ಚಿಕ್ಕೋಡಿ:ಇಬ್ಬರು ಮಕ್ಕಳನ್ನು ದುಷ್ಕರ್ಮಿಗಳು ಕಿಡ್ನಾಪ್ ಮಾಡಿಕೊಂಡು ಪರಾರಿಯಾಗಿರುವ ಘಟನೆ ಅಥಣಿ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಹುಲಗಬಾಳ ರೋಡ್ ಸ್ವಾಮಿ ಪ್ಲಾಟ್ನಲ್ಲಿ ಈ ಘಟನೆ ನಡೆದಿದೆ. ಸ್ವಸ್ತಿ ವಿಜಯ್ ದೇಸಾಯಿ (4) ಮತ್ತು ವಿಯೋಮ್ ವಿಜಯ ದೇಸಾಯಿ (3) ಅಪಹರಣಕ್ಕೊಳಗಾದ ಮಕ್ಕಳು.
ಕಾರಿನಲ್ಲಿ ಬಂದ ಅಪಹರಣಕಾರರು, ಮನೆಗೆ ನುಗ್ಗಿ ಇಬ್ಬರು ಮಕ್ಕಳನ್ನು ಎತ್ತಿಕೊಂಡು ಪರಾರಿಯಾಗಿದ್ದಾರೆ. ಅಪಹರಣದ ದೃಶ್ಯ ಮನೆಯಲ್ಲಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಥಣಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದ್ದು, ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ (ETV Bharat) ಅಪಹರಣಕ್ಕೊಳಗಾದ ಮಕ್ಕಳ ತಂದೆ ವಿಜಯ್ ದೇಸಾಯಿ ಈಟಿವಿ ಭಾರತ ಜೊತೆ ದೂರವಾಣಿ ಮುಖಾಂತರ ಮಾತನಾಡಿ, ನಮ್ಮ ಮನೆಯಲ್ಲಿ ಇವತ್ತು ಯಾರು ಇರಲಿಲ್ಲ. ನಮ್ಮ ತಾಯಿಯವರು ಒಬ್ಬರೇ ಇದ್ದರು. ನನ್ನ ಪತ್ನಿ ಕೆಲಸದ ಮೇಲೆ ಹೊರಗಡೆ ಬಂದಿದ್ದಳು. ನಾನು ಕೂಡ ಕೆಲಸ ನಿಮಿತ್ತ ಬೆಳಗಾವಿಯಲ್ಲಿದ್ದೆ. ಈ ವೇಳೆ ಘಟನೆ ನಡೆದಿದೆ. ಅವರು ಯಾರು ಅಂತ ಗೊತ್ತಿಲ್ಲ. ಸದ್ಯಕ್ಕೆ ನಮಗೆ ಭಯ ಆಗುತ್ತಿದೆ. ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ ಎಂದು ನೋವು ತೋಡಿಕೊಂಡಿದ್ದಾರೆ.
ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ (ETV Bharat) ಇದನ್ನೂ ಓದಿ:ಸಿಂಧನೂರಲ್ಲಿ ಕಿಡ್ನಾಪ್ ಆಗಿದ್ದ ನಾಲ್ವರು ಮಕ್ಕಳ ರಕ್ಷಣೆ: ಅಂತಾರಾಜ್ಯ ಅಪಹರಣಕಾರರ ಬಂಧನ - Children Kidnap Case