ಬೆಂಗಳೂರು: "ರಾಜ್ಯದಲ್ಲಿ ಕನ್ನಡಿಗರ ಸ್ವಾಭಿಮಾನವನ್ನು ಎತ್ತಿಹಿಡಿಯುವುದಕ್ಕಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಎಲ್ಲಾ ಅಂಗಡಿಗಳ ಮುಂದೆ ಕನ್ನಡದಲ್ಲಿ ಬೋರ್ಡ್ ಹಾಕುವುದು, ಧ್ವಜ ಬಳಕೆ, ಭಾಷೆ ಬಳಕೆ, ಸಂಸ್ಕೃತಿ, ನಮ್ಮ ಕಡತಗಳಲ್ಲಿ ಕನ್ನಡ ಭಾಷೆಯನ್ನು ಉಪಯೋಗಿಸುವಂತದ್ದು. ನಮ್ಮ ರಾಜ್ಯದಲ್ಲಿ ಎಲ್ಲೆಲ್ಲಾ ಮುಂದಿನ ದಿನಗಳಲ್ಲಿ ಉದ್ಯೋಗ ಸೃಷ್ಟಿಯಾಗುತ್ತದೆಯೋ ಅಲ್ಲೆಲ್ಲಾ ಕಡ್ಡಾಯವಾಗಿ ನಮ್ಮ ಕನ್ನಡಿಗರು ಇರಬೇಕು ಎಂಬುದು ನಮ್ಮ ಆಶಯ" ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಹೇಳಿದರು.
ಡಿಸಿಎಂ ಡಿ ಕೆ ಶಿವಕುಮಾರ್ (ETV Bharat) ಸದಾಶಿವನಗರ ನಿವಾಸದ ಬಳಿ 'ದಿ ಕರ್ನಾಟಕ ಸ್ಟೇಟ್ ಎಂಪ್ಲಾಯ್ಮೆಂಟ್ ಆಫ್ ಲೋಕಲ್ ಕ್ಯಾಂಡಿಡೇಟ್ಸ್ ಇನ್ ದಿ ಇಂಡಸ್ಟ್ರೀಸ್, ಫ್ಯಾಕ್ಟರೀಸ್ ಆ್ಯಂಡ್ ಲೋಕಲ್ ಎಷ್ಟಾಬ್ಲಿಷ್‌ಮೆಂಟ್ ಬಿಲ್-2024' ವಿಧೇಯಕ ಮಂಡನೆಗೆ ಸಂಪುಟ ಸಭೆಯಲ್ಲಿ ಅಂಗೀಕಾರ ಸಿಕ್ಕಿರುವ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಅವರು ಪ್ರತಿಕ್ರಿಯೆ ನೀಡಿದರು.
ಬಿಲ್ಗೆ ವಿರೋಧ ವ್ಯಕ್ತವಾಗಿರುವ ಬಗ್ಗೆ ಪ್ರತಿಕ್ರಿಯಿಸಿ, "ಟೆಕ್ನಿಕಲ್ ವಿಷಯದಲ್ಲಿ ನಾವು ಮಧ್ಯಪ್ರವೇಶಿಸುವುದಿಲ್ಲ. ನಾವೂ ಅರ್ಥ ಮಾಡಿಕೊಳ್ಳುತ್ತೇವೆ. ಅದರಲ್ಲಿ ಬೇಕಾದರೆ ವಿಶೇಷ ರಿಯಾಯಿತಿ ಕೊಡುತ್ತೇವೆ. ನಾವು ಕೊಡುವುದಿಲ್ಲ ಅಂತೇನಿಲ್ಲ. ಆದರೆ ಸರ್ಕಾರದ ಗಮನಕ್ಕೆ ತರಬೇಕು. ಈ ಬಗ್ಗೆ ಎಲ್ಲಾ ಮಾಹಿತಿಯನ್ನು ಈಗಲೇ ರಿವೀಲ್ ಮಾಡಲು ಆಗುವುದಿಲ್ಲ. ಅಧಿವೇಶನದಲ್ಲಿ ನಾವು ಬಿಲ್ ಅನ್ನು ಮಂಡನೆ ಮಾಡುತ್ತೇವೆ." ಎಂದು ತಿಳಿಸಿದರು.
"ಬೆಂಗಳೂರಿಗೆ ಕೆಲವು ಯೋಜನೆಗಳನ್ನು ಮೀಸಲಿಡಲಾಗಿದೆ. ಅವುಗಳೆಲ್ಲವನ್ನೂ ಕ್ಯಾಬಿನೆಟ್ನಲ್ಲಿ ಮಂಡಿಸುವ ಮುನ್ನ ಬೆಂಗಳೂರು ಉಸ್ತುವಾರಿ ಸಚಿವರು ಹಾಗೂ ಸಿಎಂ ಸಿಎಂಗೆ ಮಾಹಿತಿ ನೀಡಿ, ಚರ್ಚಿಸಬೇಕಿದೆ. ಪೆರಿಪೆರಲ್ ರಿಂಗ್ ರೋಡ್, ಸಾಲಿಡ್ ವೇಸ್ಟ್ ಮ್ಯಾನೇಜ್‌ಮೆಂಟ್, ಫ್ಲೈ ಓವರ್, ಟ್ಯಾಕ್ಸ್ ವಿಚಾರಗಳು, ಹೊಸ ರೋಡ್ ಮಾಡುವ ಬಗ್ಗೆ ಸೇರಿದಂತೆ ಬ್ರ್ಯಾಂಡ್ ಬೆಂಗಳೂರು ಮಾಡಲು ಬಂದಿರುವ ಸಲಹೆಗಳ ಬಗ್ಗೆ ಅವರ ಜೊತೆ, ಕ್ಯಾಬಿನೆಟ್ಗೆ ಹೋಗುವ ಮುನ್ನ ಚರ್ಚೆ ಮಾಡುತ್ತೇನೆ. ಅವರಿಗೂ ಎಲ್ಲಾ ಗೊತ್ತಾಗಬೇಕು" ಎಂದರು.
"ಇವತ್ತು ಯಾವುದೋ ಮಾಧ್ಯಮದಲ್ಲಿ 45 ಸಾವಿರ ಕೋಟಿ ರೂಪಾಯಿ ಅಂತ ಬರೆದಿದ್ದಾರೆ. ಯಾರೋ ಮಂತ್ರಿ 15 ಸಾವಿರ ಕೋಟಿ ರೂ. ಹೊಡೆಯುತ್ತಿದ್ದಾರೆ ಅಂತ ಹೇಳಿದ್ದಾರೆ. ಕಸ ಎತ್ತೋದಕ್ಕೆಯೇ ವರ್ಷಕ್ಕೆ 450 ಕೋಟಿ ರೂ. ಬೇಕಾಗುತ್ತದೆ. ಅದು ಹೇಗೆ 15 ಸಾವಿರ ಕೋಟಿ ಹೊಡೆದುಬಿಡೋದು" ಎಂದು ಡಿಕೆಶಿ ಪ್ರಶ್ನಿಸಿದರು.
ವಿಪಕ್ಷಗಳ 30 ವರ್ಷ, ಬ್ಲ್ಯಾಕ್ ಲಿಸ್ಟ್ಲ್ಲಿರುವ ಕಂಪೆನಿಗೆ ಗುತ್ತಿಗೆ ಕೊಟ್ಟಿದ್ದಾರೆ ಎನ್ನುವ ಆರೋಪದ ಕುರಿತು ಪ್ರತಿಕ್ರಿಯಿಸಿ, "ನನಗೆ ಆಶ್ಚರ್ಯ ಆಗುತ್ತಿದೆ. ಜಾಗವೇ ಇನ್ನೂ ಸಿಕ್ಕಿಲ್ಲ. ಬ್ಲ್ಯಾಕ್ ಲಿಸ್ಟ್ ಕಂಪೆನಿಗೆ ಗುತ್ತಿಗೆ ಕೊಡುವುದು ಎಲ್ಲಿಂದ ಬಂತು? ಇನ್ನೂ ಟೆಂಡರ್ ಕರೆದಿಲ್ಲ. ಕೇಸ್ ಇನ್ನೂ ಕೋರ್ಟ್ನಲ್ಲಿದೆ. ಕಳೆದ ಮೂರು ದಿನಗಳಿಂದ ಮಂಡೂರಿನಲ್ಲಿ ಕಸ ಹಾಕುವುದನ್ನು ನಿಲ್ಲಿಸಿದ್ದಾರೆ. ಕಸ ಹಾಕಬಾರದು ಅಂತಾ ಹೇಳಿದ್ದಾರೆ. ಬೇರೆ ಕಡೆ ಕಸ ಹಾಕಲು ಜಾಗ ಹುಡುಕುತ್ತಿದ್ದೇವೆ. ನೈಸ್ ರಸ್ತೆಯಲ್ಲಿರುವ ಜಾಗದಲ್ಲಿ ಕಸ ಹಾಕುವ ಬಗ್ಗೆ ನ್ಯಾಯ ಪಂಚಾಯತಿ ಮಾಡುತ್ತಿದ್ದೇವೆ. ಬೆಂಗಳೂರಿನಿಂದ ಹೊರಗಡೆ ಇರುವ ಜಾಗಗಳಲ್ಲಿ ಕಸ ಹಾಕುವ ನಿಟ್ಟಿನಲ್ಲಿ ನಾವು ಮಾತುಕತೆ ನಡೆಸುತ್ತಿದ್ದೇವೆ. ಬೇರೆ ರಾಜ್ಯಗಳಿಗೆ ಹೋಗಿ ಕಸ ವಿಲೇವಾರಿ ಬಗ್ಗೆ ನೋಡಿಕೊಂಡು ಬಂದಿದ್ದೇನೆ. ಅವೆಲ್ಲವನ್ನೂ ಸಿಎಂ ಜೊತೆ ಚರ್ಚಿಸಿ, ಕ್ಯಾಬಿನೆಟ್ನಲ್ಲಿ ಮಂಡನೆ ಮಾಡುತ್ತೇವೆ. ಇಷ್ಟು ದಿನ ದಂಧೆ ಮಾಡಿಕೊಂಡಿದ್ದರಲ್ಲಾ, ಟೆಂಡರ್ ಇಲ್ಲದೆ ಮಾಡಿಕೊಂಡು ಹೋಗ್ತಾ ಇದ್ರು. ಈಗ ಟೆಂಡರ್ ತಂದಿರುವುದಕ್ಕೆ ಹೊಟ್ಟೆ ಉರಿ ಅಷ್ಟೇ" ಎಂದು ಡಿಕೆಶಿ ಟೀಕಿಸಿದರು.
ರಾಜ್ಯದ ಹಲವೆಡೆ ಭಾರೀ ಮಳೆಯಾಗುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಎಲ್ಲ ಕಡೆ ಮಳೆ ಇಲ್ಲ, ಕೆಲವು ಕಡೆ ಆಗ್ತಿದೆ. ತಮಿಳುನಾಡಿನ ಪರಿಸ್ಥಿತಿ ಸುಧಾರಣೆ ಆಗುತ್ತಿದೆ. ಎಷ್ಟು ನೀರು ಹೋಗ್ತಾ ಇದೆ ಎಂಬ ಲೇಟೆಸ್ಟ್ ರಿಪೋರ್ಟ್ ಬಂದಿಲ್ಲ. ಮಾಹಿತಿ ಬಂದ ಮೇಲೆ ತಿಳಿಸುಸುತ್ತೇನೆ" ಎಂದರು.
ಇದನ್ನೂ ಓದಿ:ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ: ವಿಧೇಯಕ ಮಂಡನೆಗೆ ಸಂಪುಟ ಸಭೆ ಒಪ್ಪಿಗೆ - JOB RESERVATION FOR KANNADIGAS