ಗಂಗಾವತಿ(ಕೊಪ್ಪಳ):ದೀಪಾವಳಿ ಹಬ್ಬದ ಸಾಲು ಸಾಲು ರಜೆ ಮುಗಿಸಿಕೊಂಡು ಜನ ಮರಳಿ ನಗರ ಮತ್ತು ಪಟ್ಟಣಗಳಿಗೆ ಪ್ರಯಾಣ ಬೆಳೆಸುತ್ತಿದ್ದು, ನಗರದ ಬಸ್ ನಿಲ್ದಾಣ ಭಾನುವಾರ ಸಂಜೆ ಪ್ರಯಾಣಿಕರಿಂದ ಕಿಕ್ಕಿರಿದಿತ್ತು. ಸಮಯಕ್ಕೆ ಸರಿಯಾಗಿ ಬಸ್ ಸಿಗದೇ ಪ್ರಯಾಣಿಕರು ಪರದಾಡುತ್ತಿದ್ದ ದೃಶ್ಯ ಕಂಡುಬಂತು.
ಬಸ್ ನಿಲ್ದಾಣದಲ್ಲಿ ಬೆಂಗಳೂರು, ಮೈಸೂರು, ಕೋಲಾರ, ದಾವಣಗೆರೆ ಹಾಗೂ ಶಿವಮೊಗ್ಗಕ್ಕೆ ಹೋಗುವವರ ಸಂಖ್ಯೆ ಹೆಚ್ಚಿತ್ತು. ಹೀಗಾಗಿ ಬಸ್ ನಿಲ್ದಾಣದ ಪ್ರತಿಯೊಂದು ಫ್ಲಾಟ್ಫಾರಂಗಳು ಪ್ರಯಾಣಿಕರಿಂದ ಗಿಜಿಗುಡುತ್ತಿತ್ತು. ಬಸ್ ನಿಲ್ದಾಣಕ್ಕೆ ಬರುತ್ತಿದ್ದಂತೆಯೇ ಆಸನಗಳಿಗಾಗಿ ಜನ ಮುಗಿಬೀಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಪ್ರಯಾಣಿಕರಿಂದ ಗಿಜಿಗುಡುತ್ತಿರು ಬಸ್ ನಿಲ್ದಾಣ (ETV Bharat) ಗಂಗಾವತಿಯಿಂದ ಬೆಂಗಳೂರು, ತುಮಕೂರಿಗೆ ಹೋಗುವ ರಾತ್ರಿ ಸಂಚರಿಸುವ ಬಹುತೇಕ ಬಸ್ ಸೀಟ್ಗಳು ಬುಕ್ಕಿಂಗ್ ಆಗಿವೆ. ಹೀಗಾಗಿ ಪ್ರಯಾಣಿಕರು ಬೆಂಗಳೂರು ಕಡೆಗೆ ಹೋಗುವ ಯಾವುದೇ ಬಸ್ ಬಂದರೂ ಹತ್ತಲು ಪೈಪೋಟಿ ನಡೆಸುತ್ತಿದ್ದರು. ಬಹುತೇಕ ಖಾಸಗಿ ಬಸ್ಗಳ ಮಾಲೀಕರು ಟಿಕೆಟ್ ದರ ಹೆಚ್ಚಳ ಮಾಡಿರುವ ಹಿನ್ನೆಲೆ ಕಡಿಮೆ ದರದಲ್ಲಿ ಊರು ಸೇರಲು ಪ್ರಯಾಣಿಕರು ಅನಿವಾರ್ಯವಾಗಿ ಸಾರಿಗೆ ಬಸ್ಗಳನ್ನು ಅವಲಂಭಿಸಿದ್ದಾರೆ.
ಪ್ರಯಾಣಿಕರಿಂದ ಗಿಜಿಗುಡುತ್ತಿರು ಬಸ್ ನಿಲ್ದಾಣ (ETV Bharat) ಇದನ್ನೂ ಓದಿ:ಹುಬ್ಬಳ್ಳಿ: ರಜೆ ಮುಗಿಸಿ ಹಿಂದಿರುಗುವವರಿಗೆ ಹೆಚ್ಚುವರಿ ವಿಶೇಷ ಬಸ್ ವ್ಯವಸ್ಥೆ