ETV Bharat / entertainment

ಶಿವಣ್ಣನ ಮತ್ತೊಂದು ಸಿನಿಮಾ ಘೋಷಣೆ: ಹ್ಯಾಟ್ರಿಕ್​​​ ಹೀರೋ ಜೊತೆ ಕೈಜೋಡಿಸಿದ ಪವನ್ ಒಡೆಯರ್ - SHIVARAJKUMAR NEW MOVIE

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಶಿವರಾಜ್​​​ಕುಮಾರ್​​ ಅವರ ಮತ್ತೊಂದು ಹೊಸ ಸಿನಿಮಾ ಘೋಷಣೆಯಾಗಿದೆ.

Shivarajkumar new movie
ಹ್ಯಾಟ್ರಿಕ್​​​ ಹೀರೋ ಜೊತೆ ಕೈಜೋಡಿಸಿದ ಪವನ್ ಒಡೆಯರ್ (Photo: ETV Bharat)
author img

By ETV Bharat Entertainment Team

Published : 2 hours ago

'ಭೈರತಿ ರಣಗಲ್' ಸೂಪರ್​ ಹಿಟ್​​ ಸಕ್ಸಸ್ ಖುಷಿಯಲ್ಲಿರುವ ಭಜರಂಗಿ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಈಗಾಗಲೇ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿರುವ 'ಸೆಂಚುರಿ ಸ್ಟಾರ್' ಸ್ಯಾಂಡಲ್‌ವುಡ್‌ನ ಯಶಸ್ವಿ ನಿರ್ದೇಶಕರಾದ ಪವನ್‌ ಒಡೆಯರ್‌ ಜೊತೆ ಕೈ ಜೋಡಿಸಿದ್ದಾರೆ. ಶಿವಣ್ಣನಿಗೆ ಆ್ಯಕ್ಷನ್ ಕಟ್ ಹೇಳುತ್ತಿರುವ ಖುಷಿಯಲ್ಲಿ ಪವನ್ ಒಡೆಯರ್ ಇದ್ದು, ಮುಂಬರುವ ಸಿನಿಮಾ ಬಗ್ಗೆ ಅಭಿಮಾನಿಗಳು ಕುತೂಹಲ ವ್ಯಕ್ತಪಡಿಸಿದ್ದಾರೆ.

ಪವನ್ ಒಡೆಯರ್ ಕನ್ನಡ ಚಿತ್ರರಂಗದ ಯಶಸ್ವಿ ನಿರ್ದೇಶಕರಾಗಿ ಮಾತ್ರವಲ್ಲದೇ ನಿರ್ಮಾಪಕರಾಗಿಯೂ ಹೆಸರು ಮಾಡಿದ್ದಾರೆ. 'ಡೊಳ್ಳು' ಚಿತ್ರ ನಿರ್ಮಾಣ ಮಾಡುವ ಮೂಲಕ ನಿರ್ಮಾಪಕರಾಗಿ ಸಿನಿರಂಗದಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದ ಅವರು ತಮ್ಮ ಮೊದಲ ನಿರ್ಮಾಣದಲ್ಲಿಯೇ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ. 'ಅವಸ್ತಿ vs ಅವಸ್ತಿ' ಎಂಬ ಬಾಲಿವುಡ್ ಚಿತ್ರ ನಿರ್ಮಿಸಿರುವ ಪವನ್ ಒಡೆಯರ್ ಸದ್ಯ 'ವೆಂಕ್ಯಾ' ಚಿತ್ರ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ, ತಮ್ಮ ಒಡೆಯರ್ ಮೂವೀಸ್ ಬ್ಯಾನರ್ ಅಡಿ ನಾಲ್ಕನೇ ಚಿತ್ರ ನಿರ್ಮಿಸುತ್ತಿದ್ದಾರೆ‌‌. ಅದು ಕೂಡಾ ಶಿವಣ್ಣನಿಗೆ ಅನ್ನೋದೇ ವಿಶೇಷ.

2025ಕ್ಕೆ ಶಿವಣ್ಣ ಹಾಗೂ ಪವನ್ ಕಾಂಬಿನೇಷನ್​ನ ಈ ಪ್ರಾಜೆಕ್ಟ್​​ ಟೇಕಾಫ್ ಆಗಲಿದೆ. ಕರುನಾಡ ಚಕ್ರವರ್ತಿಗೆ ಆ್ಯಕ್ಷನ್ ಕಟ್ ಹೇಳುತ್ತಿರುವುದರ ಬಗ್ಗೆ ಸಂತಸ ಹಂಚಿಕೊಂಡಿರುವ ಪವನ್ ಒಡೆಯರ್, "ಪ್ರತಿಯೊಬ್ಬ ನಿರ್ದೇಶಕರಿಗೂ ಶಿವಣ್ಣನಿಗೆ ಸಿನಿಮಾ ಮಾಡಬೇಕೆಂಬ ಕನಸಿರುತ್ತದೆ. ನನ್ನ ಈ ಕನಸೀಗ ನನಸಾಗುತ್ತಿದೆ. ಥ್ರಿಲ್ಲರ್ ಜೊತೆಗೆ ಔಟ್ ಅಂಡ್ ಔಟ್ ಕಮರ್ಷಿಯಲ್ ಎಂಟರ್​​ಟೈನರ್ ಚಿತ್ರ ನಿರ್ದೇಶನ ಮಾಡುತ್ತಿದ್ದು, ಹೆಚ್ಚಿನ ಮಾಹಿತಿಯನ್ನು ಸದ್ಯ ರಿವೀಲ್ ಮಾಡಲು ಆಗುತ್ತಿಲ್ಲ. ಆದರೆ ಈ ಹಿಂದಿನ ಸಿನಿಮಾಗಳಿಗಿಂತ ಈ ಚಿತ್ರದಲ್ಲಿ ಶಿವಣ್ಣ ವಿಭಿನ್ನವಾಗಿ ಕಾಣಲಿದ್ದಾರೆ" ಎಂದು ಭರವಸೆ ನೀಡಿದರು.

ಇದನ್ನೂ ಓದಿ: ಶಿವಣ್ಣನನ್ನು ಮದುವೆಗೆ ಆಹ್ವಾನಿಸಿದ ಡಾಲಿ ಧನಂಜಯ್​​ - ಧನ್ಯತಾ

ಒಡೆಯರ್‌ ಮೂವೀಸ್ ಬ್ಯಾನರ್ ಅಡಿ ಅಪೇಕ್ಷಾ ಪವನ್ ಒಡೆಯರ್ ಹಾಗೂ ಪವನ್ ಒಡೆಯರ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಅರ್ನಾ ಕ್ರಿಯೇಟಿವ್ ನಿರ್ಮಾಣದಲ್ಲಿ ಸಾಥ್ ಕೊಡಲಿದ್ದಾರೆ.

ಇದನ್ನೂ ಓದಿ: ಹುಸಿಯಾಯ್ತು ಅಭಿಮಾನಿಗಳ ನಿರೀಕ್ಷೆ! 2024ರಲ್ಲಿ ಸಿನಿಮಾ ಮಾಡದ ಸ್ಯಾಂಡಲ್​​ವುಡ್​ ಸೂಪರ್​​ಸ್ಟಾರ್​ಗಳಿವರು

ಶಿವರಾಜ್​ಕುಮಾರ್​ ಮುಂದಿನ ಸಿನಿಮಾಗಳು: ಅರ್ಜುನ್ ಜನ್ಯ ನಿರ್ದೇಶನದ '45', ಹೇಮಂತ್ ರಾವ್ ಆ್ಯಕ್ಷನ್​ ಕಟ್​ ಹೇಳುತ್ತಿರುವ ಭೈರವನ‌ ಕೊನೆ ಪಾಠ, ತಮಿಳು ನಿರ್ದೇಶಕನ‌ ಜೊತೆ ಹೆಸರಿಡದ ಚಿತ್ರ, 'A for ಆನಂದ್​​' ಹೀಗೆ 8 ರಿಂದ 10 ಸಿನಿಮಾಗಳು ನಟನ ಕೈಯಲ್ಲಿದೆ. ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಅಮೆರಿಕಕ್ಕೆ ತೆರಳುತ್ತಿದ್ದಾರೆ‌. ಇದಾದ ಬಳಿಕ ಮುಂದಿನ ಚಿತ್ರಗಳ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.