ಕರ್ನಾಟಕ

karnataka

ETV Bharat / state

ಧಾರವಾಡ: ಜೀವಂತ ಇದ್ದಾಗಲೇ ಮರಣ ಪ್ರಮಾಣಪತ್ರ ಪಡೆದ ವ್ಯಕ್ತಿ! - Death certificate - DEATH CERTIFICATE

ವ್ಯಕ್ತಿಗೆ ನೀಡಿರುವ ಮರಣ ಪ್ರಮಾಣಪತ್ರಕ್ಕೆ ಸಹಿ ಮಾಡಿರುವ ಐವರು ಪಂಚರು ಪೈಕಿ ಒಬ್ಬರು ಪುರಸಭೆಯ ಸದಸ್ಯರೇ ಆಗಿದ್ದಾರೆ ಎಂಬ ವಿಚಾರ ಗೊತ್ತಾಗಿದೆ. ''ಯಾವ ಕಾರಣ ಹಾಗೂ ಉದ್ದೇಶಕ್ಕೆ ಹೀಗೆ ಮಾಡಿದ್ದಾರೆ ಎಂಬುದು ನಮಗೂ ಗೊತ್ತಿಲ್ಲ. ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು'' ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಪ್ರತಿಕ್ರಿಯಿಸಿದ್ದಾರೆ.

Person who got death certificate
ಮರಣ ಪ್ರಮಾಣ ಪತ್ರ ಪಡೆದ ವ್ಯಕ್ತಿ (ETV Bharat)

By ETV Bharat Karnataka Team

Published : Sep 14, 2024, 1:48 PM IST

ಜಿಲ್ಲಾಧಿಕಾರಿ ದಿವ್ಯಪ್ರಭು ಪ್ರತಿಕ್ರಿಯೆ (ETV Bharat)

ಧಾರವಾಡ:ವ್ಯಕ್ತಿಯೋರ್ವ ಜೀವಂತ ಇದ್ದಾಗಲೇ ಮರಣ ಪ್ರಮಾಣಪತ್ರ ಪಡೆದ ಘಟನೆ ನವಲಗುಂದ ತಾಲೂಕಿನ ರಾಮಲಿಂಗ ಓಣಿಯಲ್ಲಿ‌ ನಡೆದಿದೆ. ಇಮಾಮ್​ ಹುಸೇನ್​ ಮುಲ್ಲಾಣ್ಣವರ ಎಂಬುವವನೇ ಮರಣ ಪ್ರಮಾಣಪತ್ರ ಪಡೆದ ವ್ಯಕ್ತಿಯಾಗಿದ್ದಾನೆ.

ಇಮಾಮ್​ ಹುಸೇನ್ ಸಂಬಂಧಿ ಮರಣ‌ ಪ್ರಮಾಣಪತ್ರಕ್ಕೆ ನವಲಗುಂದ ಪುರಸಭೆಯಲ್ಲಿ ಅರ್ಜಿ ಸಲ್ಲಿಸಿದ್ದರು. ಈತ ಸಲ್ಲಿಸಿದ್ದನ್ನು ಪುರಸ್ಕರಿಸಿ ಪುರಸಭೆ ಮರಣ ಪ್ರಮಾಣಪತ್ರ ನೀಡಿದೆ. ಇಮಾನ್ ಮೃತಪಟ್ಟ ಬಗ್ಗೆ ಆಗಸ್ಟ್ 27ಕ್ಕೆ ಅರ್ಜಿ ಸಲ್ಲಿಕೆಯಾಗಿದೆ. ಅರ್ಜಿ‌ ಕೊಟ್ಟ ಮಾರನೇ ದಿನವೇ ಪುರಸಭೆ ಮರಣ ಪ್ರಮಾಣಪತ್ರ ನೀಡಿರುವುದು ಸಂಶಯಕ್ಕೆ ಕಾರಣವಾಗಿದೆ. ಯಾವುದೇ ವ್ಯಕ್ತಿ ಮೃತಪಟ್ಟಾಗ ಪರಿಶೀಲನೆ ಮಾಡಿ ಐವರ ಸಹಿ ಪಡೆಯಬೇಕು. ವಿಚಿತ್ರವೆಂದರೆ ಈತನ ಪ್ರಮಾಣ ಪತ್ರಕ್ಕೆ ಸಹಿ ಮಾಡಿರುವ ಪಂಚರ ಪೈಕಿ ಪುರಸಭೆ ಸದಸ್ಯರೊಬ್ಬರು ಇದ್ದಾರೆ.

ಇಮಾಮ್ ಹುಸೇನ್​ ನವಲಗುಂದದ ಫೈನಾನ್ಸ್ ಮತ್ತು ಬ್ಯಾಂಕ್​ಗಳಲ್ಲಿ ಸಾಲ ಮಾಡಿಕೊಂಡಿದ್ದ. ಅದನ್ನು ತೀರಿಸಲಾಗದೆ, ತಾನೇ ಸತ್ತಿರುವುದಾಗಿ ಸಂಬಂಧಿಯ ಮೂಲಕ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದ ಎಂಬ ಮಾತುಗಳು ಕೇಳಿಬಂದಿವೆ.

ವಿಚಾರ ಬಯಲಿಗೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಪುರಸಭೆ ಅಧಿಕಾರಿಗಳು, ಆತನಿಂದ ಪ್ರಮಾಣಪತ್ರ ವಾಪಸ್ ಪಡೆದು ತನಿಖೆ ನಡೆಸುತ್ತಿದ್ದಾರೆ.

ಜಿಲ್ಲಾಧಿಕಾರಿ ಹೇಳಿದ್ದೇನು?:''ಯಾವ ಕಾರಣ ಹಾಗೂ ಉದ್ದೇಶಕ್ಕೆ ಹೀಗೆ ಮಾಡಿದ್ದಾರೆ ಎಂಬುದು ನಮಗೂ ಗೊತ್ತಿಲ್ಲ. ಪ್ರಾಥಮಿಕ ವರದಿಯಿಂದ ಈ ಬಗ್ಗೆ ಮಾಹಿತಿ ಗೊತ್ತಾಗಿದೆ. ಸದ್ಯ ಸಕ್ಷಮ ಪ್ರಾಧಿಕಾರಕ್ಕೆ ವರದಿ ಸಲ್ಲಿಕೆ ಮಾಡಿ ಸದ್ಯ ಅಧಿಕಾರಿಯೊಬ್ಬರಿಂದ ಇಡೀ ಪ್ರಕರಣದ ತನಿಖೆ ಮಾಡಿಸಿ ಕ್ರಮ ತೆಗೆದುಕೊಳ್ಳಲಾಗುವುದು. ಎಲ್ಲವನ್ನೂ ತನಿಖೆ ಮಾಡಿಸುತ್ತೇವೆ'' ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದ್ದಾರೆ.

ಶಾಸಕ ಎನ್​.ಹೆಚ್​.ಕೋನರೆಡ್ಡಿ ಪ್ರತಿಕ್ರಿಯೆ (ETV Bharat)

ಶಾಸಕ ಕೋನರೆಡ್ಡಿ ಪ್ರತಿಕ್ರಿಯೆ: ''ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಕಣ್ತಪ್ಪಿನಿಂದಲೂ ಕೂಡ ಇಂತಹ ಘಟನೆ ಆಗಬಾರದು. ತಪ್ಪನ್ನು ಸರಿಪಡಿಸಿಕೊಂಡು, ಕ್ರಮ ಕೈಗೊಳ್ಳಬೇಕು. ಹಾಗೆಯೇ ಮುಂದೆ ಇಂತಹ ಪ್ರಕರಣ ನಡೆಯದಂತೆ ಎಚ್ಚರ ವಹಿಸಬೇಕು. ಆ ವ್ಯಕ್ತಿಯದು ಸಾಲ ಇತ್ತಂತೆ, ಹಾಗಾಗಿ ಇಂತಹ ದುಸ್ಸಾಹಸಕ್ಕೆ ಕೈಹಾಕಿದ್ದಾನೆ. ಪುರಸಭೆಯ ಎಲ್ಲ ಸದಸ್ಯರಿಗೂ ಸಹಿ ಮಾಡುವಾಗ ಎಚ್ಚರದಿಂದ ಇರುವಂತೆ ಸೂಚಿಸಿದ್ದೇನೆ'' ಎಂದು ನವಲಗುಂದ ಶಾಸಕ ಎನ್​.ಹೆಚ್​.ಕೋನರೆಡ್ಡಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ:ಪೂಜಾ ಖೇಡ್ಕರ್‌ಗೆ UPSC ಶಾಕ್​: ನಕಲಿ ಪ್ರಮಾಣಪತ್ರದ ವಿರುದ್ಧ ಪ್ರಕರಣ ದಾಖಲು, ಶೋಕಾಸ್ ನೋಟಿಸ್ ಜಾರಿ - Show Cause Notice

ABOUT THE AUTHOR

...view details