ಬಾಗಲಕೋಟೆ:ವೀಣಾ ಕಾಶಪ್ಪನವರು ನಮ್ಮ ಕಾಂಗ್ರೆಸ್ ಮನೆಯ ಒಂದು ಭಾಗ, ಅವರ ಮನೆಯಲ್ಲಿ ನಮ್ಮ ಶಾಸಕರು ಇದ್ದಾರೆ. ಪಕ್ಷದ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಲೋಕಸಭಾ ಚುನಾವಣೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಂಯುಕ್ತಾ ಪಾಟೀಲ ತಿಳಿಸಿದ್ದಾರೆ.
ಮುಧೋಳ ಮತಕ್ಷೇತ್ರದ ರನ್ನ ಬೆಳಗಲಿ ಗ್ರಾಮದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಕ್ಷೇತ್ರದಲ್ಲಿ ನಿರಂತರ ಪ್ರಚಾರ ಮಾಡುತ್ತಿದ್ದೇನೆ. ಪ್ರತಿಯೊಂದು ಮತದಾರರ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದೇವೆ. ಕಾಂಗ್ರೆಸ್ ಕಾರ್ಯಕರ್ತರು ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುತ್ತಿದ್ದಾರೆ. ಜನರ ಸೇವೆ ಮಾಡೋದು ನನ್ನ ಮೊದಲ ಆದ್ಯತೆ. ನಾನೊಬ್ಬಳು ಬಹಳ ಎಜ್ಯುಕೇಟೆಡ್ ಮಹಿಳೆ ಇದ್ದೀನಿ. ನನಗೊಂದು ಅವಕಾಶ ಮಾಡಿಕೊಟ್ರೆ ಸರ್ವಾಂಗೀಣ ಅಭಿವೃದ್ಧಿ ಮಾಡುತ್ತೇನೆ. ಜಿಲ್ಲೆಯಲ್ಲಿ ಬಹಳಷ್ಟು ಕೆಲಸ ಮಾಡೋದು ಬಾಕಿ ಇದೆ ಎಂದು ಭರವಸೆ ನೀಡಿದರು.
ಪಕ್ಷ ನನಗೆ ಜವಾಬ್ದಾರಿ ಕೊಟ್ಟಿದೆ. ಆ ಜವಾಬ್ದಾರಿ ಏನು ಅಂದರೆ. ಪಕ್ಷದ ಬಾವುಟ ಹಾರಿಸಬೇಕಾಗಿದೆ. ಆ ಜವಾಬ್ದಾರಿ ನನ್ನೊಬ್ಬಳದೇ ಅಲ್ಲ, ಇಡೀ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಜವಾಬ್ದಾರಿಯಾಗಿದೆ ಎಂದ ಸಂಯುಕ್ತ ಪಾಟೀಲ, ಎಲ್ಲ ಜನರಲ್ಲೂ ವಿನಂತಿ ಮಾಡುತ್ತೇನೆ. ನನಗೊಂದು ಅವಕಾಶ ಕೊಡಿ. ನಾನು ಬಹಳ ವರ್ಕರ್ ಆಗಿದ್ದೀನಿ. ವಿಜಯಪುರ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಕೆಲಸ ಮಾಡಿದ್ದೀನಿ. ಇಡೀ ಕರ್ನಾಟಕ ರಾಜ್ಯದಲ್ಲಿ ಯೂತ್ ಕಾಂಗ್ರೆಸ್ ಚುನಾವಣೆ ಅತಿ ಹೆಚ್ಚು ಮತ ಪಡೆದ ಎರಡನೇಯವಳು ನಾನು ಎಂದರು.