ಶಿರಹಟ್ಟಿಮಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹುಬ್ಬಳ್ಳಿ:ನನ್ನನ್ನು ಚುನಾವಣೆಯಿಂದ ಹಿಂದೆ ಸರಿಸೋ ವ್ಯಕ್ತಿ ಭೂಮಿ ಮೇಲೆ ಹುಟ್ಟಿಲ್ಲ. ಹಿಂದೆ ಸರಿಸೋ ಊಹಾಪೋಹ ಎಲ್ಲವೂ ಸುಳ್ಳು. ಎಲ್ಲ ಪಕ್ಷಗಳೂ ನನಗೆ ಸಮಾನ ಎಂದು ಶಿರಹಟ್ಟಿಮಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ತಿಳಿಸಿದರು.
ನಗರದ ನೆಹರೂ ಮೈದಾನದಲ್ಲಿ ಇಂದು ಮಾತನಾಡಿದ ಅವರು, ಯಾವುದೇ ಪಕ್ಷಗಳ ತೀರ್ಮಾನವನ್ನು ನಾನು ಸ್ವತಂತ್ರವಾಗಿ ಹೇಳಲ್ಲ. ಅಕಸ್ಮಾತ್ ಅಂತಹ ತೀರ್ಮಾನ ಬಂದ್ರೆ ನಾನು ಮತ್ತೆ ಚರ್ಚೆ ಮಾಡ್ತೀನಿ ಎಂದರು.
ನನ್ನನ್ನು ಬಹುಸಂಖ್ಯಾತರು ಸಂಪರ್ಕ ಮಾಡಿದ್ದಾರೆ. ಎಲ್ಲ ವಿಚಾರಗಳು ತಲೆಯಲ್ಲಿವೆ. ನಾನು ವಿಚಾರವನ್ನು ಸಾರ್ವಜನಿಕರ ಮುಂದಿಟ್ಟು ನಿರ್ಧಾರ ತೆಗೆದುಕೊಳ್ಳುತ್ತೇನೆ. ಜನ ಬಯಸಿರುವುದರಿಂದ ರಾಜಕೀಯಕ್ಕೆ ಬಂದಿದ್ದೇನೆ. ನಾನು ಪಕ್ಷೇತರ ಅಂತಾ ಘೋಷಣೆ ಮಾಡಿದ್ದೇನೆ. ಯಡಿಯೂರಪ್ಪನವರು ನನ್ನನ್ನು ಭೇಟಿಯಾಗಿಲ್ಲ. 18ರಂದು ನಾಮಪತ್ರ ಸಲ್ಲಿಸುವ ತೀರ್ಮಾನ ಮಾಡಿದ್ದೇನೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಪಕ್ಷೇತರ ಅಭ್ಯರ್ಥಿ ಎಂದು ಘೋಷಣೆ ಮಾಡಿದ ಬಳಿಕ ಇದೇ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ ಸ್ವಾಮೀಜಿಯನ್ನು ಭಕ್ತರು ಅದ್ಧೂರಿಯಾಗಿ ಸ್ವಾಗತಿಸಿ, ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿದರು. ನೆಹರೂ ಮೈದಾನದಿಂದ ಮೂರುಸಾವಿರ ಮಠದವರೆಗೂ ಮೆರವಣಿಗೆ ನಡೆಯಿತು.
ಇದನ್ನೂ ಓದಿ:ಧಾರವಾಡದಲ್ಲಿ ಜೋಶಿ Vs ದಿಂಗಾಲೇಶ್ವರ ಶ್ರೀ: ಎರಡನೇ ಸಲ ಮಠಾಧೀಶರು ಕಣಕ್ಕೆ; ಲಿಂಗಾಯತ ಮತದಾರರ ಒಲವು ಯಾರತ್ತ? - Dharwad Constituency