ದಾವಣಗೆರೆ:ಬ್ಯಾಗ್ಗೆ ಹೆಚ್ಚುವರಿ ಹಣ ಪಡೆದ ಆರೋಪದ ಹಿನ್ನೆಲೆ ಶಾಪಿಂಗ್ ಮಳಿಗೆಗೆ ಇಲ್ಲಿನ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು 7000 ದಂಡ ವಿಧಿಸಿ ತೀರ್ಪು ನೀಡಿದೆ.
ಶಾಪಿಂಗ್ ಗೆ ಬರುವ ಗ್ರಾಹಕರ ಬಳಿ ಬ್ಯಾಗ್ಗೆ ಹೆಚ್ಚುವರಿ ಹತ್ತು ರೂಪಾಯಿ ಪಡೆದ ವಾಣಿಜ್ಯ ಮಳಿಗೆಗೆ(ವಾಣಿಜ್ಯ ಸಂಸ್ಥೆ) ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ 7000 ರೂಪಾಯಿ ದಂಡ ವಿಧಿಸಿದೆ. ವೃತ್ತಿಯಲ್ಲಿ ವಕೀಲ ಆರ್.ಬಸವರಾಜ್ ಅವರು ಗುಂಡಿ ವೃತ್ತದಲ್ಲಿರುವ ಬಳಿ ಇರುವ ರಿಟೈಲ್ ಬಟ್ಟೆ ಮಳಿಗೆಯಲ್ಲಿ ಅಕ್ಟೋಬರ್ 2023 ರಂದು 1499 ರೂ. ಪಾವತಿಸಿ ಪ್ಯಾಂಟ್ ವೊಂದನ್ನು ಖರೀದಿಸಿದ್ದರು.
ಆಗ ಲೈಫ್ ಸ್ಟೈಲ್ ಇಂಟರ್ ನ್ಯಾಷನಲ್ ವಾಣಿಜ್ಯ ಸಂಸ್ಥೆ ಪ್ಯಾಂಟ್‌ಗೆ ಬ್ಯಾಗ್ ನೀಡಲು ಹೆಚ್ಚುವರಿಯಾಗಿ 10 ರೂಪಾಯಿ ಪಡೆದಿತ್ತು. ಅದನ್ನು ಅಂದು ವಕೀಲ ಆರ್. ಬಸವರಾಜ್ ಅವರು ಖಂಡಿಸಿ ಸಿಬ್ಬಂದಿಗೆ ಪ್ರಶ್ನಿಸಿದ್ದರು. ಬಳಿಕ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿದ್ದರು.