ಕರ್ನಾಟಕ

karnataka

ETV Bharat / state

ಬೆಂಗಳೂರು: ಸಿಲಿಂಡರ್ ಬದಲಿಸುವಾಗ ಅಗ್ನಿ ಅವಘಡ; ಆಟೋ, ದ್ವಿಚಕ್ರ ವಾಹನ ಭಸ್ಮ - Bengaluru Fire Accident - BENGALURU FIRE ACCIDENT

ಆಕಸ್ಮಿಕವಾಗಿ ಬೆಂಕಿ ತಗುಲಿದ ಸಿಲಿಂಡರ್ ಅ​ನ್ನು ಅಂಗಡಿ ಮಾಲೀಕ ಪಕ್ಕಕ್ಕೆ ತಳ್ಳಿದ್ದಾರೆ. ಇದರಿಂದಾಗಿ ಇತರೆ ಎರಡು ವಾಹನಗಳಿಗೂ ಬೆಂಕಿ ತಗುಲಿ ಸುಟ್ಟು ಕರಕಲಾಗಿವೆ.

ಸಿಲಿಂಡರ್ ಬದಲಿಸುವಾಗ ಹತ್ತಿದ ಬೆಂಕಿಯಿಂದ ಆಟೋ, ದ್ವಿಚಕ್ರ ವಾಹನ ಸುಟ್ಟು ಕರಕಲು
ಸಿಲಿಂಡರ್ ಬದಲಿಸುವಾಗ ಹತ್ತಿದ ಬೆಂಕಿಯಿಂದ ಆಟೋ, ದ್ವಿಚಕ್ರ ವಾಹನ ಸುಟ್ಟು ಕರಕಲು (ETV Bharat)

By ETV Bharat Karnataka Team

Published : Sep 13, 2024, 11:00 AM IST

ಸಿಲಿಂಡರ್ ಬದಲಿಸುವಾಗ ಹತ್ತಿದ ಬೆಂಕಿಯಿಂದ ಆಟೋ, ದ್ವಿಚಕ್ರ ವಾಹನ ಸುಟ್ಟು ಕರಕಲು (ETV Bharat)

ಬೆಂಗಳೂರು: ಗ್ಯಾಸ್​​ ಸಿಲಿಂಡರ್​ಗೆ ಆಕಸ್ಮಿಕವಾಗಿ ಹತ್ತಿದ ಬೆಂಕಿಯಿಂದ ಒಂದು ಆಟೋ ಹಾಗೂ ಎರಡು ದ್ವಿಚಕ್ರ ವಾಹನಗಳು ಸುಟ್ಟು ಕರಕಲಾದ ಘಟನೆ ಕಳೆದ ರಾತ್ರಿ ವಿವೇಕ ನಗರ ಠಾಣಾ ವ್ಯಾಪ್ತಿಯ ಈಜಿಪುರದಲ್ಲಿ ನಡೆಯಿತು.

ರಸ್ತೆ ಪಕ್ಕದಲ್ಲಿದ್ದ ಕಬಾಬ್​ ಅಂಗಡಿ ಮಾಲೀಕ ಸಿಲಿಂಡರ್​ ಬದಲಿಸುವಾಗ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಈ ವೇಳೆ ಗಾಬರಿಗೊಂಡು ಸಿಲಿಂಡರ್ ಅ​ನ್ನು ಪಕ್ಕಕ್ಕೆ ತಳ್ಳಿದ್ದಾರೆ. ಇದರ ಪರಿಣಾಮ ಅಲ್ಲಿಯೇ ನಿಂತಿದ್ದ ಆಟೋ ಹಾಗೂ ಎರಡು ದ್ವಿಚಕ್ರ ವಾಹನಗಳಿಗೂ ಬೆಂಕಿ ತಗುಲಿತು. ನೋಡುನೋಡುತ್ತಿದ್ದಂತೆ ವಾಹನಗಳೆರಡೂ ಸುಟ್ಟು ಕರಕಲಾದವು.

ಅಗ್ನಿಶಾಮಕ‌ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದರು. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಇದನ್ನೂ ಓದಿ:ಹಳೆಯ ಮನೆ ಕೆಡವುತ್ತಿದ್ದಾಗ ದುರಂತ: ಮಂಗಳೂರಲ್ಲಿ ಲಿಂಟಲ್ ಸಹಿತ ಗೋಡೆ ಕುಸಿದು ಇಬ್ಬರು ಸಾವು - Old House Wall Collapse

ABOUT THE AUTHOR

...view details