ಕರ್ನಾಟಕ

karnataka

ETV Bharat / state

ಕುಮಾರಸ್ವಾಮಿಗೆ ರಾಜಕಾರಣ ಮಾತನಾಡುವುದು ಬಿಟ್ಟು ಬೇರೇನು ಗೊತ್ತು?: ಡಿ.ಕೆ.ಶಿವಕುಮಾರ್ - D K Shivakumar - D K SHIVAKUMAR

ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕೇಂದ್ರ ಸಚಿವ ಹೆಚ್​.ಡಿ.ಕುಮಾರಸ್ವಾಮಿ ಕುರಿತು ಮಾತನಾಡುತ್ತಾ, ಅವರಿಗೆ ರಾಜಕಾರಣ ಬಿಟ್ಟು ಬೇರೇನು ಗೊತ್ತಿದೆ? ಎಂದರು.

DCM D K Shivakumar
ಡಿಸಿಎಂ ಡಿ.ಕೆ.ಶಿವಕುಮಾರ್ (ETV Bharat)

By ETV Bharat Karnataka Team

Published : Aug 12, 2024, 6:08 PM IST

ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ (ETV Bharat)

ಬೆಂಗಳೂರು: ಕೆಆರ್​ಎಸ್​ನಲ್ಲೂ ಸಮಸ್ಯೆಯಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರಲ್ಲಾ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್, "ಕುಮಾರಸ್ವಾಮಿಗೆ ರಾಜಕಾರಣ ಮಾತನಾಡುವುದು ಬಿಟ್ಟು ಬೇರೇನು ಗೊತ್ತು" ಎಂದರು.

ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿಂದು ನಡೆದ ಮಾನವ-ಆನೆ ಸಂಘರ್ಷ ನಿರ್ವಹಣೆ ಅಂತಾರಾಷ್ಟ್ರೀಯ ಸಮಾವೇಶದ ಬಳಿಕ ಮಾತನಾಡಿದ ಅವರು, ಕುಮಾರಸ್ವಾಮಿಗೆ ಕೆಆರ್​ಎಸ್​ನಲ್ಲೇನು ಸಮಸ್ಯೆಯಿದೆ?. ಎಲ್ಲಾ ಅಣೆಕಟ್ಟುಗಳ ಸುರಕ್ಷತೆಗೆ ಸಮಿತಿ ರಚಿಸಿ, ಅಣೆಕಟ್ಟುಗಳಿಗೆ ಭೇಟಿ ನೀಡಿ ವರದಿ ನೀಡುವಂತೆ ಸೂಚಿಸಲಾಗಿದೆ. ಯಾವುದೇ ರೈತರನ್ನು ಗಾಬರಿಪಡಿಸುವ ಅಗತ್ಯವಿಲ್ಲ" ಎಂದು ಹೇಳಿದರು.

ತುಂಗಭದ್ರಾ ಅಣೆಕಟ್ಟು ಗೇಟ್ ದುರಸ್ತಿ ಕಾರ್ಯ ಆರಂಭ: "ತುಂಗಭದ್ರಾ ಅಣೆಕಟ್ಟೆಯ ಗೇಟ್ ದುರಸ್ತಿ ಕಾರ್ಯ ಆರಂಭವಾಗಿದೆ. ನೀರಿನ ಪ್ರಮಾಣ ಕಡಿಮೆ ಮಾಡದ ಹೊರತಾಗಿ ದುರಸ್ತಿ ಕಾರ್ಯ ಸಾಧ್ಯವಿಲ್ಲ" ಎಂದರು.

"ನಾನು ಅಣೆಕಟ್ಟೆಗೆ ಭೇಟಿ ನೀಡಿ ಬಂದಿದ್ದೇನೆ. ಜಿಂದಾಲ್ ಕಂಪೆನಿ ಹಾಗೂ ಇತರರ ಜತೆ ಮಾತನಾಡಿದ್ದೇನೆ. ಕೆಲವೇ ಕ್ಷಣಗಳಲ್ಲಿ ಕೆಲಸ ಆರಂಭವಾಗಿರುವ ಬಗ್ಗೆ ಮಾಹಿತಿ ಕಳುಹಿಸಿಕೊಡುತ್ತೇನೆ" ಎಂದು ತಿಳಿಸಿದರು.

ಈ ಘಟನೆಗೆ ಯಾರನ್ನಾದರೂ ಹೊಣೆ ಮಾಡಿದ್ದೀರಾ? ಎಂದು ಕೇಳಿದ್ದಕ್ಕೆ, "ಅಧಿಕಾರಿಗಳನ್ನು ಹೊಣೆ ಮಾಡುವುದಕ್ಕಿಂತ ಅಣೆಕಟ್ಟು ಉಳಿಸಿ, ರೈತರನ್ನು ರಕ್ಷಣೆ ಮಾಡುವುದು ನಮ್ಮ ಆದ್ಯತೆ. ಅನಂತರ ಅಧಿಕಾರಿಗಳ ವಿಚಾರ ನೋಡೋಣ. ಮೊದಲು ಸಮಸ್ಯೆ ಬಗೆಹರಿಸುವುದು ಮುಖ್ಯ. ಇದು 70 ವರ್ಷಗಳ ಹಳೆಯ ಅಣೆಕಟ್ಟು. ಅದರ ಸರಪಳಿ ಕಟ್ ಆಗಿದೆ. ಬೇರೆ ಕಡೆಗಳಲ್ಲಿ ಎರಡು ಅವಕಾಶವಿರುತ್ತದೆ. ರೈತರಿಗೆ ನೀರು ಉಳಿಸುವುದಕ್ಕಾಗಿ ಗೇಟ್ ಹಾಕಲು ಪ್ರಯತ್ನ ಮಾಡುತ್ತಿದ್ದೇವೆ. ಅಣೆಕಟ್ಟೆಯಲ್ಲಿ ನೀರು ಕಡಿಮೆಯಾಗದ ಹೊರತು ಕೆಲಸ ಮಾಡಲು ಸಾಧ್ಯವಿಲ್ಲ. ಹೀಗಾಗಿ ನೀರು ಹರಿಯಲಿದೆ. ದ್ವಿಗುಣ ಸಿಬ್ಬಂದಿ ನಿಯೋಜಿಸಿ ಹಗಲು ರಾತ್ರಿಯಿಡಿ ತ್ವರಿತಗತಿಯಲ್ಲಿ ಗೇಟ್ ಸಿದ್ಧಪಡಿಸಲಾಗುತ್ತಿದೆ" ಎಂದು ಹೇಳಿದರು.

ಇದನ್ನೂ ಓದಿ :ಪಾಪಾ ಕುಮಾರಸ್ವಾಮಿ ಮೆಂಟಲ್​​ ಆಗಿದ್ದಾನೆ, ಹುಚ್ಚಾಸ್ಪತ್ರೆಗೆ ಸೇರಿಸೋಣ: ಡಿ.ಕೆ. ಶಿವಕುಮಾರ್ - D K Shivakumar

ABOUT THE AUTHOR

...view details