ಕರ್ನಾಟಕ

karnataka

ರೈಲ್ವೆ ಪ್ರಯಾಣಿಕರಿಗೆ ಸಿಹಿ ಸುದ್ದಿ: ನೈರುತ್ಯ ರೈಲ್ವೆ ವಲಯದ ವಿಶೇಷ ರೈಲುಗಳ ಓಡಾಟ ಮುಂದುವರಿಕೆ - Special Trains for Onam

By ETV Bharat Karnataka Team

Published : Sep 11, 2024, 9:28 PM IST

ಓಣಂ ಹಬ್ಬದ ದಟ್ಟಣೆ ತಪ್ಪಿಸಲು ದಕ್ಷಿಣ ರೈಲ್ವೆ ವಿಶೇಷ ರೈಲುಗಳ ಓಡಾಟವನ್ನು ಮುಂದುವರೆಸುವುದಾಗಿ ಪ್ರಕಟಣೆ ಮೂಲಕ ತಿಳಿಸಿದೆ.

Continuation of Special Trains of South Western Railway Zone
ಓಣಂ ಹಬ್ಬದ ಸಮಯದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ಸರಿದೂಗಿಸಲು ಹೆಚ್ಚುವರಿ ರೈಲು (ETV Bharat)

ಹುಬ್ಬಳ್ಳಿ:ಓಣಂ ಹಬ್ಬದ ಸಮಯದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ಸರಿದೂಗಿಸಲು ರೈಲು ಸಂಖ್ಯೆ 06101/06102 ಎರ್ನಾಕುಲಂ-ಯಲಹಂಕ-ಎರ್ನಾಕುಲಂ ಗರೀಬ್ ರಥ ಟ್ರೈ-ವೀಕ್ಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ವಿಶೇಷ ರೈಲುಗಳ ಕಾರ್ಯಾಚರಣೆಯನ್ನು ಈಗಿರುವ ನಿಲುಗಡೆಗಳು, ಸಮಯಗಳು ಮತ್ತು ಬೋಗಿ ಸಂಯೋಜನೆಗಳೊಂದಿಗೆ ಮುಂದುವರಿಸಲಾಗುತ್ತಿದೆ ಎಂದು ದಕ್ಷಿಣ ರೈಲ್ವೆ ಹೇಳಿದೆ.

1. ರೈಲು ಸಂಖ್ಯೆ 06101 ಎರ್ನಾಕುಲಂ-ಯಲಹಂಕ ಟ್ರೈ-ವೀಕ್ಲಿ ಸೂಪರ್‌ಫಾಸ್ಟ್ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಸೆಪ್ಟೆಂಬರ್ 8 ರಿಂದ 18, 2024 ವರೆಗೆ (ಈ ರೈಲು ಭಾನುವಾರ, ಬುಧವಾರ ಮತ್ತು ಶುಕ್ರವಾರದಂದು ಕಾರ್ಯನಿರ್ವಹಿಸುತ್ತದೆ) ಐದು ಟ್ರಿಪ್‌ಗಳಿಗೆ ವಿಸ್ತರಿಸಲಾಗಿದೆ.


2. ರೈಲು ಸಂಖ್ಯೆ 06102 ಯಲಹಂಕ-ಎರ್ನಾಕುಲಂ ಟ್ರೈ-ವೀಕ್ಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ವಿಶೇಷ ರೈಲನ್ನು ಸೆಪ್ಟೆಂಬರ್ 9 ರಿಂದ 19, 2024 ವರೆಗೆ (ಸೋಮವಾರ, ಗುರುವಾರ ಮತ್ತು ಶನಿವಾರದಂದು ಕಾರ್ಯನಿರ್ವಹಿಸುತ್ತದೆ) ವಿಸ್ತರಿಸಲಾಗಿದೆ. ಇದು ಕೂಡ ಐದು ಟ್ರಿಪ್ ಇರುತ್ತದೆ.

ವಿಶೇಷ ಸೂಚನೆ: ಸೆಪ್ಟೆಂಬರ್ 11, 2024 ರಿಂದ ಎರ್ನಾಕುಲಂನಿಂದ ಪ್ರಾರಂಭವಾಗುವ ರೈಲಿನಲ್ಲಿ ಹವಾ ನಿಯಂತ್ರಿತ ಬೋಗಿಗಳಲ್ಲಿ ಬೆಡ್ ಶೀಟು (ಲಿನಿನ್) ಗಳ ಸೌಲಭ್ಯ ಕೂಡಾ ಇರುತ್ತದೆ ಎಂದು ರೈಲ್ವೆ ತಿಳಿಸಿದೆ.

ವಿಶೇಷ ರೈಲು ಸೇವೆಗಳ ವಿಸ್ತರಣೆ:ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ-ಹೊಸಪೇಟೆ ನಿಲ್ದಾಣಗಳ ನಡುವೆ ಬಳ್ಳಾರಿ ಬೈಪಾಸ್ ಮಾರ್ಗದ ಮೂಲಕ ಸಂಚರಿಸುವ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸೇವೆಯನ್ನು ಅಸ್ತಿತ್ವದಲ್ಲಿರುವ ಸಮಯ, ನಿಲುಗಡೆಗಳು ಮತ್ತು ಕೋಚ್ ಸಂಯೋಜನೆಗಳೊಂದಿಗೆ ವಿಸ್ತರಿಸಲಾಗುತ್ತಿದೆ. ಅವುಗಳ ಮಾಹಿತಿ ಈ ಕೆಳಗಿನಂತಿವೆ.


1. ರೈಲು ಸಂಖ್ಯೆ 06243 ಕೆಎಸ್‌ಆರ್ ಬೆಂಗಳೂರು-ಹೊಸಪೇಟೆ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಈ ಹಿಂದೆ ಸೆಪ್ಟೆಂಬರ್ 13 2024 ರವರೆಗೆ ಓಡಿಸಲಾಗುತ್ತದೆ ಎಂದು ಸೂಚಿಸಲಾಗಿತ್ತು, ಇದೀಗ ಮುಂದಿನ ಆದೇಶ ಬರುವವರೆಗೆ ಸೆಪ್ಟೆಂಬರ್ 14, 2024 ರಿಂದ ವಿಸ್ತರಿಸಲಾಗುವುದು.
2. ರೈಲು ಸಂಖ್ಯೆ. 06244 ಹೊಸಪೇಟೆ - ಕೆಎಸ್‌ಆರ್ ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಈ ಹಿಂದೆ ಸೆಪ್ಟೆಂಬರ್ ಸೆಪ್ಟೆಂಬರ್ 14, 2024 ರವರೆಗೆ ಚಲಿಸುವಂತೆ ಸೂಚಿಸಲಾಗಿತ್ತು, ಇದೀಗ ಮುಂದಿನ ಸಲಹೆ ಬರುವವರೆಗೆ ಸೆಪ್ಟೆಂಬರ್ 15, 2024 ರಿಂದ ವಿಸ್ತರಿಸಲಾಗುವುದು ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.‌ಮಂಜುನಾಥ ಕನಮಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನು ಓದಿ:ರಾಜ್ಯದಲ್ಲಿ ಇಳಿಕೆಯಾಯ್ತು ರಸ್ತೆ ಅಪಘಾತದಲ್ಲಿ ಸಾಯುವವರ ಪ್ರಮಾಣ: ಇಲ್ಲಿದೆ ಅಂಕಿ- ಅಂಶಗಳು - road accidents deaths

ABOUT THE AUTHOR

...view details