ಬೆಂಗಳೂರು:ದಾಖಲೆ ಇಲ್ಲದೆ ಕೋಟ್ಯಂತರ ರೂಪಾಯಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ನೆರೆಯ ದೇಶ ಶ್ರೀಲಂಕಾದ ಇಬ್ಬರು ಆರೋಪಿಗಳು ಸೇರಿದಂತೆ ಮೂವರನ್ನು ಬೆಂಗಳೂರು ವಿಭಾಗದ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳು ಸೆರೆ ಹಿಡಿದಿದ್ದಾರೆ.
ಶ್ರೀಲಂಕಾದ ವಿಮಲರಾಜ್ ತುರೈಸಿಂಗಂ, ತಿಳಪ್ಪನ್ ಜಯಂತಿಕುಮಾರ್ ಹಾಗೂ ಭಾರತೀಯ ಪ್ರಜೆ ವೀರಕುಮಾರ್ ಎಂಬವರನ್ನು ಬಂಧಿಸಿ ಒಟ್ಟು 2.12 ಕೋಟಿ ಮೌಲ್ಯದ ವಿದೇಶಿ ಕರೆನ್ಸಿ ಜಪ್ತಿ ಮಾಡಿಕೊಂಡಿದೆ.