ಕರ್ನಾಟಕ

karnataka

ETV Bharat / state

ಅತಿಕ್ರಮ ಪ್ರವೇಶಿಸಿ ಖಾಲಿ ಜಾಗ ಕಬಳಿಸಿದ ಆರೋಪ: ನಟ ಮಯೂರ್ ಪಟೇಲ್ ವಿರುದ್ಧ ಎಫ್ಐಆರ್ - FIR AGAINST ACTOR

ಅತಿಕ್ರಮ ಪ್ರವೇಶಿಸಿ ಖಾಲಿ ಜಾಗ ಕಬಳಿಸಿದ ಆರೋಪದಡಿ ನಟ ಮಯೂರ್ ಪಟೇಲ್ ವಿರುದ್ಧ ಎಫ್ಐಆರ್ ದಾಖಲಾಗಿದೆ.

ACTOR MAYUR PATEL
ನಟ ಮಯೂರ್ ಪಟೇಲ್ (ETV Bharat)

By ETV Bharat Karnataka Team

Published : Oct 19, 2024, 8:49 PM IST

ಬೆಂಗಳೂರು:ಅತಿಕ್ರಮವಾಗಿ ಪ್ರವೇಶಿಸಿ ಅಪರಿಚಿತರಿಂದ ಕಾಂಪೌಂಡ್ ಅನ್ನು ಒಡೆಸಿ ಜಾಗವನ್ನ ಸ್ವಾಧೀನ ಪಡಿಸಿಕೊಂಡಿರುವುದಾಗಿ ನಟ ಮಯೂರ್ ಪಟೇಲ್ ಸೇರಿ ಇತರರ ವಿರುದ್ಧ ಶಾಲಿನಿ ಎಂಬುವರು ಹೆಚ್ಎಸ್​ಆರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮಹಿಳೆ‌ ನೀಡಿದ ದೂರು ಆಧರಿಸಿ ಸುಬ್ರಮಣ್ಯ ಮಾಸ್, ಭಟ್ ಹಾಗೂ ಮಯೂರ್ ಪಟೇಲ್ ವಿರುದ್ಧ ಎಫ್ಐಆರ್ ದಾಖಲಾಗಿದೆ.

ದೂರುದಾರ ಮಹಿಳೆ ಶಾಲಿನಿ ಅವರು ಸೋಮಸುಂದರಪಾಳ್ಯದಲ್ಲಿ ವಾಸವಾಗಿದ್ದು, ಬೇಗೂರು ಹೋಬಳಿಯ ಹರಳುಕುಂಟೆ ಗ್ರಾಮದ ಸರ್ವೇ ನಂಬರ್ 55/10 ರಲ್ಲಿ 14.5 ಗುಂಟೆ ಜಾಗವನ್ನ ಪತಿ ಮಂಜುನಾಥ್ ರೆಡ್ಡಿಗೆ ದಾನವಾಗಿ ಬಂದಿರುತ್ತದೆ. ಈ ಸ್ವತ್ತಿಗೆ ಸುತ್ತಲೂ ಕಾಂಪೌಂಡ್ ಹಾಕಲಾಗಿತ್ತು. ನ್ಯಾಯಾಲಯದಲ್ಲಿ ಎನ್‌‌.ಆರ್ ಭಟ್ ಹಾಗೂ ಮಯೂರ್ ಪಟೇಲ್ ಹೂಡಿದ್ದ ದಾವೆ ಸಂಬಂಧ ಸಿವಿಲ್ ನ್ಯಾಯಾಲಯವು ಸ್ವತ್ತಿನ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿತ್ತು. ಹೀಗಿದ್ದರೂ ನಿನ್ನೆ ಸುಮಾರು 50ರಿಂದ 75 ಮಂದಿಯನ್ನ ಕರೆದುಕೊಂಡು ಬಂದು ಜೆಸಿಬಿ ಮೂಲಕ ಕಾಂಪೌಂಡ್ ಉರುಳಿಸಿದ್ದಾರೆ.‌ ಈ ಮೂಲಕ ನ್ಯಾಯಾಲಯದ ಆದೇಶ ಉಲ್ಲಂಘಿಸಿದ್ದಾರೆ. ಅತಿಕ್ರಮ ಪ್ರವೇಶಿಸಿ ಕಾಂಪೌಂಡ್ ಉರುಳಿಸಿ ಸುಮಾರು 5ರಿಂದ 10 ಲಕ್ಷ ನಷ್ಟವಾಗಿರುವುದಾಗಿ ದೂರಿನಲ್ಲಿ‌ ಶಾಲಿನಿ ಅವರು ಉಲ್ಲೇಖಿಸಿದ್ದಾರೆ.‌ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಸಿಎಂ ಪತ್ನಿ ಪಾರ್ವತಿ ವಿರುದ್ಧ ಮತ್ತೊಂದು ಭೂ ಅಕ್ರಮ ಆರೋಪ ಮಾಡಿದ ಆರ್​ಟಿಐ ಕಾರ್ಯಕರ್ತ

ABOUT THE AUTHOR

...view details