Health Benefits Of Dragon Fruit: ಮನುಷ್ಯನ ದೇಹವನ್ನು ಆರೋಗ್ಯವಾಗಿಡುವಲ್ಲಿ ಹಣ್ಣುಗಳ ಪಾತ್ರ ಹಿರಿದು. ಹೀಗಾಗಿ, ನಿಸರ್ಗದತ್ತವಾಗಿ ಲಭಿಸುವ ಹಲವು ಹಣ್ಣುಗಳನ್ನು ಸವಿಯಲು ವೈದ್ಯರು ಸಲಹೆ ನೀಡುತ್ತಾರೆ. ವಿಶ್ವ ಆರೋಗ್ಯ ಸಂಸ್ಥೆ ತಿಳಿಸುವ ಪ್ರಕಾರ, ಪ್ರತಿದಿನ ಕನಿಷ್ಠ 400 ಗ್ರಾಂ ಹಣ್ಣುಗಳನ್ನು ಸೇವಿಸಬೇಕು. ಇವುಗಳಲ್ಲಿರುವ ಪೋಷಕಾಂಶಗಳು ರೋಗಗಳಿಂದ ರಕ್ಷಿಸುತ್ತವೆ. ಸ್ವತಂತ್ರ ರಾಡಿಕಲ್ಗಳೊಂದಿಗೆ ಹೋರಾಡುವ ಇವುಗಳು ದೇಹವನ್ನು ಅಪಾಯದಿಂದ ಕಾಪಾಡುತ್ತವೆ ಎಂದು ತಜ್ಞರು ಹೇಳುತ್ತಾರೆ.
ಆರೋಗ್ಯ ಕಾಪಾಡುವ ಹಣ್ಣುಗಳಲ್ಲಿ ಡ್ರ್ಯಾಗನ್ ಫ್ರೂಟ್ ಕೂಡ ಒಂದು. ಇದು ಹುಳಿ ಹಾಗೂ ಸಿಹಿಯ ಮಿಶ್ರಣ. ಈ ಹಿಂದೆ ಆಮದು ಮಾಡಿಕೊಳ್ಳುತ್ತಿದ್ದ ವಿದೇಶಿ ಹಣ್ಣನ್ನು ಈಗಂತೂ ದೇಶದ ಹಲವು ರಾಜ್ಯಗಳಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತಿದೆ.
ಪೋಷಕಾಂಶಗಳ ಕಣಜ ಡ್ರ್ಯಾಗನ್ ಫ್ರೂಟ್: ತಜ್ಞರು ಹೇಳುವಂತೆ, ಡ್ರ್ಯಾಗನ್ ಫ್ರೂಟ್ನಲ್ಲಿ (Dragon Fruit) ಹಲವು ಪೋಷಕಾಂಶಗಳಿವೆ. ಫೈಬರ್ ಸಮೃದ್ಧ ಹಣ್ಣು ಇದು. ಕಬ್ಬಿಣ, ಸತು, ಪ್ರೋಟೀನ್ಗಳು, ರಂಜಕ, ಮೆಗ್ನೀಸಿಯಂ ಹೇರಳವಾಗಿದೆ.
ಡ್ರ್ಯಾಗನ್ ಫ್ರೂಟ್ನಿಂದ ಸಿಗುವ ಆರೋಗ್ಯ ಪ್ರಯೋಜನಗಳು:
- ಮನೆಗೆಲಸ, ಅಡುಗೆ ಮಾಡುವಾಗ ಮಹಿಳೆಯರಿಗೆ ಸುಸ್ತು ಸಾಮಾನ್ಯ. ಈ ಪರಿಸ್ಥಿತಿಯಿಂದ ತಕ್ಷಣ ಹೊರಬರಲು ಬಯಸಿದರೆ, ಡ್ರ್ಯಾಗನ್ ಹಣ್ಣು ತಿನ್ನುವುದು ಉತ್ತಮ.
- ಈ ಹಣ್ಣಿನಲ್ಲಿ ಕನಿಷ್ಠ 102 ಕ್ಯಾಲೊರಿಗಳಿವೆ. ಕೊಬ್ಬಿನಂಶ ಹಿತಮಿತವಾಗಿ ದೊರೆಯುತ್ತದೆ ಎನ್ನುವ ಕಾರಣಕ್ಕೆ ತೂಕ ಹೆಚ್ಚುವ ಭಯ ಅಗತ್ಯವಿಲ್ಲ ಎನ್ನುತ್ತಾರೆ ತಜ್ಞರು.
- ಡ್ರ್ಯಾಗನ್ ಹಣ್ಣು ಹೊಟ್ಟೆಯ ಆರೋಗ್ಯವನ್ನು ಬೆಂಬಲಿಸುವಂತಹ ಪ್ರೋಬಯಾಟಿಕ್‌ಗಳಿವೆ. ಇವು ಜೀರ್ಣಕ್ರಿಯೆಯ ಸಮಸ್ಯೆಗಳನ್ನು ತಗ್ಗಿಸುತ್ತದೆ. ಶೀತ, ಜ್ವರದಂತಹ ರೋಗಗಳಿಂದಲೂ ರಕ್ಷಿಸುತ್ತದೆ ಎಂದು ವೈದ್ಯರು ಹೇಳುತ್ತಾರೆ.
- ಡ್ರ್ಯಾಗನ್ ಹಣ್ಣಿನ ಬೀಜಗಳು ಒಮೆಗಾ -3 ಕೊಬ್ಬಿನಾಮ್ಲಗಳನ್ನು ಹೊಂದಿವೆ. ಇದು ಉತ್ತಮ ಕೊಲೆಸ್ಟ್ರಾಲ್ ಹೆಚ್ಚಿಸುತ್ತದೆ. ಇದರಲ್ಲಿರುವ ಮೆಗ್ನೀಸಿಯಂ ಹೃದಯಾಘಾತದ ಅಪಾಯ ಕಡಿಮೆ ಮಾಡುತ್ತದೆ ಎಂಬುದು ತಜ್ಞರ ಮಾತು.
- ಈ ಹಣ್ಣಿನಲ್ಲಿರುವ ವಿಟಮಿನ್ ಸಿ ಮತ್ತು ಆ್ಯಂಟಿಆಕ್ಸಿಡೆಂಟ್‌ಗಳು ದೇಹಕ್ಕೆ ಹಾನಿ ಮಾಡುವ ಫ್ರೀ ರಾಡಿಕಲ್ಗಳ ವಿರುದ್ಧ ಹೋರಾಡುತ್ತವೆ. ಅವುಗಳನ್ನು ನಾಶಪಡಿಸುವ ಮೂಲಕ ಕ್ಯಾನ್ಸರ್ ಅಪಾಯ ತಡೆಯುತ್ತದೆ ಎಂದು ತಜ್ಞರು ಹೇಳುತ್ತಾರೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ (NIH) ಸದಸ್ಯರ ತಂಡ ಕೂಡಾ ಇದನ್ನು ಸ್ಪಷ್ಟಪಡಿಸಿದೆ.
- ಈ ಹಣ್ಣಿನಲ್ಲಿ ಕಬ್ಬಿಣಾಂಶ, ಫೋಲೇಟ್, ವಿಟಮಿನ್- ಬಿ ಇದೆ ಎಂದು ಹೇಳಲಾಗುತ್ತದೆ. ಇವು ಮಹಿಳೆಯರಲ್ಲಿನ ರಕ್ತಹೀನತೆ ಸಮಸ್ಯೆಯನ್ನು ಹೋಗಲಾಡಿಸುತ್ತದೆ.
- ಇದು ವಿಶೇಷವಾಗಿ ಗರ್ಭಾವಸ್ಥೆಯಲ್ಲಿ ತಾಯಂದಿರು ಮತ್ತು ಶಿಶುಗಳ ಆರೋಗ್ಯ ರಕ್ಷಿಸುತ್ತದೆ. ಜೊತೆಗೆ ಇದರಲ್ಲಿರುವ ಮೆಗ್ನೀಷಿಯಂ ಒತ್ತಡ ನಿಯಂತ್ರಣದಲ್ಲಿಟ್ಟು ಉತ್ತಮ ನಿದ್ದೆಗೆ ಹೆಚ್ಚು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ.
- ಫ್ಲೇವನಾಯ್ಡ್‌ಗಳು, ಬೀಟಾ- ಸಾನಿನ್, ಫೀನಾಲಿಕ್ ಹಾಗೂ ಆಸ್ಕೋರ್ಬಿಕ್ ಆ್ಯಸಿಡ್ಗಳು ಈ ಹಣ್ಣಿನಲ್ಲಿವೆ. ಇವು ಮಧುಮೇಹ ರೋಗಿಗಳ ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸುತ್ತವೆ. ಇದು ದೇಹದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ತಜ್ಞರು ವಿವರಿಸುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ ವೀಕ್ಷಿಸಿ: https://pmc.ncbi.nlm.nih.gov/articles/PMC9861186/#:~:text=Results,%2C%20liver%20protective%2C%20and%20neuroprotective.
ಮುಖ್ಯ ಸೂಚನೆ: ಈ ಲೇಖನದಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ, ಸಲಹೆಗಳು ನಿಮ್ಮ ತಿಳುವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಇವುಗಳನ್ನು ಅನುಸರಿಸುವ ಮೊದಲು ಪರಿಣತ ವೈದ್ಯರ ಸಲಹೆಗಳನ್ನು ತೆಗೆದುಕೊಳ್ಳುವುದು ಉತ್ತಮ.
ಇದನ್ನೂ ಓದಿ: ಡ್ರ್ಯಾಗನ್ ಫ್ರೂಟ್ನಿಂದ ಆರೋಗ್ಯಕ್ಕೆ ಎಷ್ಟು ಪ್ರಯೋಜನಗಳಿವೆ ಗೊತ್ತಾ?