ಕರ್ನಾಟಕ

karnataka

ETV Bharat / state

ಹೊಸ ವರ್ಷಾಚರಣೆ ವೇಳೆ ಪಾನಮತ್ತರಾಗಿ ವಾಹನ ಚಾಲನೆ; ತಡರಾತ್ರಿ 513 ಪ್ರಕರಣ ದಾಖಲು - DRUNK AND DRIVING

ನ್ಯೂ ಇಯರ್ ಸೆಲಬ್ರೇಷನ್ ಬಳಿಕ ಪಾನಮತ್ತರಾಗಿ ವಾಹನ ಚಾಲನೆ ಮಾಡುವವರು ಹಾಗೂ ಅತಿವೇಗದ ಚಾಲನೆ ವಿರುದ್ಧ ಸಮರ ಸಾರಿರುವ ಸಂಚಾರ ಪೊಲೀಸರು, ಒಂದೇ ರಾತ್ರಿಯಲ್ಲಿ 513 ಪ್ರಕರಣಗಳನ್ನು ದಾಖಲು ಮಾಡಿದ್ದಾರೆ.

DRUNK AND DRIVING
ಸಂಗ್ರಹ ಚಿತ್ರ (File)

By ETV Bharat Karnataka Team

Published : Jan 1, 2025, 10:22 AM IST

ಬೆಂಗಳೂರು : ನ್ಯೂ ಇಯರ್ ಸೆಲಬ್ರೇಷನ್ ಬಳಿಕ ಪಾನಮತ್ತರಾಗಿ ವಾಹನ ಚಲಾಯಿಸುತ್ತಿದ್ದವರಿಗೆ ಬೆಂಗಳೂರು ಸಂಚಾರ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

ತಡರಾತ್ರಿ ನಗರದಾದ್ಯಂತ 28,127ಕ್ಕೂ ಹೆಚ್ಚು ವಾಹನಗಳ ತಪಾಸಣೆ ಕೈಗೊಂಡ ಸಂಚಾರ ಪೊಲೀಸರು, ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುತ್ತಿದ್ದವರ ವಿರುದ್ಧ ಒಟ್ಟು 513 ಪ್ರಕರಣಗಳನ್ನ ದಾಖಲಿಸಿಕೊಂಡಿದ್ದಾರೆ. ಕಳೆದ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ 7,620 ವಾಹನಗಳ ಚಾಲಕರನ್ನ ತಪಾಸಣೆಗೊಳಪಡಿಸಿದ್ದ ಪೊಲೀಸರು ಪಾನಮತ್ತನಾಗಿದ್ದ 330 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.

ಪಾನಮತ್ತರಾಗಿ ವಾಹನ ಚಲಾಯಿಸುವವರ ವಿರುದ್ಧ ಒಂದು ವಾರಕ್ಕೂ ಮೊದಲೇ ಕಾರ್ಯಾಚರಣೆ ಚುರುಕುಗೊಳಿಸಿದ್ದ ಸಂಚಾರ ಪೊಲೀಸರು, ಕಳೆದ ವಾರ 95,179 ವಾಹನ ಚಾಲಕರನ್ನು ತಪಾಸಣೆಗೊಳಪಡಿಸಿ 1,187 ಪ್ರಕರಣ ದಾಖಲಿಸಿಕೊಂಡಿದ್ದರು. ನಗರದಲ್ಲಿ ಅತಿವೇಗ ಮತ್ತು ಆಜಾಗರೂಕತೆಯಿಂದ ವಾಹನ ಚಾಲನೆ ಮಾಡುವ ಹಾಗೂ ವ್ಹೀಲಿಂಗ್/ಡ್ರ್ಯಾಗ್ ರೇಸ್‌ನಲ್ಲಿ ಭಾಗಿಯಾಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ಸಂಚಾರ ವಿಭಾಗದ ಜಂಟಿ ಆಯುಕ್ತ ಎಂ. ಎನ್. ಅನುಚೇತ್ ತಿಳಿಸಿದ್ದರು.

ಇದನ್ನೂ ಓದಿ: ಬೆಂಗಳೂರು: 5,500 ಪಾನಮತ್ತ ಚಾಲಕರ ವಿರುದ್ಧ ಪ್ರಕರಣ, ಡಿಎಲ್ ರದ್ಧತಿಗೆ ಶಿಫಾರಸು - DRINK AND DRIVE CASE

ABOUT THE AUTHOR

...view details