ETV Bharat / entertainment

ಎಮರ್ಜೆನ್ಸಿ! ಬಿಗ್‌ಬಾಸ್‌ನಿಂದ ಗೋಲ್ಡ್​ ಸುರೇಶ್ ಮನೆಗೆ; ಹರಡಿತು ವದಂತಿ​ - GOLD SURESH EXIT BIGG BOSS

ಕುಟುಂಬಕ್ಕೆ ಸಂಬಂಧಿಸಿದ ತುರ್ತು ಪರಿಸ್ಥಿತಿ ಹಿನ್ನೆಲೆಯಲ್ಲಿ ಗೋಲ್ಡ್​ ಸುರೇಶ್​ ಅವರನ್ನು ಬಿಗ್​ ಬಾಸ್​ನಿಂದ ಕಳುಹಿಸಿ ಕೊಡಲಾಗಿದೆ.

Gold Suresh
ಬಿಗ್​ ಬಾಸ್​ ಸ್ಪರ್ಧಿ ಗೋಲ್ಡ್​ ಸುರೇಶ್​​​ (Photo: Bigg Boss team)
author img

By ETV Bharat Entertainment Team

Published : 2 hours ago

ಬಿಗ್​ ಬಾಸ್​​ ಕನ್ನಡ ಸೀಸನ್​​ 11: ಕೌಟುಂಬಿಕ ತುರ್ತು ಪರಿಸ್ಥಿತಿಯ ಹಿನ್ನೆಲೆಯಲ್ಲಿ ಸ್ಪರ್ಧಿ ಗೋಲ್ಡ್​ ಸುರೇಶ್​ ಅವರನ್ನು ಮನೆಗೆ ಕಳುಹಿಸಿಕೊಡಲಾಗಿದೆ. ಈ ನಿರ್ಧಾರದ ಹಿಂದಿನ ನಿಖರ ಕಾರಣ ಬಹಿರಂಗಗೊಂಡಿಲ್ಲ.

'12ನೇ ವಾರದ ಶುರುವಿನಲ್ಲೇ ಗೋಲ್ಡ್ ಸುರೇಶ ಆಟಕ್ಕೆ ಬ್ರೇಕ್!' ಬಿಗ್ ಬಾಸ್ ಕನ್ನಡ ಸೀಸನ್ 11, ಸೋಮ-ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್​​​ನಡಿ ಪ್ರೋಮೋ ಅನಾವರಣಗೊಂಡಿದೆ. ಇದರಲ್ಲಿ ಗೋಲ್ಡ್​ ಸುರೇಶ್​ ಅವರನ್ನು ಈ ಕೂಡಲೇ ಹೊರಡುವಂತೆ ಬಿಗ್​ ಬಾಸ್​​ ಸೂಚಿಸಿರೋದನ್ನು ಕಾಣಬಹುದು. ಸಂಪೂರ್ಣ ಸಂಚಿಕೆ ವೀಕ್ಷಿಸಲು ಪ್ರೇಕ್ಷಕರು ಕಾತರರಾಗಿದ್ದಾರೆ.

ಗೋಲ್ಡ್​ ಸುರೇಶ್​​ ಈ ವಾರದ ಕ್ಯಾಪ್ಟನ್​​ ಆಗಿ ಆಯ್ಕೆ ಆಗಿದ್ದರು. ಬಿಗ್​ ಬಾಸ್​ ಮನೆಗೆ ಕ್ಯಾಪ್ಟನ್​ ಆಗೋದು ಅವರ ಬಹುದಿನಗಳ ಕನಸಾಗಿತ್ತು. ಆದ್ರೆ ತಮ್ಮ ನಾಯಕತ್ವದಲ್ಲಿ ವಾರ ಆರಂಭಿಸೋ ಮೊದಲೇ ಸುರೇಶ್​ಗೆ ಕಹಿ ಸುದ್ದಿ ಸಿಕ್ಕಿದೆ. ಹಾಗಾಗಿ, ಅವರು ಡೊಡ್ಮನೆಯಲ್ಲಿ ತಮ್ಮ ಆಟ ನಿಲ್ಲಿಸಬೇಕಾದ ಪರಿಸ್ಥಿತಿ ಬಂದಿದೆ.

ಇದನ್ನೂ ಓದಿ: ಹುಸಿಯಾಯ್ತು ಅಭಿಮಾನಿಗಳ ನಿರೀಕ್ಷೆ! 2024ರಲ್ಲಿ ಸಿನಿಮಾ ಮಾಡದ ಸ್ಯಾಂಡಲ್​​ವುಡ್​ ಸೂಪರ್​​ಸ್ಟಾರ್​ಗಳಿವರು

ಪ್ರೋಮೋದಲ್ಲಿ, 'ಕೆಲ ಸಮಯದ ಹಿಂದೆ ಬಿಗ್​ ಬಾಸ್​ ತಂಡಕ್ಕೆ ಒಂದು ಸಂದೇಶ ತಲುಪಿದೆ. ಸದಸ್ಯರೊಬ್ಬರ ನಿಕಟ ಕುಟುಂಬದಲ್ಲಿ ಒಂದು ತುರ್ತು ಪರಿಸ್ಥಿತಿ ಉಂಟಾಗಿದ್ದು, ಈ ಸಂದರ್ಭದಲ್ಲಿ ಅವರ ಅವಶ್ಯಕತೆ ಬಿಗ್​ ಬಾಸ್​ ಮನೆಗಿಂತ ಅವರ ಸ್ವಗೃಹದಲ್ಲಿ ಕುಟುಂಬದವರಿಗೆ ಹೆಚ್ಚು ಅಗತ್ಯವಿದೆ' ಎಂದು ಬಿಗ್​ ಬಾಸ್​ ತಿಳಿಸಿದ್ದಾರೆ. ನಂತರ 'ಸುರೇಶ್​, ಈ ಮನೆಗಿಂದ ನಿಮ್ಮ ಸ್ವಹೃಹದಲ್ಲಿ ನಿಮ್ಮ ಉಪಸ್ಥಿತಿ ಬಹಳ ಮುಖ್ಯ' ಎಂದು ತಿಳಿಸಿದ್ದಾರೆ. ಭಯಭೀತರಾದ ಸುರೇಶ್​ ಕಾರಣ ಏನು ಎಂದು ತೊದಲು ನುಡಿಯಲ್ಲಿ ಕೇಳಿದ್ದಾರೆ. ಪ್ರತಿಕ್ರಿಯಿಸಿದ ಬಿಗ್​​ ಬಾಸ್​, 'ಚಿಂತಿಸಬೇಡಿ, ತಿಳಿಯಬೇಕಾದದ್ದು ಖಂಡಿತಾ ತಿಳಿಯುತ್ತದೆ. ನಿಮ್ಮ ವಸ್ತುಗಳನ್ನು ಪ್ಯಾಕ್​ ಮಾಡಿ, ನೀವು ಬಿಗ್​ ಬಾಸ್​ ಮನೆಯಿಂದ ಕೂಡಲೇ ಹೊರಡಬೇಕಿದೆ, ಹೋಗಿಬನ್ನಿ' ಎಂದು ತಿಳಿಸಿದ್ದಾರೆ. ಸುರೇಶ್​ ಸೇರಿಂದತೆ ಮನೆಯ ಇತರೆ ಸ್ಪರ್ಧಿಗಳು ಭಾವುಕರಾಗಿದ್ದಾರೆ.

ಇದನ್ನೂ ಓದಿ: ಶಿವಣ್ಣನನ್ನು ಮದುವೆಗೆ ಆಹ್ವಾನಿಸಿದ ಡಾಲಿ ಧನಂಜಯ್​​ - ಧನ್ಯತಾ

ಇಲ್ಲಿ ನಿಖರ ಕಾರಣ ತಿಳಿಸಲಾಗಿಲ್ಲ. ಹಾಗಾಗಿ, ಸೋಷಿಯಲ್​ ಮೀಡಿಯಾದಲ್ಲಿ ಇಲ್ಲಸಲ್ಲದ ವದಂತಿಗಳು ಹಬ್ಬಿದೆ. ಅವರ ಕುಟುಂಬದಲ್ಲಿ ಮರಣ ಎಂಬ ವಿಷಯ ವ್ಯಾಪಕವಾಗಿ ಸದ್ದು ಮಾಡಿತ್ತು. ಆದ್ರೆ ಅಂಥ ಯಾವುದೇ ದುರ್ಘಟನೆ ಸಂಭವಿಸಿಲ್ಲ ಎಂದು ಕೆಲ ವರದಿಗಳು ತಿಳಿಸಿವೆ. ಇಂದಿನ ಸಂಪೂರ್ಣ ಸಂಚಿಕೆ ತಿಳಿದ ಬಳಿಕವೇ ಎಲ್ಲವೂ ಸ್ಪಷ್ಟವಾಗಲಿದೆ. ಗೋಲ್ಡ್​ ಸುರೇಶ್​ ಅಥವಾ ಬಿಗ್​ ಬಾಸ್​ನಿಂದ ಅಧಿಕೃತ ಹೇಳಿಕೆಗಾಗಿ ವೀಕ್ಷಕರು ಕಾಯುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.