ಕರ್ನಾಟಕ

karnataka

ETV Bharat / state

ಗಾಲ್ಫ್ ಕಾರ್ಟ್ ಚಲಾಯಿಸಿ ದಾಖಲೆ ಬರೆದ ಮುರುಗೇಶ್ ನಿರಾಣಿಯ 3 ವರ್ಷದ ಮೊಮ್ಮಗ - GOLF CART

ಮಾಜಿ ಸಚಿವ ಮುರುಗೇಶ್​ ನಿರಾಣಿ ಅವರ ಮೊಮ್ಮಗ 3 ವರ್ಷ 10 ತಿಂಗಳಲ್ಲೇ ಗಾಲ್ಫ್ ಕಾರ್ಟ್ ಓಡಿಸಿ ಇಂಡಿಯಾ ಬುಕ್ ಆಫ್​ ರೆಕಾರ್ಡ್ ಹಾಗೂ ಏಷ್ಯಾ ಬುಕ್ ಆಫ್ ರೆಕಾರ್ಡ್​ನಲ್ಲಿ ದಾಖಲೆ ಬರೆದಿದ್ದಾನೆ.

3 ವರ್ಷ 10 ತಿಂಗಳಲ್ಲಿ ಗಾಲ್ಫ್ ಕಾರ್ಟ್ ಓಡಿಸಿ ಮಾಜಿ ಸಚಿವ ಮುರುಗೇಶ್​ ನಿರಾಣಿ ಮೊಮ್ಮಗ ಸಾಧನೆ
ಗಾಲ್ಫ್ ಕಾರ್ಟ್ ಚಲಾಯಿಸುತ್ತಿರುವ ಮುರುಗೇಶ್​ ನಿರಾಣಿ ಮೊಮ್ಮಗ; ಏಷ್ಯಾ ಬುಕ್ ಆಫ್ ರೆಕಾರ್ಡ್ ಗೌರವ (ETV Bharat)

By ETV Bharat Karnataka Team

Published : Nov 7, 2024, 10:23 AM IST

ಬಾಗಲಕೋಟೆ:ಮಾಜಿ ಸಚಿವ ಮುರುಗೇಶ್​ ನಿರಾಣಿ ಅವರ ಮೊಮ್ಮಗ ಸಮರ್ಥ್​ ವಿಜಯ್ ನಿರಾಣಿ 3 ವರ್ಷ 10 ತಿಂಗಳಲ್ಲೇ ಗಾಲ್ಫ್ ಕಾರ್ಟ್ ಓಡಿಸಿ ದಾಖಲೆ ಬರೆದಿದ್ದಾನೆ‌. ಬಾಲಕನ ಪ್ರತಿಭೆ​ ಗಮನಿಸಿದ ಮುರುಗೇಶ್ ನಿರಾಣಿಯವರ ಮಗ ವಿಜಯ್ ಹಾಗೂ ಅವರ ಪತ್ನಿ ಸುಶ್ಮಿತಾ, ಇಂಡಿಯಾ ಬುಕ್ ಆಫ್​ ರೆಕಾರ್ಡ್ ಹಾಗೂ ಏಷ್ಯಾ ಬುಕ್ ಆಫ್ ರೆಕಾರ್ಡ್ ಸಂಸ್ಥೆಗೆ ವೀಡಿಯೊ ಕಳುಹಿಸಿದ್ದರು.

ಈ ದಾಖಲೆ ಸಂಸ್ಥೆಗಳ ತೀರ್ಪುಗಾರರು ಮುಧೋಳ‌ ನಗರಕ್ಕೆ ಬಂದು ಪರೀಕ್ಷೆ ‌ಮಾಡಿದ್ದಾರೆ. ಬಾಲಕನ ಚಾಲನೆ ಕಂಡು ಇಂಡಿಯಾ ಬುಕ್ ಆಫ್ ರೆಕಾರ್ಡ್ ಹಾಗೂ ಏಷ್ಯಾ ಬುಕ್ ಆಫ್ ದಾಖಲೆ‌ ಪ್ರಶಸ್ತಿ, ಪದ‌ಕ‌ ನೀಡಿ ಗೌರವಿಸಿದ್ದಾರೆ.

ಗಾಲ್ಫ್ ಕಾರ್ಟ್ ಚಲಾಯಿಸುತ್ತಿರುವ ಮುರುಗೇಶ್​ ನಿರಾಣಿ ಮೊಮ್ಮಗ; ಏಷ್ಯಾ ಬುಕ್ ಆಫ್ ರೆಕಾರ್ಡ್ ಗೌರವ (ETV Bharat)

"ಸಮರ್ಥ​ನಿಗೆ ಇದು 2ನೇ ಅವಾರ್ಡ್​. ಅವನು ಮಾತನಾಡಲು ಶುರು ಮಾಡಿದಾಗಿನಿಂದ ಮನೆಯಲ್ಲಿ ಅಜ್ಜಿ ಶ್ಲೋಕ ಹೇಳಿಕೊಡುತ್ತಿದ್ದರು. ಹೀಗಾಗಿ 2 ವರ್ಷ 10 ತಿಂಗಳಿದ್ದಾಗ ಅತೀ ಹೆಚ್ಚು ಶ್ಲೋಕ ಹೇಳಿರುವುದಕ್ಕೆ ಇಂಡಿಯಾ ಬುಕ್​ ಆಫ್​ ರೆಕಾರ್ಡ್​ನಲ್ಲಿ ಪ್ರಶಸ್ತಿ ಬಂದಿತ್ತು. ಇದೀಗ ಗಾಲ್ಫ್ ಕಾರ್ಟ್ ಓಡಿಸಿರುವುದಕ್ಕೆ ಎರಡನೇ ಅವಾರ್ಡ್ ಬಂದಿದೆ​" ಎಂದು ತಾಯಿ ಸುಷ್ಮಿತಾ ಖುಷಿ ಹಂಚಿಕೊಂಡರು.

ಗಾಲ್ಫ್ ಕಾರ್ಟ್ ಚಲಾಯಿಸುತ್ತಿರುವ ಮುರುಗೇಶ್​ ನಿರಾಣಿ ಮೊಮ್ಮಗ (ETV Bharat)

"ಸಣ್ಣವನಿದ್ದಾಗಿನಿಂದಲೂ ಬೈಕ್​, ಕಾರುಗಳ ಮೇಲೆ ಅವನಿಗೆ ಬಹಳ ಆಸಕ್ತಿ ಇತ್ತು. ಮನೆಯ ಒಳಗಡೆ ಸೋಪಾ, ಟೇಬಲ್​ಗಳಿಗೆ ತಾಗದಂತೆ ತಿರುವು ತೆಗೆದುಕೊಂಡು ಬಹಳ ಚೆನ್ನಾಗಿ ಆಟಿಕೆ ಕಾರು ಓಡಿಸುತ್ತಿದ್ದ. ಆತನಿಗೆ ರಾತ್ರಿ ಮಲಗುವ ಮುನ್ನ, ಬೆಳಗ್ಗೆ ಎದ್ದಾಗ ಕಾರು, ಬೈಕ್​ ಬೇಕು. ಒಮ್ಮೆ ಶಾಲೆಗೆ ಹೋಗಬೇಕಾದರೆ ಚಾಲಕನ​ ಕಾಲ ಮೇಲೆ ಕುಳಿತುಕೊಂಡು ಅವನೇ ಕಾರು ಚಾಲನೆ ಮಾಡುತ್ತಿದ್ದ. ಹೀಗೆ ಒಂದು ದಿನ ಗಾಲ್ಫ್ ಕಾರ್ಟ್​ನಲ್ಲೂ ಕುಳಿತುಕೊಂಡಾಗ ಅವನೊಬ್ಬನೇ ಡ್ರೈವ್​ ಮಾಡಬೇಕೆಂಬ ಆಸೆ ಇತ್ತು. ಆಗ ಅವನಿಗೆ 3 ವರ್ಷ 10 ತಿಂಗಳಾಗಿತ್ತು" ಎಂದು ಅವರು ಹೇಳಿದರು.

ಗಾಲ್ಫ್ ಕಾರ್ಟ್ ಚಲಾಯಿಸುತ್ತಿರುವ ಮುರುಗೇಶ್​ ನಿರಾಣಿ ಮೊಮ್ಮಗ (ETV Bharat)

"ಸರಿಯಾಗಿ ಬ್ರೇಕ್​ ಹಾಕಲು ಕಾಲು ತಲುಪುತ್ತಿರಲಿಲ್ಲ. ಆಗ ನೀನು ಹೇಗೆ ಓಡಿಸುತ್ತಿಯಾ? ಅಂದಾಗ, " ನೋಡು ಮಮ್ಮಿ ನಾನು ನಿಂತುಕೊಂಡು ಓಡಿಸುತ್ತೇನೆ" ಎಂದು ನಿಂತುಕೊಂಡೇ ಎಕ್ಸ್​ಲೇಟರ್ ಅ​ನ್ನು ಟಚ್​ ಮಾಡಿ ನನಗೆ ಸಿಗುತ್ತದೆ ಎಂದು ತೋರಿಸಿದ. ಅವನಿಗೆ ಆತ್ಮವಿಶ್ವಾಸವಿದ್ದಾಗ ಅದಕ್ಕೆ ಕಡಿವಾಣ​ ಹಾಕುವುದು ಬೇಡ ಎಂದು ಹ್ಯಾಂಡ್​ ಬ್ರೇಕ್​ ಹಾಕಿ ಅನುಮತಿ ಕೊಟ್ಟೆ. ನಿಧಾನವಾಗಿ ನಮ್ಮನೆ ಕಾಂಪೌಂಡ್​ ಒಳಗೆ ಓಡಿಸಿದ್ದಾನೆ. ಅದನ್ನು ನೋಡಿದ ಮೇಲೆ ಮನೆಯವರನ್ನೆಲ್ಲರನ್ನೂ ಕರೆದು ಅವನ ತಾತ, ಅಜ್ಜಿಯನ್ನು ಕರೆದುಕೊಂಡು ಫ್ಯಾಕ್ಟರಿಯಲ್ಲಿ ಒಂದು ರೌಂಡ್​ ಹಾಕಿದ್ದಾನೆ. ಎಲ್ಲರೂ ಖುಷಿ ಪಟ್ಟರು" ಎಂದು ವಿವರಿಸಿದರು.

"ಅದಾಗಿ 2-3 ತಿಂಗಳಲ್ಲಿ ಗಿನ್ನಿಸ್​, ಲಿಮ್ಕಾ, ಏಷ್ಯಾ, ಇಂಡಿಯಾ ಬುಕ್​ ಆಫ್​ ರೆಕಾರ್ಡ್​ಗೆ ಅರ್ಜಿ ಹಾಕಿದೆವು. ಎಲ್ಲದರಲ್ಲೂ ಆಯ್ಕೆಯಾದ. ಸದ್ಯ ಇಂಡಿಯಾ ಹಾಗೂ ಏಷ್ಯಾ ರೆಕಾರ್ಡ್​ ಸಂಸ್ಥೆಯಿಂದ ಪ್ರಶಸ್ತಿಗಳು ಬಂದಿವೆ. ಇನ್ನು ಗಿನ್ನಿಸ್​​ ಕ್ಯಾಟಗರಿ, ಲಿಮ್ಕಾದಲ್ಲೂ ಆಯ್ಕೆಯಾಗಿದ್ದು ಅದೂ ಮುಂದಿನ ತಿಂಗಳು ಬರಲಿದೆ" ಎಂದು ಸುಶ್ಮಿತಾ ಹೇಳಿದ್ದಾರೆ.

ಇದನ್ನೂ ಓದಿ:'ರೂಬಿಕ್ ಕ್ಯೂಬಿಕ್ ಮೊಸಾಯಿಕ್' ಗೇಮ್​ನಲ್ಲಿ ಗಿನ್ನಿಸ್​ ದಾಖಲೆ ಸೇರಿದ ದಾವಣಗೆರೆ ವಿದ್ಯಾರ್ಥಿ

ABOUT THE AUTHOR

...view details