ಚಿಕ್ಕೋಡಿ:ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಗುಂಡೇವಾಡಿ ಗ್ರಾಮದ ಶತಾಯುಷಿ ಹಾಗೂ ಸ್ವಾತಂತ್ರ್ಯ ಯೋಧೆ ಚಂದ್ರವ್ವ ಕಾಡಪ್ಪ ಗೋಲಬಾವಿ ವಯೋಸಹಜ ಅನಾರೋಗ್ಯದಿಂದ ಭಾನುವಾರ ನಿಧನರಾಗಿದ್ದಾರೆ.
ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಇಂಚಗೇರಿ ಮಠದ ಪೂಜ್ಯ ಮಠಾಧಿಪತಿಯಾಗಿದ್ದ ಮಾಧವಾನಂದ ಪ್ರಭುಜಿಯವರ ಜೊತೆಗೆ ತಮ್ಮ ಪತಿ ಕಾಡಪ್ಪ ಗೋಲಬಾವಿಯವರೊಂದಿಗೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸತತವಾಗಿ ಇವರು ಹೋರಾಟ ಮಾಡಿದ್ದರು. ಮಾಧವಾನಂದ ಪ್ರಭುಜಿ ಅವರ ನೇತೃತ್ವದಲ್ಲಿ ಸ್ವಾತಂತ್ರ ಹೋರಾಟಕ್ಕೆ ದಿವ್ಯ ಶಕ್ತಿಯನ್ನು ತುಂಬಿ ಇವರು ದೇಶ ಸೇವೆಗೈದವರು.