ಮೈಸೂರು:''ನನ್ನ 30 ವರ್ಷದ ರಾಜಕೀಯದಲ್ಲಿ ಇಂತವುಗಳನ್ನ ಬಹಳ ನೋಡಿದ್ದೇನೆ. ನಾನು ಯಾವುದಕ್ಕೂ, ಯಾವತ್ತೂ ಎಂದೆಗುಂದುವುದಿಲ್ಲ. ಎಲ್ಲಾದಕ್ಕೂ ಕಾಲವೇ ಉತ್ತರ ನೀಡಲಿದೆ'' ಎಂದು ಮೈಸೂರಿನಲ್ಲಿ ಶಾಸಕ ಹೆಚ್.ಡಿ. ರೇವಣ್ಣ ಹೇಳಿಕೆ ನೀಡಿದರು.
ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆದ ಹೆಚ್.ಡಿ. ರೇವಣ್ಣ (ETV Bharat) ನಾಡ ಅಧಿದೇವತೆ ಚಾಮುಂಡೇಶ್ವರಿ ತಾಯಿಯ ದರ್ಶನದ ಬಳಿಕ ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ಮಾಧ್ಯಮಗಳ ಜೊತೆ ಅನೌಪಚಾರಿಕವಾಗಿ ಅವರು ಮಾತನಾಡಿದರು. ನಮಗೆ ಸದ್ಯಕ್ಕೆ ದೇವರು ಬಿಟ್ಟರೇ ಇನ್ಯಾರು ಎಂದು ಮಾತು ಆರಂಭಿಸಿದ ಜೆಡಿಎಸ್ನ ಶಾಸಕ ಹೆಚ್.ಡಿ. ರೇವಣ್ಣ ಅವರು, ''ನಾನು ಸದ್ಯಕ್ಕೆ ಜೈಲಿನಲ್ಲಿರುವ ಪ್ರಜ್ವಲ್ ಅವರ ಭೇಟಿಗೆ ಹೋಗುವುದಿಲ್ಲ. ನಾನು ಪ್ರಜ್ವಲ್ ಭೇಟಿಗೆ ಹೋದರೆ ಏನಾದರೂ ಹೇಳಿಬಿಟ್ಟಾರು ಅಂತ, ನಾನು ಪ್ರಜ್ವಲ್ ಭೇಟಿಗೆ ಸದ್ಯಕ್ಕೆ ಹೋಗುವುದಿಲ್ಲ. ನಿನ್ನೆ ನನ್ನ ಪತ್ನಿ ಹೋಗಿದ್ದಳು, ಮಗ ಅನ್ನೋ ಮಮತೆಯಿಂದ ತಾಯಿ ಹೋಗಿದ್ದರು. ತಾಯಿ- ಮಗ ಏನು ಮಾತನಾಡಿದರೋ ನನಗೆ ಗೊತ್ತಿಲ್ಲ. ಅದನ್ನ ಕೇಳಲು ಸಹ ಹೋಗಿಲ್ಲ'' ಎಂದರು.
ಚಾಮುಂಡೇಶ್ವರಿ ತಾಯಿ ದೇವಸ್ಥಾನದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಜೆಡಿಎಸ್ ಶಾಸಕ ಹೆಚ್.ಡಿ. ರೇವಣ್ಣ (ETV Bharat) ಇದನ್ನೂ ಓದಿ:ಪ್ರಜ್ವಲ್ ರೇವಣ್ಣ ವಿರುದ್ಧ ನಾಲ್ಕನೇ ಪ್ರಕರಣ ದಾಖಲು: ಸಂತ್ರಸ್ತೆಯ ಆರೋಪವೇನು? - Prajwal Revanna Sexual Abuse Case
ಸೂರಜ್ ರೇವಣ್ಣ ಮಹಾನ್ ದೈವಭಕ್ತ- ಹೆಚ್.ಡಿ. ರೇವಣ್ಣ:''ಸೂರಜ್ ರೇವಣ್ಣ ಮಹಾನ್ ದೈವ ಭಕ್ತ, ಅವನು ಬೇಗ ಹೊರ ಬರುತ್ತಾನೆ ಎಂಬ ನಂಬಿಕೆ ಇದೆ. ಉಳಿದ ಯಾವುದೇ ವಿಚಾರಗಳನ್ನ ನಾನು ಮಾತನಾಡುವುದಿಲ್ಲ. ಎಲ್ಲವೂ ನ್ಯಾಯಾಲಯದ ಮುಂದೆ ಇದೆ. ಎಲ್ಲವೂ ಮುಗಿಯಲಿ ಆಮೇಲೆ ಎಲ್ಲಾವನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತೇನೆ. ಎಂತಹವರಿಗೂ ಕಷ್ಟ ಬರುತ್ತದೆ. ಅದರಲ್ಲಿ ನಮ್ಮದೇನು'' ಎಂದು ಹೆಚ್.ಡಿ. ರೇವಣ್ಣ ತಿಳಿಸಿದರು.
ಚಾಮುಂಡೇಶ್ವರಿ ತಾಯಿ ದೇವಸ್ಥಾನಕ್ಕೆ ಜೆಡಿಎಸ್ ಶಾಸಕ ಹೆಚ್.ಡಿ. ರೇವಣ್ಣ ಭೇಟಿ (ETV Bharat) ಇದನ್ನೂ ಓದಿ:ಲೈಂಗಿಕ ದೌರ್ಜನ್ಯ ಪ್ರಕರಣ: ಸೂರಜ್ ರೇವಣ್ಣ ಕಸ್ಟಡಿ ಅವಧಿ ವಿಸ್ತರಣೆ - Suraj Revanna Case