ಕರ್ನಾಟಕ

karnataka

ETV Bharat / state

ನಾವು ಮೊದಲು ಹಿಂದೂ, ನಂತರ ವೀರಶೈವ ಲಿಂಗಾಯತ: ವಚಾನನಂದ ಸ್ವಾಮೀಜಿ ಹೇಳಿಕೆ - vachananda swamiji - VACHANANDA SWAMIJI

ನಾವು ಮೊದಲು ಹಿಂದೂ. ನಂತರ ವೀರಶೈವ ಲಿಂಗಾಯತ . ಹಿಂದೂ ಅಂದರೆ ಒಂದು ಶ್ರೇಷ್ಠವಾದ ಭೂಮಿ. ನಿಮಗೆ ಏನು ಬೇಕು ಅದನ್ನು ಬೆಳೆಯರಿ ಎಂದು ಎಲ್ಲರಿಗೂ ಅವಕಾಶ ಕೊಟ್ಟಿದೆ ಎಂದು ವಚನಾನಂದ ಸ್ವಾಮೀಜಿ ಹೇಳಿದರು.

ವಚಾನನಂದ ಸ್ವಾಮೀಜಿ
ವಚಾನನಂದ ಸ್ವಾಮೀಜಿ (ETV Bharat)

By ETV Bharat Karnataka Team

Published : Aug 19, 2024, 7:46 AM IST

ವಚಾನನಂದ ಸ್ವಾಮೀಜಿ ಹೇಳಿಕೆ (ETV Bharat)

ದಾವಣಗೆರೆ: "ನಾವು ಮೊದಲು ಹಿಂದೂ ನಂತರ ವೀರಶೈವ ಲಿಂಗಾಯತ" ಎನ್ನುವ ಮೂಲಕವೀರಶೈವ ಲಿಂಗಾಯತ ಹಿಂದೂ ಧರ್ಮದ ಒಂದು ಭಾಗ ಎಂದಿದ್ದ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಜಿಲ್ಲೆಯ ಹರಿಹರದ ಪಂಚಮಸಾಲಿ ಪೀಠದಲ್ಲಿ ಮಾತನಾಡಿದ ಅವರು, "ಹಿಂದೂ ಲಿಂಗಾಯತ ಬಗ್ಗೆ ಸಾಕಷ್ಟು ಚರ್ಚೆ ನಡಿಯುತ್ತಿದೆ. ನಾವು ಮೊದಲು ಹಿಂದೂ ನಂತರ ವೀರಶೈವ ಲಿಂಗಾಯತ. ಸಾವಿರ ವರ್ಷಗಳ ಇತಿಹಾಸ ಇರುವುದು, ಎಲ್ಲರನ್ನೂ ಒಳಗೊಂಡಿರುವುದೇ ಹಿಂದೂ. ಅಲ್ಲಿ ಜೈನ ಇದೆ, ಬೌದ್ಧ ಇದೆ, ಇಸ್ಲಾಂ, ಸಿಖ್​, ಲಿಂಗಾಯತ, ಪಾರ್ಸಿ, ವೈಷ್ಣವರು ಇದ್ದಾರೆ. ಎಲ್ಲ ಪರಂಪರೆಗಳಿಗೆ ಹಿಂದೂ ಧರ್ಮ ಅವಕಾಶ ಮಾಡಿಕೊಟ್ಟಿದೆ. ಹಿಂದೂ ಅಂದರೆ ಒಂದು ಶ್ರೇಷ್ಠವಾದ ಭೂಮಿ. ನಿಮಗೆ ಏನು ಬೇಕು ಅದನ್ನು ಬೆಳೆಯರಿ ಎಂದು ಎಲ್ಲರಿಗೂ ಅವಕಾಶ ಕೊಟ್ಟಿದೆ. ಧರ್ಮ ಸಂಸ್ಥಾಪಕರಿಗೆ ತಮ್ಮ ವಿಚಾರಗಳನ್ನು ಹೇಳಿಕೊಳ್ಳಲು ಅವಕಾಶ ಕೊಟ್ಟಿದ್ದು ಹಿಂದೂ ಧರ್ಮ. ಎಲ್ಲವೂ ಹಿಂದೂನಲ್ಲೇ ಹುಟ್ಟಿ, ಹಿಂದೂನಲ್ಲೇ ಬೆಳೆದು ನಂತರ ಹಿಂದುನಲ್ಲಿಯೇ ಲೀನವಾಗಬೇಕು" ಎಂದರು.

"ನಮ್ಮದು ವಿವಿಧತೆ ಹೊಂದಿರುವ ದೇಶ. ಇಲ್ಲಿಯವರೆಗೆ ಅವರವರಿಗೆ ಅವರದೇ ಆದ ದೇವರು ಇದ್ದಾರೆ. ಅದನ್ನೇ ನಂಬಿ ಅವರು ಪೂಜೆ ಮಾಡುತ್ತಾರೆ. ಅವರ ನಂಬಿಕೆ ಮತ್ತು ನಿಷ್ಠೆಗಳಿಗೆ ಘಾಸಿ ಆಗುವ ಕೆಲಸ ಮಾಡಬೇಡಿ. ಭಾವನೆಗಳ ಜೊತೆ ಚೆಲ್ಲಾಟ ಆಡಬೇಡಿ. ಶರಣರಿಗೆ ಸಹ ಅವರದೇ ಆದ ದೇವರು ಇದ್ದರು. ಏಕದೇವೋಪಾಸನೆಯನ್ನು ಬಸವಣ್ಣ ಒತ್ತಿ ಒತ್ತಿ ಹೇಳಿದ್ದಾರೆ. ಯಾವುದೇ ದೇವರನ್ನು ನಂಬಿ. ಆದರೆ, ಒಬ್ಬ ದೇವರನ್ನು ಮಾತ್ರ ನಂಬಿ ಎಂದಿದ್ದಾರೆ. ಪೂಜೆ ಮಾಡುವವರಿಗೆ ತೊಂದರೆವಾಗಿಲ್ಲವೆಂದರೆ ನಿಮಗೇಕೆ ತೊಂದರೆ. ನಿಮ್ಮ ವಿಚಾರ ನೀವು ಹೇಳಿ, ಅದನ್ನು ಬಿಟ್ಟು ಮತ್ತೊಬ್ಬರ ವಿಚಾರಗಳಿಗೆ ಘಾಸಿ ಮಾಡಬೇಡಿ" ಎಂದು ಸ್ವಾಮೀಜಿ ಹೇಳಿದರು.‌

ವೀರಶೈವ ಮತ್ತು ಲಿಂಗಾಯತರಲ್ಲಿ ತಾತ್ವಿಕ ವ್ಯತ್ಯಾಸ: "ವೀರಶೈವ ಮತ್ತು ಲಿಂಗಾಯತರಲ್ಲಿ ತಾತ್ವಿಕ ವ್ಯತ್ಯಾಸವಿದೆ. ಸಾಮಾಜಿಕವಾಗಿ ವೀರಶೈವ ಲಿಂಗಾಯತ ಎರಡು ಒಂದೇ. ವೀರಶೈವ ಲಿಂಗಾಯತ ಅಳಿಸಲು ನೂರಾರು ವರ್ಷಗಳಿಂದ ಸಾಕಷ್ಟು ಪ್ರಯತ್ನಗಳು ವಿಫಲವಾಗಿವೆ. ನಾನು ಲಿಂಗಾಯತ ಧರ್ಮ ವಿರೋಧಿ ಅಲ್ಲ. ಸ್ವತಂತ್ರ ಧರ್ಮ ಆಗುವುದರ ವಿರೋಧಿ ಅಲ್ಲ. ಆದರೆ ಹಿಂದೂಗಳನ್ನು ಜರಿಯಲು ಹೋಗಬೇಡಿ. ಪ್ರತ್ಯೇಕ ಧರ್ಮವಾಗಿರುವ ಸಿಖ್​, ಬೌದ್ಧ, ಜೈನರು ಯಾರೂ ತಾವು ಹಿಂದೂ ಅಲ್ಲ ಅಂತ ಹೇಳುವುದಿಲ್ಲ. ಸ್ವತಂತ್ರ ಧರ್ಮ ಆದರೂ ಅವರು ಯಾವತ್ತೂ ಹಿಂದೂ ತತ್ವಗಳನ್ನು ವಿರೋಧ ಮಾಡಿಲ್ಲ" ಎಂದು ವಚನಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.

ಇದನ್ನೂ ಓದಿ:ಜನಗಣತಿಯಲ್ಲಿ ಲಿಂಗಾಯತ ಎಂದೋ, ಪಂಚಮಸಾಲಿ ಎಂದು ಬರೆಸಲು ತೀರ್ಮಾನಿಸಬೇಕಿದೆ: ವಚನಾನಂದ ಶ್ರೀ - Vachanananda Shri

ABOUT THE AUTHOR

...view details