ಬೆಂಗಳೂರು: ತಮಿಳುನಾಡಿನ ಧರ್ಮಪುರಿಗೆ ಚುನಾವಣಾ ಕರ್ತವ್ಯಕ್ಕೆೆ ತೆರಳುತ್ತಿದ್ದ ಕರ್ನಾಟಕ ಮೀಸಲು ಪಡೆಯ ಹಿರಿಯ ಅಧಿಕಾರಿ ಮತ್ತು ಕಾನ್ಸ್ಟೇಬಲ್ಗಳು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಹಿರಿಯ ಅಧಿಕಾರಿಯೊಬ್ಬರು ಹಾಗೂ ಮತ್ತೊಬ್ಬ ಕಾನ್ಸ್ಟೇಬಲ್ ಗಾಯಗೊಂಡಿದ್ದಾರೆ.
ಕರ್ನಾಟಕ ಮೀಸಲು ಪಡೆಯ ಕೋರಮಂಗಲದಲ್ಲಿರುವ 3ನೇ ಬೆಟಾಲಿಯನ್ನ 3ನೇ ಸಹಾಯಕ ಕಮಾಂಡೆಂಟ್ ಟಿ.ಪ್ರಭಾಕರ್ ಮತ್ತು ವಿಜಯಪುರದ ಐಆರ್ಬಿ (ಇಂಡಿಯನ್ ರಿಸರ್ವ್ ಬೆಟಾಲಿಯನ್)ನ ಕಾನ್ಸ್ಟೇಬಲ್ ವಿಠಲ್ ಗಡಾಧರ್, ತಮಿಳುನಾಡಿನ ಮೀಸಲು ಪಡೆಯ ಕಾನ್ಸ್ಟೇಬಲ್ ದಿನೇಶ್ ಎಂಬವವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ವಿಜಯಪುರದ ಐಆರ್ಬಿ ಡೆಪ್ಯೂಟಿ ಕಮಾಂಡೆಂಟ್ ಯು.ಎನ್.ಹೇಮಂತ್ ಕುಮಾರ್ ಮತ್ತು ಕಾನ್ಸ್ಟೇಬಲ್ ಜಯಕುಮಾರ್ ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು, ಸಮೀಪದ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆೆಗೆ ದಾಖಲಿಸಲಾಗಿದೆ ಎಂದು ಕೆಎಸ್ಆರ್ಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
10 ದಿನಗಳ ಹಿಂದೆ ಲೋಕಸಭಾ ಚುನಾವಣೆ ಹಿನ್ನೆೆಲೆಯಲ್ಲಿ ಕೆಎಸ್ಆರ್ಪಿಯ ತುಕಡಿಯನ್ನು ತಮಿಳುನಾಡಿನ ಧರ್ಮಪುರಿಗೆ ನಿಯೋಜಿಸಲಾಗಿತ್ತು. ಅದಕ್ಕೆೆ ಹೇಮಂತ್ ಕುಮಾರ್ ಮುಂದಾಳತ್ವ ವಹಿಸಿದ್ದರು. ಗುರುವಾರ ಸಂಜೆ 5.30ರ ಸುಮಾರಿಗೆ ತಿರುವಣ್ಣಾಮಲೈನಿಂದ ದಿಂಡಿವಣ್ಣಂ ಕಡೆಗೆ ಜೀಪ್ನಲ್ಲಿ ಐವರು ಅಧಿಕಾರಿ ಮತ್ತು ಸಿಬ್ಬಂದಿ ತೆರಳುತ್ತಿದ್ದರು. ಕಮಾಂಡೆಂಟ್ ಪ್ರಭಾಕರ್ ಜೀಪ್ನ ಮುಂಭಾಗ ಕುಳಿತಿದ್ದರು. ಹಿಂಭಾಗದಲ್ಲಿ ಕಾನ್ಸ್ಟೇಬಲ್ ವಿಠಲ್, ಡೆಪ್ಯೂಟಿ ಕಮಾಂಡೆಂಟ್ ಹೇಮಂತ್ ಹಾಗೂ ತಮಿಳುನಾಡಿನ ಸಿಬ್ಬಂದಿ, ಕಾನ್ಸ್ಟೇಬಲ್ ಇದ್ದರು.