ದೇವನಹಳ್ಳಿ(ಬೆಂ.ಗ್ರಾಮಾಂತರ):ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಪ್ಲಾಸ್ಕ್ನಲ್ಲಿ ಮರೆಮಾಚಿ ಚಿನ್ನ ಸಾಗಣೆ ಮಾಡುತ್ತಿರುವುದನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ಪ್ರಕರಣ-1: ಸೌದಿ ಅರೇಬಿಯಾದ ಜೆಡ್ಡಾ ಏರ್ಪೋಟ್ನಿಂದ ಪ್ರಯಾಣಿಕನೊಬ್ಬ ಕೆಐಎಬಿಗೆ ಬಂದಿದ್ದ. ಕಸ್ಟಮ್ಸ್ ಅಧಿಕಾರಿಗಳು ಅನುಮಾನಗೊಂಡು ಪರಿಶೀಲನೆ ಮಾಡಿದ್ದು, ಚಿನ್ನವನ್ನು ಪ್ಲಾಸ್ಕ್ನೊಳಗಡೆ ಪೇಸ್ಟ್ ರೂಪದಲ್ಲಿ ಅಡಗಿಟ್ಟಿಸಿದ್ದ. ಪ್ಲಾಸ್ಕ್ ಒಡೆದು ಪರಿಶೀಲಿಸಿದಾಗ ಅಕ್ರಮ ಬೆಳಕಿಗೆ ಬಂದಿದೆ. 7 ಲಕ್ಷ 52 ಸಾವಿರ ರೂ ಮೌಲ್ಯದ 122 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿದೆ. ಪ್ರಯಾಣಿಕನನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.
ಪ್ರಕರಣ-2:ಇನ್ನೊಂದು ಪ್ರಕರಣದಲ್ಲಿಹಾವನ್ನು ಬಾಟಲಿಯಲ್ಲಿ ಹಾಕಿಕೊಂಡು ವಿದೇಶದಿಂದ ಆಗಮಿಸಿದ್ದ ಪ್ರಯಾಣಿಕನನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬ್ಯಾಂಕಾಕ್ನ ಡಾನ್ ಮಿಯಾಂಗ್ ಏರ್ಪೋಟ್ನಿಂದ ಬೆಂಗಳೂರಿಗೆ ಇಂದು ಬೆಳಿಗ್ಗೆ ಏರ್ ಏಷ್ಯಾ ವಿಮಾನದಲ್ಲಿ ಕೆಐಎಬಿಗೆ ಪುರುಷೋತ್ತಮ್ ಎಂಬ ಪ್ರಯಾಣಿಕ ಬಂದಿಳಿದಿದ್ದ. ಸಿಐಎಸ್ಎಫ್ ಸಿಬ್ಬಂದಿ ತಪಾಸಣೆ ವೇಳೆ ಹಾವು ಸಾಗಾಟ ಬಯಲಾಗಿದೆ. ಪ್ರಾಣಿಗಳ ಸಾಗಾಟ ನಿಷೇಧ ಹಿನ್ನೆಲೆಯಲ್ಲಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಹಾವಿನ ಬಾಟಲ್ ಸಮೇತ ಪ್ರಯಾಣಿಕನನ್ನು ಅರಣ್ಯ ಇಲಾಖೆ ಅಧಿಕಾರಿಗಳ ವಶಕ್ಕೆ ಒಪ್ಪಿಸಲಾಗಿದೆ.
ಇದನ್ನೂ ಓದಿ:ಬೆಂಗಳೂರು, ಹೈದರಾಬಾದ್ ಏರ್ಪೋರ್ಟ್ನಲ್ಲಿ ಕಾರ್ಯಾಚರಣೆ: 13 ಕೋಟಿ ಮೌಲ್ಯದ ವಜ್ರ, ವಿದೇಶಿ ಕರೆನ್ಸಿ ವಶಕ್ಕೆ