂಬದ ಸಮೇತ ಭೇಟಿ ನೀಡಿದ್ದರು. ಸಕ್ರೆಬೈಲು ಆನೆ ಬಿಡಾರಕ್ಕೆ ಭೇಟಿ ನೀಡಿದ ವೇಳೆ ಆನೆಗಳಿಗೆ ಕಬ್ಬು ನೀಡಿದರು. ಜೊತೆಗೆ ಅಲ್ಲಿ ನಿಂತು ಫೋಟೋ ಕ್ಲಿಕ್ಕಿಸಿಕೊಂಡರು. ನಂತರ ಆನೆ ಸಾಗರನ ಮೇಲೆ ಸವಾರಿ ನಡೆಸಿದರು. ನಂತರ ತುಂಗಾ ಅಣೆಕಟ್ಟೆಯ ಹಿನ್ನೀರಿನಲ್ಲಿ ಬೋಟಿಂಗ್ನಲ್ಲಿ ವಿಹರಿಸಿದರು.