ಕರ್ನಾಟಕ

karnataka

ETV Bharat / state

ಕೆ.ಶಿವರಾಮ್ ಆರೋಗ್ಯ ಸ್ಥಿತಿ ಚಿಂತಾಜನಕ, ಐಸಿಯುನಲ್ಲಿ ಚಿಕಿತ್ಸೆ: ಅಳಿಯ ಪ್ರದೀಪ್ ಸ್ಪಷ್ಟನೆ - Heart Attack

ನಟ, ಮಾಜಿ ಐಎಎಸ್ ಅಧಿಕಾರಿ ಕೆ.ಶಿವರಾಮ್ ಅವರಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

former-ias-officer-k-shivaram-hospitalised-in-bengaluru
ಕೆ.ಶಿವರಾಮ್ ಆರೋಗ್ಯ ಸ್ಥಿತಿ ಚಿಂತಾಜನಕ, ಐಸಿಯುನಲ್ಲಿ ಚಿಕಿತ್ಸೆ: ಅಳಿಯ ಪ್ರದೀಪ್ ಸ್ಪಷ್ಟ

By ETV Bharat Karnataka Team

Published : Feb 29, 2024, 2:27 PM IST

ನಟ ಹಾಗೂ ಮಾಜಿ ಐಎಎಸ್ ಅಧಿಕಾರಿ ಕೆ ಶಿವರಾಮ್ ಅವರಿಗೆ ಹೃದಯಾಘಾತ ಸಂಭವಿಸಿದ್ದು, ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶಿವರಾಮ್ ಅವರ ಆರೋಗ್ಯ ಸ್ಥಿತಿ ಸದ್ಯ ಚಿಂತಾಜನಕವಾಗಿದ್ದು, ಅವರನ್ನು ಐಸಿಯುನಲ್ಲಿರಿಸಿ ಚಿಕಿತ್ಸೆ ಮುಂದುವರೆಸಲಾಗಿದೆ.

ಶಿವರಾಮ್ ಅವರಿಗೆ ಹೃದಯಾಘಾತವಾಗಿದೆ ಎಂಬ ವಿಚಾರ ತಿಳಿದು, ಆಸ್ಪತ್ರೆಯತ್ತ ಅವರ ಅಭಿಮಾನಿಗಳು ಧಾವಿಸಿದ್ದಾರೆ. ಶಿವರಾಮ್ ಅವರ ಅಳಿಯ ಹಾಗು ನಟ ಪ್ರದೀಪ್ ಕೂಡ ಕಳೆದ ವಾರದಿಂದಲೂ ಆಸ್ಪತ್ರೆಯಲ್ಲೇ ಇದ್ದಾರೆ.

ಅಳಿಯ ಪ್ರದೀಪ್ ಜೊತೆ ಶಿವರಾಮ್

ಈ ಬಗ್ಗೆ ಸ್ವತಃ ಶಿವರಾಮ್ ಅಳಿಯ ಪ್ರದೀಪ್ ಈಟಿವಿ ಭಾರತದ ಜೊತೆ ಮಾತನಾಡಿದ್ದು, ''ಶಿವರಾಮ್​ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಾನು ಕೂಡ ಆಸ್ಪತ್ರೆಯಲ್ಲೇ ಇದ್ದೇನೆ'' ಅಂತ ತಿಳಿಸಿದ್ದಾರೆ.

''ಶಿವರಾಮ್ ಫೆಬ್ರವರಿ 3 ರಂದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಒಂದು ಸಣ್ಣ ಶಸ್ತ್ರಚಿಕಿತ್ಸೆ ಆಗಿತ್ತು. ಅದೇ ಡಾಕ್ಟರ್ ಇಲ್ಲಿ ಇರುವುದರಿಂದ, ನಾವು ಇಲ್ಲಿಗೆ ದಾಖಲು ಮಾಡಿದ್ದೆವು. ಆಸ್ಪತ್ರೆಗೆ ಅಡ್ಮಿಟ್ ಆದ ಮೇಲೆ ಲೋ ಬಿಪಿ ಸಮಸ್ಯೆ ಶುರುವಾಯ್ತು. ಅವರಿಗೆ ಟ್ರೀಟ್‌ಮೆಂಟ್ ನಡೆಯುತ್ತಿತ್ತು. ಈಗ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದೆ'' ಅಂತಾ ಪ್ರದೀಪ್ ಮಾಹಿತಿ ನೀಡಿದರು.

ಇದನ್ನೂ ಓದಿ:ನಟ, ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಮ್‌ ಅವರಿ​ಗೆ ಹೃದಯಾಘಾತ; ಆಸ್ಪತ್ರೆಗೆ ದಾಖಲು

ABOUT THE AUTHOR

...view details