ಕರ್ನಾಟಕ

karnataka

ETV Bharat / state

ಸೋಡಿಯಂ ಬಳಸಿ ಸ್ಫೋಟ: ಡ್ರೋನ್​ ಪ್ರತಾಪ್​ಗೆ 10 ದಿನ ನ್ಯಾಯಾಂಗ ಬಂಧನ - DRONE PRATHAP

ಮಧುಗಿರಿ ಕೋರ್ಟ್ ಡ್ರೋನ್​ ಪ್ರತಾಪ್​ಗೆ 10 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.

CASE OF EXPLOSION USING SODIUM  TUMAKURU  DRONE PRATHAP BLASTING VIDEO  ಡ್ರೋನ್​ ಪ್ರತಾಪ್
ಡ್ರೋನ್​ ಪ್ರತಾಪ್​ಗೆ ಹತ್ತು ದಿನಗಳ ಕಾಲ ನ್ಯಾಯಾಂಗ ಬಂಧನ (ETV Bharat)

By ETV Bharat Karnataka Team

Published : 4 hours ago

ತುಮಕೂರು:ಸೋಡಿಯಂ ಬಳಸಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿಡ್ರೋನ್​ ಪ್ರತಾಪ್​ಗೆ 10 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಮಧುಗಿರಿ ಕೋರ್ಟ್ ಇಂದು ಆದೇಶ ನೀಡಿದೆ.

ಸೋಡಿಯಂ ಬಳಸಿ ಸ್ಫೋಟ: ಡ್ರೋನ್​ ಪ್ರತಾಪ್​ಗೆ 10 ದಿನ ನ್ಯಾಯಾಂಗ ಬಂಧನ (ETV Bharat)

ಈ ತಿಂಗಳ 26ರ ವರೆಗೆ ನ್ಯಾಯಾಂಗ ಬಂಧನಕ್ಕೆ ಮಧುಗಿರಿಯ ಜೆಎಂಎಫ್ ಸಿ ನ್ಯಾಯಾಲಯದಿಂದ ಆದೇಶಿಸಲಾಗಿದೆ. ಇಂದು ಮಧುಗಿರಿಯ ಜೆಎಂಎಫ್​ಸಿ ನ್ಯಾಯಾಲಯಕ್ಕೆ ಮಿಡಿಗೇಶಿ ಪೊಲೀಸರು ಡ್ರೋನ್​ ಪ್ರತಾಪ್​ನನ್ನು ಹಾಜರುಪಡಿಸಿದ್ದರು. ವಾದ ಆಲಿಸಿ 10 ದಿನಗಳ ಕಾಲ ಡ್ರೋನ್ ಪ್ರತಾಪ್ ಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲು ಆದೇಶಿಸಲಾಗಿದೆ.

ಡ್ರೋನ್ ಪ್ರತಾಪ್ ಕರೆತಂದು ಸ್ಥಳ ಮಹಜರು ನಡೆಸಿದ ಪೊಲೀಸರು (ETV Bharat)

ಏನಿದು ಪ್ರಕರಣ:ಕೃಷಿ ಹೊಂಡದಲ್ಲಿ ಸೋಡಿಯಂ ಬಳಸಿ ಡ್ರೋನ್​ ಪ್ರತಾಪ್​ ಸ್ಫೋಟಿಸಿದ್ದರು. ಬಳಿಕ ಸ್ಫೋಟಗೊಳ್ಳುವ ವಿಡಿಯೋವನ್ನು ಡ್ರೋನ್​ ಪ್ರತಾಪ್ ಸಾಮಾಜಿಕ ಜಾಲತಾಣದಲ್ಲಿ, ಯೂಟ್ಯೂಬ್‌ನಲ್ಲೂ ಅಪ್ಲೋಡ್​ ಮಾಡಿದ್ದರು. ಆ ವಿಡಿಯೋ ವೈರಲ್​ ಆಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಪ್ರತಾಪ್ ಅಲ್ಲದೇ, ಜಮೀನಿನ ಮಾಲೀಕ ಜಿತೇಂದ್ರ ಜೈನ್​ ಮತ್ತು ಇತರರ ವಿರುದ್ಧ ಬಿಎನ್ಎಸ್ ಕಾಯ್ದೆ ಸೆಕ್ಷನ್ 176, ಸಿಆರ್‌ಪಿಸಿ 158ಎ ಮತ್ತು ಬಿ ಹಾಗೂ ಸ್ಫೋಟಕ ವಸ್ತುಗಳ ನಿಯಂತ್ರಣ ಕಾಯ್ದೆಯಡಿ ಮಧುಗಿರಿಯ ಮಿಡಿಗೇಶಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಸೋಡಿಯಂ ಬಳಸಿ ಸ್ಫೋಟ ಪ್ರಕರಣ: ಡ್ರೋನ್ ಪ್ರತಾಪ್‌ಗೆ 3 ದಿನ ಪೊಲೀಸ್ ಕಸ್ಟಡಿ

ABOUT THE AUTHOR

...view details