ಕರ್ನಾಟಕ

karnataka

ETV Bharat / state

ಭರತ್ ಬೊಮ್ಮಾಯಿ ಸಿಎಂ ಆಗುವುದೇ ಬೊಮ್ಮಾಯಿ ಕುಟುಂಬದ ಶಾಶ್ವತ ಗ್ಯಾರಂಟಿ : ಯಾಸೀರ್ ​ಖಾನ್ ಪಠಾಣ್

ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ​ಖಾನ್ ಪಠಾಣ್ ಅವರು ಸಂಸದ ಬಸವರಾಜ ಬೊಮ್ಮಾಯಿ ಅವರ ಶಾಶ್ವತ ಗ್ಯಾರಂಟಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

yasir-khan-pathan
ಯಾಸೀರ್ ​ಖಾನ್ ಪಠಾಣ್ (ETV Bharat)

By ETV Bharat Karnataka Team

Published : Oct 27, 2024, 10:31 PM IST

Updated : Oct 27, 2024, 10:42 PM IST

ಹಾವೇರಿ : ಅಜ್ಜ ಸಿಎಂ ಆಗಿದ್ದು, ತಂದೆ ಸಿಎಂ ಆಗಿದ್ದು, ಮುಂದೆ ಭರತ್ ಬೊಮ್ಮಾಯಿ ಸಿಎಂ ಆಗುವುದೇ ಬೊಮ್ಮಾಯಿ ಕುಟುಂಬದ ಶಾಶ್ವತ ಗ್ಯಾರಂಟಿ ಎಂದು ಹಾವೇರಿ ಜಿಲ್ಲಾ ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ​ಖಾನ್ ಪಠಾಣ್ ಅವರು ಬಸವರಾಜ ಬೊಮ್ಮಾಯಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಹಾವೇರಿ ಜಿಲ್ಲೆ ಶಿಗ್ಗಾವಿ ಕೇತ್ರದ ಗಂಜಿಗಟ್ಟಿ ಗ್ರಾಮದಲ್ಲಿ ಮತಯಾಚನೆ ಮಾಡಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ನೀಡಿರುವುದು ಟೆಂಪರವರಿ ಗ್ಯಾರಂಟಿ. ನಾವು ನೀಡಿದ್ದು ಶಾಶ್ವತ ಗ್ಯಾರಂಟಿ ಎಂಬ ಬೊಮ್ಮಾಯಿ ಹೇಳಿಕೆಗೆ ಯಾಸೀರ್​ ಖಾನ್ ಪ್ರತಿಕ್ರಿಯಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ​ಖಾನ್ ಪಠಾಣ್ ಮಾತನಾಡಿದರು (ETV Bharat)

ರೋಡ್ ನೋಡಿಕೊಂಡೇ ಓಡಾಡಬೇಕಿದೆ : ಬಸವರಾಜ ಬೊಮ್ಮಾಯಿ ಶಾಸಕರಾಗಿದ್ದ ಕಳೆದ ಒಂದೂವರೆ ವರ್ಷ ಯಾವುದೇ ಕೆಲಸ ಮಾಡಿಲ್ಲ. ಕ್ಷೇತ್ರದಲ್ಲಿ ಒಮ್ಮೆ‌ ಓಡಾಡಿ ಬನ್ನಿ, ತಲೆ ಎತ್ತಿಕೊಂಡು ಓಡಾಡಲು ಆಗಲ್ಲ, ರೋಡ್ ಎಲ್ಲಾ ಹದಗೆಟ್ಟಿವೆ. ಬೀಳ್ತೀವಿ ಎಂಬ ಭಯದಿಂದ ರೋಡ್ ನೋಡಿಕೊಂಡೇ ಓಡಾಡಬೇಕಿದೆ ಎಂದು ವಾಗ್ದಾಳಿ ನಡೆಸಿದರು.

ನನಗೆ ಯೋಗ ಕೂಡಿ ಬಂದ ಕಾರಣ ಟಿಕೆಟ್ ಸಿಕ್ಕಿದೆ:ಎಲ್ಲಾ ಕಡೆ ನಮಗೆ ಉತ್ತಮ‌ ಪ್ರತಿಕ್ರಿಯೆ ಸಿಗುತ್ತಿದೆ. ಜನ ನನಗೆ ಆಶೀರ್ವಾದ ಮಾಡಲಿದ್ದಾರೆ. ನಮ್ಮಲ್ಲಿ ಯಾವುದೇ ಬಂಡಾಯ ಇಲ್ಲ. ಖಾದ್ರಿ ಸೇರಿದಂತೆ ಎಲ್ಲ ಟಿಕೆಟ್ ಆಕಾಂಕ್ಷಿಗಳಿಗೆ ಯೋಗ್ಯತೆ ಇತ್ತು. ಆದರೆ, ಯೋಗ್ಯತೆ ಜೊತೆಗೆ ನನಗೆ ಯೋಗ ಬಂದಿದೆ. ಯೋಗ್ಯತೆ ಇದ್ರೂ ಯೋಗ ಎಲ್ಲರಿಗೂ ಬರಲ್ಲ. ನನಗೆ ಯೋಗ ಕೂಡಿ ಬಂದ ಕಾರಣ ಟಿಕೆಟ್ ಸಿಕ್ಕಿದೆ ಎಂದು ತಿಳಿಸಿದರು. ಬಂಡಾಯದ ನಡುವೆಯೂ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ಭರ್ಜರಿ ಮತಯಾಚನೆ ನಡೆಸಿದರು.

ಇದನ್ನೂ ಓದಿ :ಯಾಸೀರ್ ಖಾನ್ ರೌಡಿಶೀಟರ್ ಎಂದಿರುವುದು ಕಾಂಗ್ರೆಸ್​ನವರೇ: ಬಸವರಾಜ ಬೊಮ್ಮಾಯಿ

Last Updated : Oct 27, 2024, 10:42 PM IST

ABOUT THE AUTHOR

...view details