ಕರ್ನಾಟಕ

karnataka

ETV Bharat / state

ಮಂಡ್ಯದಲ್ಲಿ ಪ್ರೀತಂ ಗೌಡ ಭಾವಚಿತ್ರವಿದ್ದ ಫ್ಲೆಕ್ಸ್​ಗೆ ಬೆಂಕಿ: ಸಿ.ಟಿ.ರವಿ ಹೇಳಿದ್ದೇನು? - BJP JDS Padayatra - BJP JDS PADAYATRA

ಪ್ರೀತಂ ಗೌಡ ಭಾವಚಿತ್ರವಿದ್ದ ಫ್ಲೆಕ್ಸ್‌ಗಳಿಗೆ ಬೆಂಕಿ ಹಚ್ಚಿದ ಘಟನೆಯ ಕುರಿತು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಪ್ರತಿಕ್ರಿಯಿಸಿದ್ದಾರೆ.

CT RAVI REACTION
ವಿಧಾನ ಪರಿಷತ್ ಸದಸ್ಯ ಸಿಟಿ ರವಿ (ETV Bharat)

By ETV Bharat Karnataka Team

Published : Aug 8, 2024, 8:10 PM IST

ಸಿ.ಟಿ.ರವಿ ಹೇಳಿಕೆ (ETV Bharat)

ಮಂಡ್ಯ: ಕೇಂದ್ರ ಸಚಿವರಾದ ಹೆಚ್.​ಡಿ.ಕುಮಾರಸ್ವಾಮಿ ಅವರು ಈಗ ಎನ್​ಡಿಎ ಕೂಟದ ನಾಯಕರು. ಅವರಿಗೆ ಇರಬೇಕಾದ ಗೌರವ ಇದ್ದೇ ಇದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.

ಬುಧವಾರ ನಡೆದ ಪಾದಯಾತ್ರೆ ವೇಳೆ ಹಾಸನದ ಮಾಜಿ ಬಿಜೆಪಿ ಶಾಸಕ ಪ್ರೀತಂ ಗೌಡರ ಭಾವಚಿತ್ರವಿದ್ದ ಫ್ಲೆಕ್ಸ್‌ಗಳಿಗೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ ಘಟನೆ ಕುರಿತು ಮಂಡ್ಯದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.

ಎರಡೂ ಪಕ್ಷದ ಕಾರ್ಯಕರ್ತರು ಕೈ-ಕೈ ಮಿಲಾಯಿಸಿಲ್ಲ. ಕೆಲವರಷ್ಟೇ ಆ ರೀತಿ ಮಾಡಿದ್ದಾರೆ. ಸಾವಿರಾರು ಜನ ಭಾಗವಹಿಸಬೇಕಾದರೆ ಅವರವರ ನಾಯಕರ ಬಗ್ಗೆ ಅಭಿಮಾನದಿಂದ ಘೋಷಣೆ ಕೂಗುತ್ತಾರೆ. ಕುಮಾರಸ್ವಾಮಿ ನಮ್ಮ ಎನ್​ಡಿಎ ನಾಯಕರು. ಪ್ರೀತಂ ಭವಿಷ್ಯದ ಬಿಜೆಪಿ ಲೀಡರ್. ಪ್ರೀತಂ ಗೌಡರನ್ನು ರಕ್ಷಣೆ ಮಾಡಿಕೊಂಡು ಕುಮಾರಸ್ವಾಮಿ ಅವರನ್ನೂ ಗೌರವಿಸಿ ನಮ್ಮ ಮೈತ್ರಿ ಮುಂದುವರಿಸುತ್ತೇವೆ. ಇನ್ನು ವೇದಿಕೆಗೆ ಬಹಳ ಜನ ಹತ್ತಿಲ್ಲ, ವೇದಿಕೆ ದೊಡ್ಡದೂ ಇರಲಿಲ್ಲ. ಎಲ್ಲರಿಗೂ ಗೌರವವಿದೆ. ವರ್ತಮಾನದಲ್ಲಿದ್ದೂ ರಾಜಕಾರಣ ಮಾಡಬೇಕು, ಭವಿಷ್ಯದ ಬಗ್ಗೆ ಯೋಚಿಸಿಯೂ ರಾಜಕಾರಣ ಮಾಡಬೇಕು. ನಿನ್ನೆಯ ಬಗ್ಗೆ ಅಲ್ಲ. ಊಹಾತ್ಮಕ ಪ್ರಶ್ನೆಗೆ ಉತ್ತರಿಸಲ್ಲ ಎಂದರು.

ಏನಿದು ಘಟನೆ?: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿ ನಡೆಯುತ್ತಿರುವ ಜೆಡಿಎಸ್ ಹಾಗೂ ಬಿಜೆಪಿ ಪಾದಯಾತ್ರೆಯ ವೇಳೆ ಕಿಡಿಗೇಡಿಗಳು ಮಂಡ್ಯ ಹೊರವಲಯದ ಉಮ್ಮಡಹಳ್ಳಿ ಸಮೀಪ ಪ್ರೀತಂ ಗೌಡ ಭಾವಚಿತ್ರವಿದ್ದ ಫ್ಲೆಕ್ಸ್​ಗೆ ಬೆಂಕಿ ಹಚ್ಚಿದ್ದರು. ಈ ಘಟನೆ ಉಭಯ ಪಕ್ಷಗಳಿಗೆ ಇರಿಸುಮುರುಸು ಉಂಟುಮಾಡಿದೆ.

ಇದನ್ನೂ ಓದಿ:SIT ಅಂದ್ರೆ ಸಿದ್ದರಾಮಯ್ಯ ಇನ್ವೆಸ್ಟಿಗೇಶನ್ ಟೀಂ: ಮಂಡ್ಯದಲ್ಲಿ ಬಿಜೆಪಿ-ಜೆಡಿಎಸ್​ ಟೀಕೆ - BJP JDS Padayatra

ABOUT THE AUTHOR

...view details