ಕರ್ನಾಟಕ

karnataka

ETV Bharat / state

ಶಿವಮೊಗ್ಗ: ಗೀತಾ ಶಿವರಾಜ್​ಕುಮಾರ್ ಗೆಲ್ತಾರೆಂದು ಹೊಸ ಟ್ರ್ಯಾಕ್ಟರನ್ನೇ ಪಣಕ್ಕಿಟ್ಟ ರೈತ! - FARMER BETTING ON ELECTION RESULT - FARMER BETTING ON ELECTION RESULT

ಶಿಕಾರಿಪುರ ತಾಲೂಕು ಕಲ್ಮನೆ ಗ್ರಾಮದ ರೈತ ರವೀಂದ್ರ ಲೋಕಸಭಾ ಚುನಾವಣೆಗಾಗಿ ತನ್ನ ಟ್ರ್ಯಾಕ್ಟರನ್ನೇ ಬಾಜಿ ಕಟ್ಟಿದ್ದಾರೆ.

Farmer Ravindra
ರೈತ ರವೀಂದ್ರ (ETV Bharat)

By ETV Bharat Karnataka Team

Published : May 12, 2024, 5:42 PM IST

ರೈತ ರವೀಂದ್ರ (ETV Bharat)

ಶಿವಮೊಗ್ಗ:ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್​ಕುಮಾರ್ ಈ ಬಾರಿಯ ಚುನಾವಣೆಯಲ್ಲಿ ನೂರಕ್ಕೆ ನೂರು ಗೆಲ್ಲುತ್ತಾರೆಂದು ರೈತನೋರ್ವ ತನ್ನ ಟ್ರ್ಯಾಕ್ಟರನ್ನೇ ಪಣಕ್ಕೆ ಇಟ್ಟಿದ್ದಾರೆ.

ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆಯೇ ಎಲ್ಲರ ಚಿತ್ತ ಯಾರು ಗೆಲ್ತಾರೆಂದು ಫಲಿತಾಂಶದ ಕಡೆ ಹೋಗಿದೆ. ಈ ನಡುವೆ ಕಾಂಗ್ರೆಸ್ ಅಭಿಮಾನಿಗಳು ತಮ್ಮ ಅಭ್ಯರ್ಥಿ ಗೆಲ್ತಾರೆಂದು ಬಾಜಿ ಕಟ್ಟಲು ಪ್ರಾರಂಭಿಸಿದ್ದಾರೆ.

ಟ್ರ್ಯಾಕ್ಟರ್ ಪಣಕ್ಕಿಟ್ಟ ರೈತ ರವೀಂದ್ರ : ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್​ಕುಮಾರ್ ಗೆದ್ದೇ ಗೆಲ್ಲುತ್ತಾರೆ ಎಂದು ಶಿಕಾರಿಪುರ ತಾಲೂಕು ಕಲ್ಮನೆ ಗ್ರಾಮದ ರೈತ ರವೀಂದ್ರ ತನ್ನ ಟ್ರ್ಯಾಕ್ಟರನ್ನೇ ಬಾಜಿ ಕಟ್ಟಿದ್ದಾರೆ. ರವೀಂದ್ರ ಅಪ್ಪಟ ಕಾಂಗ್ರೆಸ್ ಅಭಿಮಾನಿಯಾಗಿದ್ದಾರೆ. ಇವರು ಇತ್ತೀಚಿಗೆ ತಮ್ಮ ಹಳೇ ಟ್ರಾಕ್ಟರ್ ಕೊಟ್ಟು ಹೊಸ ಟ್ರಾಕ್ಟರ್ ಅನ್ನು ಮನೆಗೆ ತಂದಿದ್ದಾರೆ. ಈಗ ಈ ಟ್ರಾಕ್ಟರನ್ನೇ ಪಣಕ್ಕೆ ಇಟ್ಟಿದ್ದಾರೆ.

ನಮ್ಮ ಪಕ್ಷದ ಅಭ್ಯರ್ಥಿ ಗೀತಾ ಶಿವರಾಜ್​ಕುಮಾರ್ ಗೆದ್ದೇ ಗೆಲ್ಲುತ್ತಾರೆ. ಬಿಜೆಪಿಯವರು ಯಾರಾದರೂ ಬಾಜಿ ಕಟ್ಟಿ ಎಂದು ಓಪನ್ ಚಾಲೆಂಜ್ ಮಾಡಿದ್ದಾರೆ. ಈ ಬಾರಿ ಗ್ಯಾರಂಟಿ ಯೋಜನೆಯಿಂದಾಗಿ ಕಾಂಗ್ರೆಸ್​ ಅಭ್ಯರ್ಥಿ ಗೀತಾ ಶಿವರಾಜ್​ಕುಮಾರ್ ಗೆಲ್ಲುತ್ತಾರೆ ಎಂದು ದೃಢ ವಿಶ್ವಾಸದಿಂದ ಇದ್ದಾರೆ.

ಇದನ್ನೂ ಓದಿ :ದೊಡ್ಮನೆ ಸೊಸೆ ಪರ ದುನಿಯಾ ವಿಜಿ, ಚಿಕ್ಕಣ್ಣ, ಆ್ಯಂಕರ್ ಅನುಶ್ರೀ ಮತ ಶಿಕಾರಿ - Sandalwood Celebrities Campaign

ABOUT THE AUTHOR

...view details