ಕರ್ನಾಟಕ

karnataka

ETV Bharat / state

ಬೆಂಗಳೂರು ನಾಗರಿಕರು, ವಿದ್ಯಾರ್ಥಿಗಳಿಗೆ ಪಾಲಿಕೆಯಿಂದ 'ಡೆಂಗ್ಯೂ ವಾರಿಯರ್ಸ್ ಸ್ಪರ್ಧೆ' - Dengue Warriors Competition - DENGUE WARRIORS COMPETITION

ಡೆಂಗ್ಯೂ ಪ್ರಕರಣಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪಾಲಿಕೆ 'ಡೆಂಗ್ಯೂ ವಾರಿಯರ್ಸ್ ಸ್ಪರ್ಧೆ' ಆಯೋಜಿಸಿದೆ.

Dengue
ಡೆಂಗ್ಯೂ (ETV Bharat)

By ETV Bharat Karnataka Team

Published : Jul 6, 2024, 9:02 AM IST

ಬೆಂಗಳೂರು: ಹೆಚ್ಚುತ್ತಿರುವ ಡೆಂಗ್ಯೂ ಪ್ರಕರಣಗಳಿಂದಾಗಿ ಭಯದ ವಾತಾವರಣ ನಿರ್ಮಾಣವಾಗಿದೆ. ನಗರದಲ್ಲಿ ಹೆಚ್ಚುತ್ತಿರುವ ಡೆಂಗ್ಯೂ ಪ್ರಕರಣಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪಾಲಿಕೆಯ ಆರೋಗ್ಯ ವಿಭಾಗ, ನಾಗರಿಕರು ಹಾಗೂ ವಿದ್ಯಾರ್ಥಿಗಳಿಗೆ 'ಡೆಂಗ್ಯೂ ವಾರಿಯರ್ಸ್ ಸ್ಪರ್ಧೆ'ಯಲ್ಲಿ ಪಾಲ್ಗೊಳ್ಳಲು ಆಹ್ವಾನಿಸಿದೆ.

ಡೆಂಗ್ಯೂ ವಿರುದ್ಧ ಹೋರಾಡಲು ಪಾಲಿಕೆ ಆರೋಗ್ಯ ವಿಭಾಗದ ಜೊತೆ ನಾಗರಿಕರು ಹಾಗೂ ವಿದ್ಯಾರ್ಥಿಗಳು ಕೈ ಜೋಡಿಸುವ ನಿಟ್ಟಿನಲ್ಲಿ ಈ ವಿನೂತನ ಕ್ರಮವನ್ನು ಕೈಗೊಳ್ಳಲಾಗಿದೆ. ಆಯಾ ವಲಯ ವ್ಯಾಪ್ತಿಯಲ್ಲಿ ಆಶಾ ಕಾರ್ಯಕರ್ತೆಯರು, ಎ.ಎನ್.ಎಂ.ಗಳು ಮನೆ-ಮನೆಗಳಿಗೆ ಭೇಟಿ ನೀಡಿ ನಾಗರಿಕರಲ್ಲಿ ಡೆಂಗ್ಯೂ ನಿಯಂತ್ರಣದ ಬಗ್ಗೆ ಅರಿವು ಮೂಡಿಸುತ್ತಾರೆ. ಆರೋಗ್ಯ ವೈದ್ಯಾಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಿ ಡೆಂಗ್ಯೂ ನಿಯಂತ್ರಣದ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಪಾಲಿಕೆ ತಿಳಿಸಿದೆ.

ಡೆಂಗ್ಯೂ ನಿಯಂತ್ರಣಕ್ಕೆ ಪಾಲಿಕೆ ಕ್ರಮ (ETV Bharat)

ಪಾಲಿಕೆಯು ಡೆಂಗ್ಯೂ ನಿಯಂತ್ರಿಸಲು ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಡೆಂಗ್ಯೂ ನಿಯಂತ್ರಣಕ್ಕಾಗಿ ನಾಗರಿಕರು ಅಥವಾ ವಿದ್ಯಾರ್ಥಿಗಳು ತಮ್ಮ ಮನೆ (@nammahomes) ಗಳಲ್ಲಿ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ, ಯಾವ ರೀತಿ ಇತರರಿಗೆ ಅರಿವು ಮೂಡಿಸಲಾಗಿದೆ ಎಂಬುದರ ಕುರಿತು ಕಿರು ಚಿತ್ರಗಳನ್ನು ಮಾಡಬೇಕು. ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್​​ ಮಾಡಿ ಪಾಲಿಕೆಯ ಆರೋಗ್ಯ ವಿಭಾಗದ ವಿಶೇಷ ಆಯುಕ್ತರ ಸಾಮಾಜಿಕ ಜಾಲತಾಣಗಳಿಗೆ ಟ್ಯಾಗ್ ಮಾಡಬೇಕು. ಅದರ ಜೊತೆಗೆ https://drive.google.com/drive/folders/1ePawzLcQO6aAGP2AxszxsbYtsHvbGGMO ಲಿಂಕ್ ಅಥವಾ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ನಾಗರಿಕರು ಹಾಗೂ ವಿದ್ಯಾರ್ಥಿಗಳು ವಿಡಿಯೋಗಳನ್ನು ಅಪ್‌ಲೋಡ್ ಮಾಡಬೇಕು ಎಂದು ವಿನಂತಿಸಿದೆ.

ಇದನ್ನೂ ಓದಿ:ಪಡೆದುಕೊಂಡಿದ್ದ ಹಣವನ್ನು ದರ್ಶನ್​ಗೆ ವಾಪಸ್ ಕೊಟ್ಟಿದ್ದೇನಷ್ಟೇ: ವಿಚಾರಣೆ ಬಳಿಕ ಮೋಹನ್ ರಾಜ್ - Mohan Raj On Darshan Case

ಸಾಮಾಜಿಕ ಜಾಲತಾಣ ಹಾಗೂ ಲಿಂಕ್ / ಕ್ಯೂಆರ್ ಕೋಡ್​​ನಲ್ಲಿ ವಿಡಿಯೋ ಅಪ್ಲೋಡ್ ಮಾಡುವ ಸಮಯದಲ್ಲಿ ನಾಗರಿಕರಾದರೆ ಹೆಸರು, ದೂರವಾಣಿ ಸಂಖ್ಯೆ, ವಾರ್ಡ್, ಸ್ಥಳವನ್ನು ನಮೂದಿಸಿರಬೇಕು. ವಿದ್ಯಾರ್ಥಿಗಳಾದರೆ ಹೆಸರು, ದೂರವಾಣಿ ಸಂಖ್ಯೆ, ತರಗತಿ, ಶಾಲೆ ಹಾಗೂ ಸ್ಥಳ ನಮೂದಿಸಿ ವಿಡಿಯೋ ಅಪ್ಲೋಡ್ ಮಾಡಬೇಕು ಎಂದು ತಿಳಿಸಿದೆ.

ಇದನ್ನೂ ಓದಿ:ರಾಜ್ಯದಲ್ಲೇ ಚಾರ್ಮಾಡಿ, ಕೊಟ್ಟಿಗೆಹಾರದಲ್ಲಿ ಅತೀ ಹೆಚ್ಚು ಮಳೆ ದಾಖಲು - Mudigere Heavy Rain

ಜುಲೈ 25ರೊಳಗೆ ವಿಡಿಯೋ ಅಪ್ಲೋಡ್​ಗೆ ಅವಕಾಶ:ಸಾಮಾಜಿಕ ಜಾಲತಾಣದಲ್ಲಿ ಜುಲೈ 25ರವರೆಗೆ ವಿಡಿಯೋ ಅಪ್ಲೋಡ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಅಪ್ಲೋಡ್ ಮಾಡಿದ ವಿಡಿಯೋಗಳಲ್ಲಿ ಹೆಚ್ಚು ಲೈಕ್ಸ್ ಬಂದಿರುವ 5 ವಿಡಿಯೋಗಳು ಹಾಗೂ ಯಾವ ಶಾಲೆಗಳಲ್ಲಿ ಹೆಚ್ಚು ಡೆಂಗ್ಯೂ ವಾರಿಯರ್ಸ್ ಆಗುತ್ತಾರೆ. ಅಂತಹ ಶಾಲೆಗಳನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡಲಾಗುವುದು ಎಂದು ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ತಿಳಿಸಿದ್ದಾರೆ.

ABOUT THE AUTHOR

...view details