ಕರ್ನಾಟಕ

karnataka

ETV Bharat / state

ವೃದ್ಧೆ ಮೇಲೆ ಅತ್ಯಾಚಾರ ಎಸಗಿದ ಪ್ರಕರಣ: ಆರೋಪಿಗೆ ಇಪ್ಪತೈದು ವರ್ಷ ಶಿಕ್ಷೆ ವಿಧಿಸಿದ ನ್ಯಾಯಾಲಯ

60 ವರ್ಷದ ವೃದ್ಧೆ ಮೇಲೆ ಅತ್ಯಾಚಾರ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ದಾವಣಗೆರೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಎಫ್.ಟಿ.ಎಸ್.ಸಿ-1 ನ್ಯಾಯಾಲಯವು ಇಪ್ಪತ್ತೈದು ವರ್ಷ ಕಾರಾಗೃಹ ಶಿಕ್ಷೆ , 37 ಸಾವಿರ ರೂ. ದಂಡ ವಿಧಿಸಿದೆ.

Court
ನ್ಯಾಯಾಲಯ ತೀರ್ಪು

By ETV Bharat Karnataka Team

Published : Mar 2, 2024, 10:06 PM IST

ದಾವಣಗೆರೆ: 60 ವರ್ಷದ ವೃದ್ಧೆ ಮೇಲೆ ಅತ್ಯಾಚಾರ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ದಾವಣಗೆರೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಎಫ್.ಟಿ.ಎಸ್.ಸಿ-1 ನ್ಯಾಯಾಲಯ ಇಪ್ಪತ್ತೈದು ವರ್ಷ ಕಾರಾಗೃಹ ಶಿಕ್ಷೆ ಮತ್ತು 37 ಸಾವಿರ ರೂ. ದಂಡ ವಿಧಿಸಿದೆ. ಆಂಜಿನಪ್ಪ ಅಲಿಯಾಸ್ ಮೋಹನ್ ಶಿಕ್ಷೆಗೊಳಗಾದ ಆರೋಪಿ.

2022 ಮಾರ್ಚ್ 29 ರಂದು ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಅರಕೆರೆ ಗ್ರಾಮದಲ್ಲಿ ವೃದ್ಧೆ ಮನೆಯಲ್ಲಿ ಏಕಾಂಗಿಯಾಗಿದ್ದಾಗ ಆರೋಪಿ ಆಂಜಿನಪ್ಪ ಅಲಿಯಾಸ್ ಮೋಹನ್ ಅತ್ಯಾಚಾರ ಎಸಗಿದ್ದನು. ವೃದ್ಧೆಯನ್ನು ಅಕ್ಕಪಕ್ಕದವರು ಆಸ್ಪತ್ರೆಗೆ ದಾಖಲಿಸಿದ್ದರು. ಅಂದು ವೃದ್ಧೆಯ ಪುತ್ರಿ ಜ್ಯೋತಿ ಅವರು ಹೊನ್ನಾಳಿ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಿಸಿದ್ದರು.

ಹೊನ್ನಾಳಿ ಠಾಣೆ ಪೊಲೀಸರು ಆರೋಪಿ ಆಂಜನೇಯ ಅಲಿಯಾಸ್ ಮೋಹನ್ (22) ಎಂಬಾತನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ತನಿಖಾಧಿಕಾರಿ ಸಿಪಿಐ ದೇವರಾಜ್ ಅವರು ತನಿಖೆ ಪೂರ್ಣಗೊಳಿಸಿ ಆರೋಪಿ ವಿರುದ್ದ ನ್ಯಾಯಾಲಯಕ್ಕೆ ದೋಷರೋಪಣಾ ಪಟ್ಟಿಯ ಸಲ್ಲಿಸಿದ್ದರು.

ಈ ಪ್ರಕರಣವನ್ನು ಕೈಗೆತ್ತಿಗೊಂಡಿದ್ದ ದಾವಣಗೆರೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಎಫ್.ಟಿ.ಎಸ್.ಸಿ-1 ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಪಾದ್.ಎನ್ ಅವರು ವಾದ - ಪ್ರತಿವಾದ ಆಲಿಸಿದರು. ಆಂಜಿನಪ್ಪ ಅಲಿಯಾಸ್ ಮೋಹನ್ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆ ಆರೋಪಿಗೆ 25 ವರ್ಷ ಶಿಕ್ಷೆ ಹಾಗೂ 37,000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಈ ಪ್ರಕರಣದಲ್ಲಿ ಸಂತ್ರಸ್ತೆ ಪರ ಸರ್ಕಾರಿ ವಕೀಲ ಸುನಂದಾ ಮಡಿವಾಳರ್ ಅವರು ನ್ಯಾಯ ಮಂಡನೆ ಮಾಡಿದ್ದರು.

ಇದನ್ನೂಓದಿ:ಮಕ್ಕಳನ್ನು ನೋಡಿಕೊಳ್ಳುವುದು ಪೂರ್ಣಾವಧಿ ಕೆಲಸವಲ್ಲ, ಪತ್ನಿಗೆ ಜೀವನಾಂಶ ನೀಡಲಾಗದು ಎನ್ನುವಂತಿಲ್ಲ: ಹೈಕೋರ್ಟ್

ABOUT THE AUTHOR

...view details