ಕರ್ನಾಟಕ

karnataka

ETV Bharat / state

ಚುನಾವಣೆ ಸಮಯದಲ್ಲಿ ಹಣ ಪಡೆದಿರುವ ಊಹಾಪೋಹ ಸತ್ಯಕ್ಕೆ ದೂರು: ವೀಣಾ ಕಾಶಪ್ಪನವರ ಸ್ಪಷ್ಟನೆ - Veena Kashappanavar clarification

ಟಿಕೆಟ್ ಸಿಗದ ಹಿನ್ನಲೆ ಚುನಾವಣೆ ಸಮಯದಲ್ಲಿ ಮೌನ ವಹಿಸಿರುವುದಕ್ಕೆ ದುಡ್ಡು ತೆಗೆದುಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನಲೆ ಕಾಂಗ್ರೆಸ್​ ಮುಖಂಡೆ ವೀಣಾ ಕಾಶಪ್ಪನವರ ಸ್ಪಷ್ಟನೆ ನೀಡಿದ್ದಾರೆ.

Veena Kashappanavar  Bagalkote  Veena Kashappanavar clarification
ವೀಣಾ ಕಾಶಪ್ಪನವರ (ETV Bharat)

By ETV Bharat Karnataka Team

Published : Jul 2, 2024, 8:49 PM IST

ಕಾಂಗ್ರೆಸ್​ ಮುಖಂಡೆ ವೀಣಾ ಕಾಶಪ್ಪನವರ ಮಾತನಾಡಿದರು. (ETV Bharat)

ಬಾಗಲಕೋಟೆ:''ಚುನಾವಣೆ ಸಮಯದಲ್ಲಿ ಹಣ ಪಡೆದುಕೊಂಡಿದ್ದೇನೆ ಎಂದು ಊಹಾಪೋಹಗಳು ಕೇಳಿ ಬಂದಿದ್ದು, ಸತ್ಯಕ್ಕೆ ದೂರುವಾಗಿರುವ ಸಂಗತಿ'' ಎಂದು ಕಾಂಗ್ರೆಸ್ ಮುಖಂಡೆ ವೀಣಾ ಕಾಶಪ್ಪನವರ ಸ್ಪಷ್ಟನೆ ನೀಡಿದ್ದಾರೆ.

ನವನಗರದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮ ಪತ್ರಿನಿಧಿಗಳೊಂದಿಗೆ ಮಾತನಾಡಿ, ಟಿಕೆಟ್ ಸಿಗದ ಹಿನ್ನೆಲೆ ಚುನಾವಣೆ ಸಮಯದಲ್ಲಿ ಮೌನ ವಹಿಸಿರುವುದಕ್ಕೆ ದುಡ್ಡು ತೆಗೆದುಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆ ಸ್ಪಷ್ಟನೆ ನೀಡಿದ ವೀಣಾ ಕಾಶಪ್ಪನವರ ಅವರು, ''ಹಣ ತೆಗೆದುಕೊಂಡಿದ್ದರೆ, ಪ್ರತಿನಿತ್ಯ ಪ್ರಚಾರಕ್ಕೆ ಬಂದು ಭಾಗವಹಿಸುತ್ತಿದ್ದೆ. ಆದರೆ, ಪಕ್ಷದ ಹೈಕಮಾಂಡ್ ಕೊಪ್ಪಳ ಲೋಕಸಭಾ ಚುನಾವಣೆ ಉಸ್ತುವಾರಿ ಹಾಕಿರುವ ಹಿನ್ನೆಲೆಯಲ್ಲಿ ಕೊಪ್ಪಳದಲ್ಲಿ ಪ್ರಚಾರ ಮಾಡಿ, ಪಕ್ಷ ಗೆಲ್ಲಿಸುವ ಕಾರ್ಯ ಮಾಡಿದ್ದೇನೆ. ಬಾಗಲಕೋಟೆ ಕ್ಷೇತ್ರದಲ್ಲಿ ಪ್ರಚಾರಕ್ಕೆ ಆಹ್ವಾನ ಮಾಡಿರಲಿಲ್ಲ. ಕೊಪ್ಪಳದಲ್ಲಿ ಉಸ್ತುವಾರಿ ಹಾಕಿದ್ದರಿಂದ ಅಲ್ಲಿ ಹೋಗಿ ಪ್ರಚಾರ ಮಾಡಿದ್ದೇನೆ'' ಎಂದರು.

''ಪೈಟರ್ ಯಾವಾಗಲೂ ಸೋಲಲ್ಲ. ಸೋಲು ಒಪ್ಪಿಕೊಳ್ಳುವುದೂ ಸಾಧ್ಯವಿಲ್ಲ. ಮತ್ತೆ ಲೋಕಸಭಾ ಇಲ್ಲವೇ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದು ಖಚಿತ'' ಎಂದು ಹೇಳುವ ಮೂಲಕ ಮತ್ತೆ ರಾಜಕೀಯ ಅಖಾಡದಲ್ಲಿರುವುದು ಗ್ಯಾರಂಟಿ ಎಂದು ಸ್ಪಷ್ಟಪಡಿಸಿದರು.

''ನನಗೆ ಚುನಾವಣೆ ಟಿಕೆಟ್ ಸಿಗದ ಹಿನ್ನೆಲೆ, ಅವರ ಜೀವನ ರಾಜಕೀಯ ಮುಗಿಯಿತು, ಮನೆ ಬಿಟ್ಟು ಹೂರಗೆ ಬರಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ಈಗ ಮತ್ತೆ ಹೊಸ ಅಧ್ಯಾಯ ಪ್ರಾರಂಭವಾಗಿದ್ದು, ವಿವಿಕೆ ಫೌಂಡೇಶನ್ ವತಿಯಿಂದ ಹೊಸ ಹೊಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಶ್ರಾವಣ ಮಾಸದಲ್ಲಿ ಚಿಕ್ಕಮಕ್ಕಳಿಂದ ಹಿಡಿದು ಎಲ್ಲರಿಗೂ ವಚನ ಪಠಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ನವನಗರದ ಸೆಕ್ಟರ್ ನಂಬರ್ 63 ರಲ್ಲಿ ಗೃಹ ಕಚೇರಿಯಲ್ಲಿ ಪ್ರತಿ 15 ದಿನಕ್ಕೊಮ್ಮೆ ಜನಸಂಪರ್ಕ ಸಭೆ ಮಾಡಲಾಗುತ್ತದೆ'' ಎಂದು ತಿಳಿಸಿದರು.

''ಈ ಜಿಲ್ಲೆಯ ಮನೆ ಮಗಳು, ಸೂಸೆಯಾಗಿ, ಜಿಲ್ಲೆಯ ಜನತೆೆ ಕೈ ಬಿಡಲ್ಲ. ನನಗೆ ಹಣ ಮುಖ್ಯವಲ್ಲ, ಜನರ ಪ್ರೀತಿ, ವಿಶ್ವಾಸ ಮುಖ್ಯ'' ಎಂದ ಅವರು, ಮುಂದಿನ ವಿಧಾನಸಭೆಗೆ ಬಾಗಲಕೋಟೆ ಮತ ಕ್ಷೇತ್ರದ ಇಲ್ಲವೇ ಬೇರೆ ಮತಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಅಭಿಲಾಶೆ ಇದೆ. ನಮ್ಮ ಪಕ್ಷದ ಹೈಕಮಾಂಡ‌್ ಯಾವ ಕ್ಷೇತ್ರ ಕೂಡುತ್ತದೆ. ಆ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತೇನೆ'' ಎಂದರು.

ಇದನ್ನೂ ಓದಿ:ನಾಳೆ ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ; ಸಿಎಂಗೆ ಸಪ್ತ ಪ್ರಶ್ನೆಗಳ ಸವಾಲೆಸೆದ ಪ್ರತಿಪಕ್ಷ ನಾಯಕ ಆರ್ ಅಶೋಕ್ - LOP R ASHOK ON MUDA SCAM

ABOUT THE AUTHOR

...view details