ಬೆಂಗಳೂರು:ವಿಧಾನಸಭೆಯ 3 ಕ್ಷೇತ್ರಗಳಿಗೆ ನಡೆಯುವ ಉಪ ಚುನಾವಣೆ, ಜಾತಿ ಗಣತಿ ಹಾಗೂ ಮೀಸಲಾತಿ ಮತ್ತಿತರ ವಿಚಾರಗಳ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಸಚಿವರ ಸಭೆ ಕರೆದಿದ್ದಾರೆ.
ಸಂಜೆ 6 ಗಂಟೆಗೆ ಮುಖ್ಯಮಂತ್ರಿಯವರ ಅಧಿಕೃತ ನಿವಾಸ ಕಾವೇರಿಯಲ್ಲಿ ಸಭೆ ನಡೆಯಲಿದೆ. ಉಪ ಚುನಾವಣೆ ತಯಾರಿ, ಆಕಾಂಕ್ಷಿಗಳು, ಪ್ರಸಕ್ತ ರಾಜಕೀಯ ವಿದ್ಯಮಾನ, ಮುಡಾ ಪ್ರಕರಣ, ಇ.ಡಿ. ತನಿಖೆ ಸಂಬಂಧ ಚರ್ಚೆ ನಡೆಯಲಿದೆ. ಪಂಚಮಸಾಲಿ ಮೀಸಲಾತಿ, ವಾಲ್ಮೀಕಿ ಪ್ರಕರಣಗಳ ಬಗ್ಗೆಯೂ ಚರ್ಚಿಸುವ ಸಾಧ್ಯತೆ ಇದೆ.
ಪ್ರಮುಖವಾಗಿ ಜಾತಿ ಗಣತಿ, ಒಳ ಮೀಸಲಾತಿ ಸಂಬಂಧ ಸಚಿವರ ಜೊತೆ ಚರ್ಚೆ ನಡೆಯಲಿದೆ. ಜಾತಿ ಗಣತಿ ಸಂಬಂಧ ಈಗಾಗಲೇ ಆಡಳಿತಾರೂಢ ಪಕ್ಷದಲ್ಲೇ ಅಪಸ್ವರ ಎದ್ದಿದೆ. ಒಕ್ಕಲಿಗ ಹಾಗೂ ಲಿಂಗಾಯತ ಶಾಸಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರಲ್ಲಿನ ಗೊಂದಲ ಹಾಗೂ ಆತಂಕ ನಿವಾರಿಸಲು ಸಿಎಂ ಯತ್ನಿಸಲಿದ್ದಾರೆ.