ಕರ್ನಾಟಕ

karnataka

ETV Bharat / state

ಬಿಪಿಎಲ್​ ಕಾರ್ಡ್ ರದ್ದು: ತಪ್ಪು ನಡೆದಿದೆ, ಪುನರ್ ಪರಿಶೀಲಿಸಿ ಸರಿಪಡಿಸುತ್ತೇವೆ: ಡಾ ಹೆಚ್ ಕೃಷ್ಣ - DR H KRISHNA

ಆಹಾರ ಆಯೋಗದ ಅಧ್ಯಕ್ಷ ಡಾ. ಹೆಚ್ ಕೃಷ್ಣ ಅವರು ಬಿಪಿಎಲ್​ ಕಾರ್ಡ್​ ರದ್ದತಿಯ ಕುರಿತು ಮಾತನಾಡಿದ್ದಾರೆ. ಆದಷ್ಟು ಬೇಗ ಪುನರ್ ಪರಿಶೀಲಿಸಿ ಸರಿಪಡಿಸುತ್ತೇವೆ ಎಂದಿದ್ದಾರೆ.

food-commission-chairman-dr-h-krishna
ಆಹಾರ ಆಯೋಗದ ಅಧ್ಯಕ್ಷ ಡಾ. ಹೆಚ್ ಕೃಷ್ಣ (ETV Bharat)

By ETV Bharat Karnataka Team

Published : Nov 21, 2024, 9:28 PM IST

ಮಂಡ್ಯ : ಬಿಪಿಎಲ್ ಕಾರ್ಡ್ ರದ್ದು ಮಾಡಿರುವುದು ಐಟಿ ಕಟ್ಟುವವರದ್ದು, ಸರ್ಕಾರಿ ಕೆಲಸದಲ್ಲಿವವರದ್ದು. ಆದರೆ, ಈಗ ಕೆಲವರು ಗೊತ್ತಿಲ್ಲದೆ ಫೋನ್​ ಪೇನಲ್ಲಿ ಯೂಸ್ ಮಾಡಿಕೊಳ್ಳುತ್ತಿದ್ದಾರೆ. ಈಗ ನಿಜವಾದ ಬಡವರಿಗೂ ನೋಟಿಸ್ ಬಂದಿದೆ. ಯಾರು ಐಟಿ ಪೇಯರ್ಸ್ ಅಂತ ಡಿಕ್ಲೇರ್ ಆಗಿದೆಯೋ ಅಷ್ಟು ಜನರದ್ದು ಕ್ಯಾನ್ಸಲ್ ಮಾಡಿದ್ದಾರೆ. ಅದೆಲ್ಲಾ ತಪ್ಪು ನಡೆದಿದೆ. ಅವರನ್ನ ಗುರುತಿಸಿ ಪರಿಶೀಲಿಸುತ್ತೇವೆ ಎಂದು ಆಹಾರ ಆಯೋಗದ ಅಧ್ಯಕ್ಷ ಡಾ. ಹೆಚ್ ಕೃಷ್ಣ ಅವರು ತಿಳಿಸಿದ್ದಾರೆ.

ಈ ಕುರಿತು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅದರಲ್ಲಿ ಬೈ ಮಿಸ್ಟೆಕ್​ ಪೋನ್​ ಪೇ ಯೂಸ್​ ಮಾಡುತ್ತಿದ್ದ ಬಡವರನ್ನೂ ಕೂಡ ಐಟಿ ಪೇಯರ್ಸ್​ ಎಂದು ಡಿಕ್ಲೇರ್​ ಮಾಡಿದ್ದಾರೆ. ಅದನ್ನ ಸಚಿವ ಮುನಿಯಪ್ಪ ಅವರ ಗಮನಕ್ಕೆ ತರಲಾಗಿದೆ. ಸದ್ಯಕ್ಕೆ ಆದಷ್ಟು ಬೇಗ 3 ದಿನ ಅಂತ ಟೈಮ್ ತೆಗೆದುಕೊಂಡಿದ್ರು, ಅವರು ಏಳು ದಿನ ಟೈಮ್ ಕೊಟ್ಟಿದ್ದಾರೆ. ಈ ಅವಧಿಯಲ್ಲಿಯೇ ಸರಿ ಮಾಡುತ್ತೇವೆ ಎಂದರು.

ಆಹಾರ ಆಯೋಗದ ಅಧ್ಯಕ್ಷ ಡಾ. ಹೆಚ್ ಕೃಷ್ಣ ಅವರು ಮಾತನಾಡಿದ್ದಾರೆ (ETV Bharat)

ಬಿಪಿಎಲ್​ ಕಾರ್ಡ್​ನಿಂದ ಬಿಡುವುದಕ್ಕೆ ನಾಲ್ಕು ಕಾರಣಗಳಿವೆ. 10 ಸ್ಕ್ವೇರ್​ಗಿಂತ ಮನೆ ಜಾಸ್ತಿ ಇದ್ರೆ. ಕಾರು ಇರುವವರನ್ನ, ಇನ್​ಕಮ್​ ಟ್ಯಾಕ್ಸ್​ ಪೇಯರ್ಸ್​ಗಳನ್ನ ತೆಗೆದಿದ್ದಾರೆ. ಸರ್ಕಾರಿ ಕೆಲಸದಲ್ಲಿರುವವರ ಹೆಸರಿನಲ್ಲಿ ಬಿಪಿಎಲ್​ ಕಾರ್ಡ್​ಗಳಿದ್ದರೆ ಅಂತಹವರನ್ನ ತೆಗೆದಿದ್ದಾರೆ ಎಂದು ತಿಳಿಸಿದರು.

ರಾಜ್ಯದಲ್ಲಿ BPL ಕಾರ್ಡ್ ರದ್ದಿನ ವಿಚಾರ ಸಾಕಷ್ಟು ಸದ್ದು ಮಾಡ್ತಿದೆ. ನಿಜವಾಗಿ ಯಾರು ಶ್ರೀಮಂತರಿದ್ದಾರೆ ಅವರಿಗೆ ಬಿಪಿಎಲ್ ಕಾರ್ಡ್​ ಕೊಡಬಾರದು ಎಂಬುದಷ್ಟೇ ಸರ್ಕಾರದ ಉದ್ದೇಶ. ಬಡವರಿಗೆ ವಂಚನೆ ಮಾಡಬೇಕು ಎಂಬ ಉದ್ದೇಶವೂ ಅಲ್ಲ, ಅನಿವಾರ್ಯವೂ ಅಲ್ಲ. ಹಾಗಾಗಿ ಆದಷ್ಟು ಬೇಗ ಅದು ಸರಿಯಾಗುತ್ತೆ ಎಂದು ಹೇಳಿದರು.

BPL ಕಾರ್ಡ್​ಗಳ ರದ್ದತಿಗೆ ಸ್ಪೆಷಲ್ ಡ್ರೈವ್: ಆಹಾರ ಇಲಾಖೆ ಜಂಟಿ ನಿರ್ದೇಶಕ ಕೃಷ್ಣ ಕುಮಾರ್ ಅವರು ಮಾತನಾಡಿ, ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಇಲಾಖೆಯ ಆಯುಕ್ತರ ಸೂಚನೆ ಮೇರೆಗೆ ಅನರ್ಹ BPL ಕಾರ್ಡ್​ಗಳ ರದ್ದತಿಗೆ ಸ್ಪೆಷಲ್ ಡ್ರೈವ್ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಅದರಲ್ಲಿ ನಾಲ್ಕು ವಿಭಾಗಗಳಾಗಿ ಗುರುತಿಸಿದ್ದೇವೆ. ಮೊದಲನೇ ಲೀಸ್ಟ್​ನಲ್ಲಿ ಮೃತರು, ಎರಡನೇ ಲೀಸ್ಟ್​ನಲ್ಲಿ 6 ತಿಂಗಳಿಂದ ಪಡಿತರ ಪಡೆಯದವರು, ಹಾಗೂ ಸರ್ಕಾರಿ ನೌಕರರು, ಆದಾಯ ತೆರಿಗೆ ಪಾವತಿದಾರರನ್ನ ಗುರುತಿಸಿ ರದ್ದತಿ ನಡೆಸಿದ್ದೇವೆ ಎಂದಿದ್ದಾರೆ.

ಇದರಲ್ಲಿ 21 ಸಾವಿರ ಮೃತರ ಪಡಿತರ ಚೀಟಿ ರದ್ದು ಮಾಡಲಾಗಿದೆ. ಆರು ತಿಂಗಳಿಂದ ಪಡಿತರ ಪಡೆಯದ 6,132 ಕಾರ್ಡ್ ಗಳು APL ಆಗಿ ಪರಿವರ್ತನೆಯಾಗಿದೆ. ಆದಾಯ ತೆರಿಗೆ ಪಾವತಿದಾರರೆಂದು 4,986 ಮಂದಿ ಪಟ್ಟಿ ಬಂದಿದೆ. ಆ ಪೈಕಿ 2,657 ಪಡಿತರ ಚೀಟಿಗಳನ್ನು ಎಪಿಎಲ್ ಆಗಿ ಪರಿವರ್ತನೆ ಮಾಡಿದ್ದೇವೆ. ಉಳಿದ 2,251 ಕಾರ್ಡ್​ಗಳನ್ನು ಪುನರ್ ಪರಿಶೀಲನೆಗೆ ಕ್ರಮ ಕೈಗೊಳ್ಳಲಾಗಿದೆ. 132 ಸರ್ಕಾರಿ ನೌಕರರ ಬಿಪಿಎಲ್ ಕಾರ್ಡ್ ರದ್ದು ಮಾಡಿ ಎಪಿಎಲ್​ ಆಗಿ ಪರಿವರ್ತನೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ :BPL ಕಾರ್ಡ್​: ರಾಜ್ಯ ಸರ್ಕಾರ ಭಿನ್ನ ರಾಗ ಹಾಡುತ್ತಿದೆ ಎಂದು ಕುಮಾರಸ್ವಾಮಿ ಆಕ್ರೋಶ

ABOUT THE AUTHOR

...view details