ಕರ್ನಾಟಕ

karnataka

ETV Bharat / state

ಚಾಮರಾಜನಗರ: ಅಪ್ಪನ ಕ್ಷೇತ್ರದಲ್ಲಿ ಮಗನಿಗೆ ಅಲ್ಪ ಲೀಡ್ - Sunil Bose - SUNIL BOSE

ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಸುನೀಲ್ ಬೋಸ್​ ಗೆಲುವು ಸಾಧಿಸಿದ್ದಾರೆ.

congress-candidate-sunil-bose
ಕಾಂಗ್ರೆಸ್​ ಅಭ್ಯರ್ಥಿ ಸುನೀಲ್ ಬೋಸ್ (ETV Bharat)

By ETV Bharat Karnataka Team

Published : Jun 4, 2024, 9:40 PM IST

ಕಾಂಗ್ರೆಸ್​ ಅಭ್ಯರ್ಥಿ ಸುನೀಲ್ ಬೋಸ್ (ETV Bharat)

ಚಾಮರಾಜನಗರ:ಲೋಕಸಭೆ ಚುನಾವಣೆಯ ಮತ ಎಣಿಕೆಯಆರಂಭದಿಂದಲೂ ಭರ್ಜರಿ ಮುನ್ನಡೆ ಸಾಧಿಸಿದ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಅಂತಿಮವಾಗಿ ಜಯಭೇರಿ ಬಾರಿಸಿದ್ದಾರೆ.

ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಚಾಮರಾಜನಗರ, ಗುಂಡ್ಲುಪೇಟೆ, ಹನೂರು ಹಾಗೂ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ಮತ್ತು ಮೈಸೂರು ಜಿಲ್ಲೆಯ ಟಿ‌.ನರಸೀಪುರ, ವರುಣ, ನಂಜನಗೂಡು ಹಾಗೂ ಹೆಚ್.ಡಿ.ಕೋಟೆ ಬರಲಿದ್ದು, ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಕೈ ಅಭ್ಯರ್ಥಿಗೆ ಲೀಡ್ ತಂದುಕೊಟ್ಟರೆ, ಟಿ.ನರಸೀಪುರದಲ್ಲಿ ಮಾತ್ರ ಅಲ್ಪ ಲೀಡ್ ಪಡೆದಿದ್ದಾರೆ.

ಟಿ.ನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ 1ನೇ ಸುತ್ತಿನಿಂದ 7ನೇ ಸುತ್ತಿನ ತನಕವೂ ನಿರಂತರ ಮುನ್ನಡೆ ಹೊಂದಿದ್ದರು. ಅದಾದ ಬಳಿಕವೂ, ಸುನೀಲ್ ಬೋಸ್ 76,722 ಮತ ಪಡೆದರೆ, ಬಿಜೆಪಿ ಅಭ್ಯರ್ಥಿ ಬಾಲರಾಜು 73,801 ಮತಗಳನ್ನು ಪಡೆದುಕೊಂಡರು. ಹೀಗಾಗಿ ಇಲ್ಲಿ 2921 ಮತಗಳ ಲೀಡ್ ಪಡೆದಿದ್ದಾರೆ. ಲಕ್ಷ ಮತಗಳ ಅಂತರದಲ್ಲಿ ಗೆದ್ದರೂ ಸುನೀಲ್ ಬೋಸ್ ಅವರಿಗೆ ತವರಿನಲ್ಲೇ ಅಲ್ಪ ಲೀಡ್ ಬಂದಿದ್ದರಿಂದ ಮುಜುಗರ ಅನುಭವಿಸಿದ್ದಾರೆ‌.

ಸಿಎಂ ಕ್ಷೇತ್ರದಲ್ಲಿ 33 ಸಾವಿರ ಲೀಡ್:ಸಿಎಂ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ವಿಧಾನಸಭಾ ಕ್ಷೇತ್ರದಲ್ಲಿ ಆರಂಭಿಕವಾಗಿ ಕೈ-ಕಮಲದ ನಡುವೆ ಟೈಟ್ ಫೈಟ್ ನಡೆದರೂ ಅಂತಿಮವಾಗಿ ಕಾಂಗ್ರೆಸ್ ಅಭ್ಯರ್ಥಿಗೆ 33,352 ಲೀಡ್ ಸಿಕ್ಕಿದೆ‌. ಬಿಜೆಪಿ ಅಭ್ಯರ್ಥಿ 73,852 ಮತ ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ 1,07,203 ಮತ ಪಡೆದುಕೊಂಡರು.

ಹೆಚ್‌‌.ಡಿ.ಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಬಾಲರಾಜ್​ಗೆ 72,997 ಮತಗಳು ಬಂದಿದ್ದು, ಸುನೀಲ್ ಬೋಸ್​ಗೆ 96,735 ಮತ ಸಿಕ್ಕಿದ್ದು 23,738 ಲೀಡ್ ದೊರೆತಿದೆ. ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ 20,578 ಲೀಡ್, ಜೆಡಿಎಸ್ ಶಾಸಕ ಇರುವ ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಕೈಗೆ 36,957 ಲೀಡ್, ಕೊಳ್ಳೇಗಾಲದಲ್ಲಿ 33,016 ಲೀಡ್, ಗುಂಡ್ಲುಪೇಟೆಯಲ್ಲಿ 17,982 ಲೀಡ್ ಹಾಗೂ ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ 20,326 ಮತಗಳು ಲೀಡ್ ಕೊಟ್ಟಿವೆ.

8 ವಿಧಾನಸಭಾ ಕ್ಷೇತ್ರಗಳಲ್ಲಿ ಟಿ.ನರಸೀಪುರ ಹೊರತುಪಡಿಸಿ ಉಳಿದೆಲ್ಲೆಡೆ ಭರ್ಜರಿ ಮತಗಳು ಕೈ ಬುಟ್ಟಿಗೆ ಬಂದಿವೆ. ಇವಿಎಂ ಮತ ಎಣಿಕೆ ಅಂಕಿ ಅಂಶಗಳು ಇದಾಗಿದ್ದು, ಅಂಚೆ ಮತ ಪತ್ರದ ಲೆಕ್ಕ ಇನ್ನಷ್ಟೇ ತಿಳಿದುಬರಬೇಕಿದೆ‌. ಕಾಂಗ್ರೆಸ್​ನ ಸುನೀಲ್​ ಬೋಸ್ ಸಮೀಪದ ಪ್ರತಿಸ್ಪರ್ಧಿ ಬಾಲರಾಜು ವಿರುದ್ಧ 1,88,943 ಮತಗಳ ಅಂತರದಿಂದ ಜಯಗಳಿಸಿದ್ದಾರೆ‌.

ಸುನೀಲ್ ಬೋಸ್ ಪ್ರತಿಕ್ರಿಯೆ: ಎಲ್ಲಾ ಕ್ಷೇತ್ರದಲ್ಲೂ ಲೀಡ್ ಬಂದು ತವರಿನಲ್ಲೇ ಕಡಿಮೆ ಲೀಡ್ ಬಂದಿರುವ ಕುರಿತು ಸುನೀಲ್ ಬೋಸ್ ಮಾತನಾಡಿ, ಎಲ್ಲಾ 8 ಕ್ಷೇತ್ರಗಳಲ್ಲೂ ತನ್ನದೇ ಆದ ರಾಜಕೀಯ ಕಾರಣಗಳಿರುತ್ತವೆ. ಕಾಂಗ್ರೆಸ್ ಕಾರ್ಯಕರ್ತರಿಗೆ ಹುರುಪು ತುಂಬಿ ಮುಂದಿನ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಉತ್ತಮ ಸಾಧನೆ ಮಾಡುವಂತೆ ಮಾಡುತ್ತೇನೆ ಎಂದರು.

ವಿರೋಧಿಗಳು ಗೋ ಬ್ಯಾಕ್ ಎಂದು ಘೋಷಣೆ ಕೂಗಿಸಿದ್ದರು‌. ಆದರೆ, ಮತದಾರರು ಕಮ್ ಇನ್ ಎಂದಿದ್ದಾರೆ. ಶೀಘ್ರದಲ್ಲೇ ಚಾಮರಾಜನಗರದಲ್ಲಿ ಮನೆ ಮಾಡುತ್ತೇನೆ. ಕಾಂಗ್ರೆಸ್​ನ ಶಾಸಕರು, ಮುಖಂಡರು ತಾವೇ ಚುನಾವಣೆಗೆ ನಿಂತತ್ತೆ ಓಡಾಡಿ ಈ ಗೆಲುವು ತಂದುಕೊಟ್ಟಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ:ಚಾಮರಾಜನಗರ ಲೋಕಸಭಾ ಕ್ಷೇತ್ರ: ಕಾಂಗ್ರೆಸ್​ ಅಭ್ಯರ್ಥಿ ಸುನಿಲ್ ಬೋಸ್​​ ಗೆಲುವು - Sunil Bose

ABOUT THE AUTHOR

...view details