ಬೆಂಗಳೂರು: ಅಪಘಾತವೆಸಗಿದ್ದನ್ನು ಪ್ರಶ್ನಿಸಿದ್ದಕ್ಕೆ ಕಾರು ಚಾಲಕನೊಬ್ಬ ಕ್ಯಾಬ್ ಚಾಲಕನನ್ನು ತನ್ನ ಕಾರಿನ ಬಾನೆಟ್ ಮೇಲಿರಿಸಿಕೊಂಡು ಕೊಂಡೊಯ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಜನವರಿ 15ರಂದು ರಾತ್ರಿ ಮಲ್ಲೇಶ್ವರಂನ 18ನೇ ಕ್ರಾಸ್ನಲ್ಲಿ ಘಟನೆ ನಡೆದಿದ್ದು, ಕಾರಿನ ಬಾನೆಟ್ ಮೇಲೆ ಬಿದ್ದ ಅಶ್ವಥ್ ಎಂಬಾತನನ್ನು ಮೊಹಮ್ಮದ್ ಮುನೀರ್ ಎಂಬ ಕಾರು ಚಾಲಕ ಸುಮಾರು 400 ಮೀಟರುಗಳಷ್ಟು ದೂರ ಎಳೆದೊಯ್ದಿದ್ದಾನೆ. ಆರೋಪಿಯ ಪುಂಡಾಟದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಅಶ್ವಥ್ ಎಂಬಾತನ ಕ್ಯಾಬ್ಗೆ ಮಲ್ಲೇಶ್ವರಂನ ಸರ್ಕಲ್ನಲ್ಲಿರುವ ಮಾರಮ್ಮ ದೇವಸ್ಥಾನದ ಬಳಿ ಮೊಹಮ್ಮದ್ ಮುನೀರ್ ಎಂಬಾತನ ಕಾರು ಡಿಕ್ಕಿಯಾಗಿತ್ತು. ಈ ವೇಳೆ ಮುನೀರ್ನ ಕಾರನ್ನು ನಿಲ್ಲಿಸುವಂತೆ ಅಶ್ವಥ್ ಕೇಳಿದ್ದ. ಕಾರು ನಿಲ್ಲಿಸದೆ ಎಸ್ಕೇಪ್ ಆಗಲು ಯತ್ನಿಸಿದಾಗ ಕಾರಿನ ಮುಂದೆ ಬಂದು ನಿಂತಿದ್ದ ಅಶ್ವಥ್ ಕೆಳಗಿಳಿಯುವಂತೆ ಆರೋಪಿ ಮುನೀರ್ಗೆ ತಿಳಿಸಿದ್ದ. ಆದರೆ ಕೆಳಗಿಳಿಯದ ಮುನೀರ್ ತಕ್ಷಣ ಕಾರು ಚಲಾಯಿಸಿದ್ದಾನೆ. ಈ ವೇಳೆ ಬಾನೆಟ್ ಮೇಲೆ ಕುಳಿತ ಕ್ಯಾಬ್ ಚಾಲಕ ಅಶ್ವಥ್ನನ್ನು ಹಾಗೆಯೇ ಕೊಂಡೊಯ್ದಿದ್ದಾನೆ.