ದಾವಣಗೆರೆ:ಮೋಸ ಹೋಗುವವರು ಎಲ್ಲಿಯವರೆಗೆ ಇರೋತ್ತಾರೆ ಅಲ್ಲಿಯವರೆಗೆ ಮೋಸ ಮಾಡೋರೋ ಇದ್ದೇ ಇರುತ್ತಾರೆ. ದುರಾಸೆಗೆ ಬಿದ್ದು ಸಾಕಷ್ಟು ಜನರು ಲಕ್ಷಾಂತರ ರೂಪಾಯಿ ಹಣ ಕಳೆದುಕೊಳ್ಳುತ್ತಿದ್ದಾರೆ. ಮೋಸ ಮಾಡುವವರು ಇದೀಗ ತಂತ್ರಜ್ಞಾನ ಬಳಸಿಕೊಂಡು ವಂಚನೆ ಎಸಗುತ್ತಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಎಸ್ಪಿ ಮನವಿ ಮಾಡಿದ್ದಾರೆ.
ದಾವಣಗೆರೆ ಜಿಲ್ಲೆಯಲ್ಲಿ ಇದೀಗ ಪೆಡೆಕ್ಸ್ ಕೋರಿಯರ್ ಬಲೆಗೆ ಬಿದ್ದು, ಸಾರ್ವಜನಿಕರು ಲಕ್ಷಾಂತರ ರೂಪಾಯಿ ಹಣ ಕಳೆದುಕೊಳ್ಳುತ್ತಿರುವವರ ಪ್ರಕರಣಗಳು ಬೆಳಕಿಗೆ ಬಂದಿವೆ. ಹೌದು ದೂರವಾಣಿ ಮೂಲಕ ಜನರನ್ನು ಸಂಪರ್ಕಿಸುತ್ತಿರುವ ಸೈಬರ್ ಕ್ರೈಮ್ ಖದೀಮರು ನಿಮಗೆ ಪೆಡಕ್ಸ್ ಕೋರಿಯರ್ ಬಂದಿದ್ದು, ಅದರಲ್ಲಿ ಡ್ರಗ್ಸ್ ಇದೇ. ಪೊಲೀಸ್ ಕೇಸ್ ಆಗಲಿದೆ ಎಂದು ಜನರನ್ನು ಹೆದರಿಸುತ್ತಾರೆ ಎಂದು ಎಸ್ಪಿ ಹೇಳಿದರು.
ಇಷ್ಟಕ್ಕೆ ಸುಮ್ಮನಾಗದ ಅವರು ನಮ್ಮ ಪೊಲೀಸ್ ಮೇಲಾಧಿಕಾರಿಗಳು ವಿಡಿಯೋ ಕಾಲ್ನಲ್ಲಿ ಮಾತನಾಡುತ್ತಾರೆ ಎಂದು ಹೆದರಿಸುತ್ತಾರೆ. ಆಗ ಅವರು ಹಣಕ್ಕೆ ಬೇಡಿಕೆ ಇಟ್ಟು ನಾವು ಕೇಸ್ ದಾಖಲಿಸುವುದಿಲ್ಲ. ಇಲ್ಲವಾದರೆ ನೀವು ಜೈಲಿಗೆ ಹೋಗ ಬೇಕಾಗುತ್ತದೆ ಎಂದು ಹೆದರಿಸುತ್ತಾರೆ. ಆಗ ಅಮಾಯಾಕ ಜನ ಅವರಿಗೆ ಹಣ ಹಾಕುತ್ತಿದ್ದಾರೆ. ಕೋರಿಯರ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಅದೊಂದು ಮೋಸದ ಜಾಲ. ಜನರು ಯಾವುದೇ ಕಾರಣಕ್ಕೂ ಮೋಸ ಹೋಗ ಬಾರದು ಎಂದು ಎಸ್ಪಿ ಉಮಾಪ್ರಶಾಂತ್ ಮನವಿ ಮಾಡಿದ್ದಾರೆ.