ಕರ್ನಾಟಕ

karnataka

ETV Bharat / state

ಚಾಮುಂಡಿ ಬೆಟ್ಟಕ್ಕೆ ಎಲೆಕ್ಟ್ರಿಕ್ ಬಸ್​ : 200 ಬಸ್​ಗಳಿಗೆ ಡಿಪಿಆರ್ ಸಲ್ಲಿಕೆ - ELECTRIC BUS TO CHAMUNDI HILL

ಮೈಸೂರು ವಿಭಾಗಕ್ಕೆ 200 ಎಲೆಕ್ಟ್ರಿಕ್​ ಬಸ್​ ನೀಡಲು ಕೆ.ಎಸ್.‌ಆರ್.‌ಟಿ.ಸಿ. ಡಿಪಿಆರ್​​ ಸಲ್ಲಿಸಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಯಡಿ ಎಲೆಕ್ಟ್ರಿಕ್​ ಬಸ್​ ಲಭ್ಯವಾಗಲಿದೆ.

ELECTRIC BUS TO CHAMUNDI HILL IN MYSURU: DPR SUBMITTED FOR 200 BUSES
ಚಾಮುಂಡಿ ಬೆಟ್ಟಕ್ಕೆ ಎಲೆಕ್ಟ್ರಿಕ್ ಬಸ್​ : 200 ಬಸ್​ಗಳಿಗೆ ಡಿಪಿಆರ್ ಸಲ್ಲಿಕೆ (ETV Bharat)

By ETV Bharat Karnataka Team

Published : Feb 3, 2025, 2:12 PM IST

ಮೈಸೂರು:ಪ್ರವಾಸಿಗರ ನಗರಿ ಮೈಸೂರಿಗೆ ಪರಿಸರ ಸ್ನೇಹಿ ಹಾಗೂ ಸುಸ್ಥಿರ ಅಭಿವೃದ್ಧಿಗೆ ನೆರವು, ದೂರ ದೃಷ್ಟಿಯಿಂದ ಮೈಸೂರು ವಿಭಾಗಕ್ಕೆ 200 ಎಲೆಕ್ಟ್ರಿಕ್​ ಬಸ್​ ನೀಡಲು ಕೆ.ಎಸ್.‌ಆರ್.‌ಟಿ.ಸಿ. ಡಿಪಿಆರ್​​ ಸಲ್ಲಿಸಿದೆ.

ಈ ಬಸ್​​ಗಳು ನಗರದ ಪ್ರಮುಖ ಸ್ಥಳ ಚಾಮುಂಡಿಬೆಟ್ಟ ಹಾಗೂ ಇನ್ಫೋಸಿಸ್ ಕ್ಯಾಂಪಸ್ ಸೇರಿದಂತೆ ಹಲವು ಕಡೆ ಸಂಚಾರ ನಡೆಸಲಿವೆ. ಈ ಬಗ್ಗೆ ಕೆ.ಎಸ್.‌ಆರ್.‌ಟಿ.ಸಿ. ನಿಯಾಂತ್ರಣಾಧಿಕಾರಿ ಮಾಹಿತಿ ನೀಡಿದ್ದಾರೆ.

ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರವಾದ ಚಾಮುಂಡಿ ಬೆಟ್ಟಕ್ಕೆ ರಾಜ್ಯವಷ್ಟೇ ಅಲ್ಲ, ದೇಶ, ವಿದೇಶಗಳಿಂದಲೂ ಜನರು ಆಗಮಿಸುತ್ತಾರೆ. ಚಾಮುಂಡಿ ಬೆಟ್ಡದ ಸಮಗ್ರ ಅಭಿವೃದ್ಧಿಗೆ ಕೇಂದ್ರ ಸರ್ಕಾರದ 'ಪ್ರಸಾದ್​' ಯೋಜನೆಯಡಿ ಈಗಾಗಲೇ 45.70 ಕೋಟಿ ರೂ. ಅನುದಾನ ಮಂಜೂರಾಗಿದೆ. ಅಲ್ಲದೇ, ರಾಜ್ಯ ಸರಕಾರ 'ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ' ರಚನೆ ಮಾಡಿದೆ.

ಮಳೆ ಹೆಚ್ಚಾದ ಸಮಯದಲ್ಲಿ ಬಂಡೆಗಳು ರಸ್ತೆ ಕುಸಿದ ಘಟನೆಯು ನಡೆದಿದ್ದು, ಹಾಗೂ ಜಿಲ್ಲಾಡಳಿತ ಚಾಮುಂಡಿ ಬೆಟ್ಟದ ಮೇಲೆ ದ್ವಿಚಕ್ರ ಹಾಗೂ ಕಾರುಗಳ ಸಂಚಾರಕ್ಕೆ ನಿಷೇಧ ಹೇರಲು ಚಿಂತನೆ ನಡೆಸುತ್ತಿದೆ. ಇದರ ಬೆನ್ನಲ್ಲೇ ಮಾಲಿನ್ಯರಹಿತ ಎಲೆಕ್ಟ್ರಾನಿಕ್ ಬಸ್​ಗಳನ್ನು ಬೆಟ್ಟಕ್ಕೆ ಬಿಡಲು ಕೆ.ಎಸ್​.ಆರ್​.ಟಿ.ಸಿ. ನಿರ್ಧಾರ ಮಾಡಿದೆ.

ಈ ಉದ್ದೇಶವು ಸಾಕಾರಗೊಂಡರೆ ಚಾಮುಂಡಿ ಬೆಟ್ಟವನ್ನು ಸೂಕ್ಷ್ಮ ವಲಯವಾಗಿ ಉಳಿಸಲು ಸಾಧ್ಯವಾಗುತ್ತದೆ. ಈಗಾಗಲೇ ಮೈಸೂರು - ಬೆಂಗಳೂರು ನಡುವೆ ಎಲೆಕ್ಟ್ರಿಕ್ ಬಸ್ ಸಂಚಾರ ಮಾಡುತ್ತಿದ್ದು, ಇದನ್ನು ನಗರ ಭಾಗಕ್ಕೂ ವಿಸ್ತರಿಸುವ ಸಲುವಾಗಿ 200 ಎಲೆಕ್ಟ್ರಿಕ್ ಬಸ್​ಗಳಿಗೆ ಡಿಪಿಆರ್ ಸಲ್ಲಿಸಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಯಡಿ ಎಲೆಕ್ಟ್ರಿಕ್​ ಬಸ್​ ಲಭ್ಯವಾಗಲಿದೆ.

ನಗರದ ಪ್ರಮುಖ ಭಾಗಗಳಲ್ಲಿ ಸಂಚಾರ:ಪ್ರಸ್ತುತ ನಗರದಲ್ಲಿ ಯಾವುದೇ ಎಲೆಕ್ಟ್ರಿಕ್​​ ಬಸ್​ ಸಂಚಾರ ಮಾಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಬರಲಿರುವ 200 ಬಸ್​ಗಳು ನಗರದಾದ್ಯಂತ ಸಂಚರಿಸಲಿವೆ. ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆಯಿಂದ ಮೈಸೂರಿಗೆ ಅಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಲಿದೆ. ಹೀಗಾಗಿ ಸರ್ಕಾರ 60 ಬಸ್​ಗಳನ್ನು ನೀಡಿದ ಕಾರಣ ಬಸ್​ಗಳ‌ ಕೊರತೆ ಕಂಡುಬಂದಿಲ್ಲ. ನಗರದ ಪ್ರಮುಖ ಸ್ಥಳಗಳಾದ ಚಾಮುಂಡಿ ಬೆಟ್ಟ, ಎಲ್ಎನ್​ಟಿ, ಇನ್ಫೋಸಿಸ್​​, ಲಿಂಗಾಂಬುಧಿ ಕೆರೆ, ಸೇರಿದಂತೆ ನಗರದ ವಿವಿಧಡೆ ಎಲೆಕ್ಟ್ರಿಕ್​ ಬಸ್​ಗಳು ಸಂಚಾರ ನಡೆಸಲಿವೆ.

ಸೂಕ್ತ ರೀಚಾರ್ಜ್ ವ್ಯವಸ್ಥೆ ಅಗತ್ಯ:ಎಲೆಕ್ಟ್ರಿಕ್‌ ಬಸ್‌ಗಳಿಗೆ ಪ್ರತ್ಯೇಕ ರೀಚಾರ್ಜ್‌ ವ್ಯವಸ್ಥೆ ಅವಶ್ಯಕವಾಗಿದ್ದು, 145 ಕಿಲೋ ವ್ಯಾಟ್‌ ಸಾಮರ್ಥ್ಯದ ಮೋಟಾರು ತಿರುಗಲು ಹೆಚ್ಚು ವಿದ್ಯುತ್​ ಶಕ್ತಿಬೇಕು. ಹೀಗಾಗಿ ಸಾಮಾನ್ಯ ಪ್ಲಗ್‌ಗಳನ್ನು ಬಳಸಿ ಬ್ಯಾಟರಿ ಚಾರ್ಜ್‌ ಮಾಡಲು ಸಾಧ್ಯವಿಲ್ಲದ ಕಾರಣ , ಡಿಪೋದಲ್ಲಿ ಪ್ರತ್ಯೇಕವಾದ ವ್ಯವಸ್ಥೆ ಮಾಡಿ ಚಾರ್ಜಿಂಗ್​ ಉಪಕರಣಗಳನ್ನು ಇಡಬೇಕಾಗುತ್ತದೆ. ಬಸ್‌ಗಳಿಗೆ ಚಾರ್ಜ್‌ ಮಾಡಿಕೊಳ್ಳಲು ಬನ್ನಿಮಂಟಪ, ಕುವೆಂಪುನಗರ, ವಿಜಯನಗರ ಹಾಗೂ ಸಾತಗಳ್ಳಿ ಡಿಪೋಗಳಲ್ಲಿ, ಎಲೆಕ್ಟ್ರಿಕ್‌ ಚಾರ್ಜಿಂಗ್‌ ಸ್ಟೇಷನ್‌ ಆರಂಭಿಸಲು ಸಾರಿಗೆ ಇಲಾಖೆ ಸಿದ್ಧತೆ ಕೈಗೊಂಡಿದೆ.

ಇದನ್ನೂ ಓದಿ:ಬೆಂಗಳೂರು: 800 ಚಾಲಕರ ವಿರುದ್ಧ ಡ್ರಿಂಕ್ & ಡ್ರೈವ್, ಅತಿವೇಗದ ಚಾಲನೆಗೆ 2.30 ಲಕ್ಷ ರೂ. ದಂಡ

ABOUT THE AUTHOR

...view details