ಕರ್ನಾಟಕ

karnataka

ETV Bharat / state

ಸಹಕಾರ ಸಂಘಗಳ ತಿದ್ದುಪಡಿ ಕಾಯ್ದೆಗೆ ವಿರೋಧ, ಪರಿಶೀಲನಾ ಸಮಿತಿಗೆ ಒಪ್ಪಿಸಲು ನಿರ್ಣಯ

ವಿಧಾನ ಪರಿಷತ್‌ನಲ್ಲಿ ಸಹಕಾರ ಸಂಘಗಳ ತಿದ್ದುಪಡಿ ವಿಧೇಯಕಕ್ಕೆ ವಿರೋಧ ವ್ಯಕ್ತವಾಗಿದ್ದು, ಪರಿಶೀಲನಾ ಸಮಿತಿಗೆ ಒಪ್ಪಿಸಲು ನಿರ್ಣಯ ತೆಗೆದುಕೊಳ್ಳಲಾಗಿದೆ.

Co operative Societies Amendment  Upper House  ಸಹಕಾರ ಸಂಘಗಳ ತಿದ್ದುಪಡಿ ಕಾಯ್ದೆ  ಮೇಲ್ಮನೆಯಲ್ಲಿ ಅಂಗೀಕಾರ
ಪರಿಶೀಲನಾ ಸಮಿತಿಗೆ ಒಪ್ಪಿಸಲು ನಿರ್ಣಯ

By ETV Bharat Karnataka Team

Published : Feb 28, 2024, 6:42 PM IST

ಬೆಂಗಳೂರು:ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಆರೋಪ ಸಂಬಂಧ ‌ಭೋಜನ ವಿರಾಮದ ಬಳಿಕ ಪರಿಷತ್ ಸದಸ್ಯರು ಸದನದ ಬಾವಿಗಿಳಿದು ಧರಣಿ ಮುಂದುವರೆಸಿದರು. ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಭಾರತ್ ಮಾತ್ ಕೀ, ವಂದೇ ಮಾತರಂ, ಜೈಶ್ರೀರಾಮ್ ಘೋಷಣೆ ಮೊಳಗಿಸಿದರು. ವಿಪಕ್ಷ ಸದಸ್ಯರ ಧರಣಿಯ ನಡುವೆಯೂ ಕರ್ನಾಟಕ ವಿಧಾನಮಂಡಲ (ಅನರ್ಹತಾ ನಿವಾರಣಾ) ತಿದ್ದುಪಡಿ ವಿಧೇಯಕ ಹಾಗೂ ಕರ್ನಾಟಕ ಭೂ ಕಂದಾಯ ವಿಧೇಯಕಗಳು ಅಂಗೀಕಾರಗೊಂಡವು.

ಕರ್ನಾಟಕ ಸಹಕಾರ ತಿದ್ದುಪಡಿ ಕಾಯ್ದೆಗೆ ವಿರೋಧ:ತಿದ್ದುಪಡಿ ಸಂಬಂಧ ವಿಧೇಯಕ ಮಂಡನೆಗೆ ಮುನ್ನವೇ ವಿಪಕ್ಷನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ವಿರೋಧ ವ್ಯಕ್ತಪಡಿಸಿ ಪರಿಶೀಲನಾ ಸಮಿತಿಗೆ ಒಳಪಡಿಸಬೇಕೆಂದು‌ ಆಗ್ರಹಿಸಿದರು. ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಮಾತನಾಡಿ, ತಳ ಸಮುದಾಯದವರಿಗೂ ಅವಕಾಶ ಸಿಗುವ ಉದ್ದೇಶದಿಂದ ಸಹಕಾರ ಸಂಘಗಳ ಮಂಡಳಿಗೆ ಮೂವರನ್ನ‌ ನಾಮನಿರ್ದೇಶಿಸಬಹುದು. ಅಲ್ಲದೆ ಸಂಘಗಳಿಗೆ ಚುನಾವಣಾ‌ ಪ್ರಾಧಿಕಾರ ಖರ್ಚು, ವೆಚ್ಚ ತಗ್ಗಿಸಲು ನಿಬಂಧಕರ‌ ಮಟ್ಟದಲ್ಲಿ ಚುನಾವಣೆ ನಡೆಸಲು ಕಾಯ್ದೆಗೆ ತಿದ್ದುಪಡಿ ತರಲಾಗಿದೆ ಎಂದರು.‌

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೋಟಾ, ಸಹಕಾರ ಸಂಘಗಳ ಚುನಾವಣೆಯನ್ನ ನಡೆಸಲು ಚುನಾವಣಾ ಪ್ರಾಧಿಕಾರ ರದ್ದುಗೊಳಿಸಿ ನಿಬಂಧಕರ ಮಟ್ಟದಲ್ಲಿ ಚುನಾವಣೆ ನಡೆಸುವುದು ಪಾರದರ್ಶಕತೆ ತರಲು ಹೇಗೆ ಸಾಧ್ಯ ಎಂದು ಆತಂಕ ವ್ಯಕ್ತಪಡಿಸಿದರು. ಹೀಗಾಗಿ ತಿದ್ದುಪಡಿ ಕಾಯ್ದೆಯನ್ನ ವಿರೋಧಿಸಿ ಪರಿಶೀಲನಾ ಸಮಿತಿಗೆ ಒಪ್ಪಿಸಬೇಕೆಂದು ಆಗ್ರಹಿಸಿದರು. ಇದಕ್ಕೆ ಸಚಿವ ರಾಜಣ್ಣ ಒಪ್ಪಿಕೊಂಡಿದ್ದರಿಂದ ಪರಿಶೀಲನಾ ಸಮಿತಿಗೆ ಒಪ್ಪಿಸಲು ಸದನ ನಿರ್ಣಯಿಸಿತು.

ಇದನ್ನೂ ಓದಿ:ವಿಧಾನಸಭೆಯಲ್ಲೂ ಪ್ರತಿಧ್ವನಿಸಿದ ಪಾಕಿಸ್ತಾನದ ಪರ ಘೋಷಣೆ ಆರೋಪ ಪ್ರಕರಣ: 10 ನಿಮಿಷ ಸದನ ಮುಂದೂಡಿಕೆ

ABOUT THE AUTHOR

...view details